ಟ್ರಾಪ್​ಗೆ ಒಳಗಾಗಬೇಡಿ.. ನೇರವಾಗಿ ಪ್ರಧಾನಿ ಜತೆಯೇ ಮಾತುಕತೆ ನಡೆಸಿ.. ರೈತರನ್ನು ಒತ್ತಾಯಿಸಿದ ಅಕಾಲಿ ದಳ, ಕಾಂಗ್ರೆಸ್​

| Updated By: ಸಾಧು ಶ್ರೀನಾಥ್​

Updated on: Dec 30, 2020 | 5:27 PM

ರೈತರೊಂದಿಗೆ ಮೊದಲು ಗೃಹ ಸಚಿವ ಅಮಿತ್ ಷಾ ಮಾತುಕತೆ ನಡೆಸಿದರು. ಅದು ವಿಫಲವಾದ ಬಳಿಕ ಮುಂದಿನ ಹಂತದ ಮತುಕತೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರಬೇಕಿತ್ತು. ಆದರೆ ಒಂದು ಹಂತ ಹಿಂದೆಯೇ ಹೋಗಿದೆ.. ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಟ್ರಾಪ್​ಗೆ ಒಳಗಾಗಬೇಡಿ.. ನೇರವಾಗಿ ಪ್ರಧಾನಿ ಜತೆಯೇ ಮಾತುಕತೆ ನಡೆಸಿ.. ರೈತರನ್ನು ಒತ್ತಾಯಿಸಿದ ಅಕಾಲಿ ದಳ, ಕಾಂಗ್ರೆಸ್​
ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us on

ಚಂಡಿಗಢ​: ಕೃಷಿ ಕಾಯ್ದೆಗಳಿಂದಾಗುವ ಸಮಸ್ಯೆಗಳ ಬಗ್ಗೆ ನೀವು ನೇರವಾಗಿ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿಯೇ ಮಾತನಾಡಿ ಎಂದು ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್​ ಪಕ್ಷಗಳು ಪ್ರತಿಭಟನಾ ನಿರತ ರೈತರಿಗೆ ತಾಕೀತು ಮಾಡಿದ್ದಾರೆ.

ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಇಂದು ಆರನೇ ಸುತ್ತಿನ ಮಾತುಕತೆ ನಡೆಸಿದೆ. ಇಷ್ಟಾದರೂ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಇಂದು ಶಿರೋಮಣಿ ಅಕಾಲಿ ದಳದ ಬಟಿಂಡಾ ಸಂಸದ, ಮಾಜಿ ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಸೈ ಮಾತನಾಡಿ, ಪ್ರತಿಭಟನಾ ನಿರತ ರೈತರು ಯಾವ ಕಾರಣಕ್ಕೂ ಕೇಂದ್ರ ಸರ್ಕಾರದ ಬಲೆಗೆ ಬೀಳಬಾರದು. ಸರ್ಕಾರ ಪದೇಪದೆ ಸಭೆಗಳನ್ನು ಮುಂದೂಡುವ ಮೂಲಕ ರೈತರ ದಾರಿ ತಪ್ಪಿಸುತ್ತಿದೆ. ಈ ಮೂಲಕ ರೈತರ ದಾರಿ ತಪ್ಪಿಸುತ್ತಿದೆ.. ಈ ಟ್ರಾಪ್​ಗೆ ನೀವು ಒಳಗಾಗಬೇಡಿ ಎಂದು ಕರೆ ನೀಡಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ರೈತರು ಗೆಲುವಿನ ಅಂಚಿನಲ್ಲಿದ್ದಾರೆ..
ಹಾಗೇ, ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸುನೀಲ್ ಜಖರ್​ ಅವರೂ ಕೂಡ ಇದೇ ಸಲಹೆಯನ್ನು ರೈತರಿಗೆ ನೀಡಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ರೈತರು ಗೆಲುವಿನ ಅಂಚಿನಲ್ಲಿ ಇದ್ದಾರೆ. ಈಗ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನೇರವಾಗಿ ಮಾತನಾಡಬೇಕು.

ರೈತರೊಂದಿಗೆ ಮೊದಲು ಗೃಹ ಸಚಿವ ಅಮಿತ್ ಷಾ ಮಾತುಕತೆ ನಡೆಸಿದರು. ಅದು ವಿಫಲವಾದ ಬಳಿಕ ಮುಂದಿನ ಹಂತದ ಮತುಕತೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರಬೇಕಿತ್ತು. ಆದರೆ ಒಂದು ಹಂತ ಹಿಂದೆಯೇ ಹೋಗಿದೆ.. ಪ್ರಧಾನಿ ಬದಲು ಕೃಷಿ ಸಚಿವರು, ಉಳಿದ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗ ಗೆಲುವಿನ ಹೊಸ್ತಿಲಿನಲ್ಲಿ ಇರುವ ರೈತರು ಪ್ರಧಾನಿಯೊಂದಿಗೇ ಮಾತುಕತೆ ನಡೆಸಬೇಕು ಎಂದು ತಾಕೀತು ಮಾಡಿದ್ದಾರೆ.

ಪ್ರತಿಭಟನಾ ನಿರತ ಪಂಜಾಬ್​ ರೈತರ ಜೊತೆ ಕೃಷಿ ಸಚಿವ ತೋಮರ್​ ಭೋಜನ