ರೈಲು ನಿಲ್ದಾಣದಲ್ಲಿ ಬ್ಯಾಗ್​ಗಲ್ಲ, ವಿದ್ಯಾರ್ಥಿನಿಯ ಕೂದಲಿಗೆ ಬಿತ್ತು ಕತ್ತರಿ

ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿನಿಯ ಕೂದಲನ್ನು ಕತ್ತರಿಸಿ ಕದ್ದೊಯ್ದಿರುವ ಘಟನೆ ದಾದರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಆಕೆ ಕಾಲೇಜಿಗೆಂದು ರೈಲು ನಿಲ್ದಾಣಕ್ಕೆ ಬಂದಾಗ ವ್ಯಕ್ತಿಯೊಬ್ಬ ಆಕೆಗೆ ತಿಳಿಯದಂತೆ ಕೂದಲನ್ನು ಕತ್ತರಿಸಿ ಬ್ಯಾಗ್​ಗೆ ಹಾಕಿಕೊಂಡು ಪರಾರಿಯಾಗಿದ್ದ, ಆಕೆ ಹಿಡಿಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ರೈಲು ನಿಲ್ದಾಣದಲ್ಲಿ ಬ್ಯಾಗ್​ಗಲ್ಲ, ವಿದ್ಯಾರ್ಥಿನಿಯ ಕೂದಲಿಗೆ ಬಿತ್ತು ಕತ್ತರಿ
ಕೂದಲು
Image Credit source: TV9 Marathi

Updated on: Jan 07, 2025 | 1:37 PM

ಸಾಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಬ್ಯಾಗ್​ಗಳು, ಪರ್ಸ್​, ಮೊಬೈಲ್​ ಕಳ್ಳತನವಾಗುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಆದರೆ ಕೂದಲು ಕಳ್ಳತನ ಮಾಡಿರುವುದನ್ನು ಕೇಳಿರಲು ಸಾಧ್ಯವಿಲ್ಲ. ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಕೂದಲು ಕತ್ತರಿಸಿ ಕದ್ದೊಯ್ದಿರುವ ಘಟನೆ ದಾದರ್ ರೈಲು ನಿಲ್ದಾಣದಲ್ಲಿ ನಡೆದಿದೆ.

ದಾದರ್ ನಿಲ್ದಾಣದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯ ಕೂದಲನ್ನು ಕತ್ತರಿಸಲಾಗಿದೆ. ಕತ್ತರಿಸಿ ಬ್ಯಾಗ್‌ನಲ್ಲಿ ಹಾಕಿಕೊಂಡು ವ್ಯಕ್ತಿ ಓಡಿ ಹೋಗಿದ್ದಾನೆ. ಆಕೆ ಕಳ್ಳನ ಹಿಂದೆ ಓಡಿ ಹೋಗಿ ಹಿಡಿಯಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗಲಿಲ್ಲ. ಜನರ ಮಧ್ಯೆ ನುಸುಳಿ ಪರಾರಿಯಾಗಿದ್ದಾನೆ.

ವಿದ್ಯಾರ್ಥಿನಿ ದೂರಿನ ಮೇರೆಗೆ ಮುಂಬೈ ಸೆಂಟ್ರಲ್ ಲೋಹ್ಮಾರ್ಗ್ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ.

ಆಕೆ ಕಲ್ಯಾಣ್ ನಿವಾಸಿಯಾಗಿದ್ದು, ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ಹೊರಟವಳು ದಾದರ್ ನಿಲ್ದಾಣದಲ್ಲಿ ಇಳಿದಿದ್ದಳು. ದಾದರ್ ಬ್ರಿಡ್ಜ್​ ಟಿಕೆಟ್ ಬುಕಿಂಗ್ ಬಳಿ ಬಂದಾಗ ಇದ್ದಕ್ಕಿದ್ದಂತೆ ಬೆನ್ನಿಗೆ ಚೂಪಾದ ವಸ್ತು ತಾಕಿದಂತಾಯಿತು. ಕೆಳಗೆ ನೋಡಿದಾಗ ಕೂದಲು ಬಿದ್ದಿತ್ತು.

ಮತ್ತಷ್ಟು ಓದಿ:Tech Tips: ನೀವು ಹೋಗುತ್ತಿರುವ ರೈಲಿನಿಂದ ಫೋನ್ ಕೆಳಗೆ ಬಿದ್ದರೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ

ಓರ್ವ ವ್ಯಕ್ತಿ ಕೂದಲನ್ನು ಬ್ಯಾಗ್​ಗೆ ತುಂಬಿಸಿಕೊಂಡು ಓಡಿ ಹೋಗುತ್ತಿರುವುದು ಕಂಡುಬಂದಿತ್ತು. ಆಕೆಯ ಅರ್ಧದಷ್ಟು ಕೂದಲನ್ನು ಕತ್ತರಿಸಲಾಗಿತ್ತು. ಆಕೆ ಹೆದರದೆ ಧೈರ್ಯವಾಗಿ ಆತನ ಹಿಂದೆ ಓಡಿ ಹಿಡಿಯಲು ಪ್ರಯತ್ನಿಸಿದಳು ಆದರೆ ಸಾಧ್ಯವಾಗಲಿಲ್ಲ.

ಮುಂಬೈ ಸೆಂಟ್ರಲ್ ಲೋಹ್ಮಾರ್ಗ್ ಪೊಲೀಸ್ ಠಾಣೆಗೆ ಬಂದು ಸಂಪೂರ್ಣ ಘಟನೆಯನ್ನು ವಿವರಿಸಿ ದೂರು ನೀಡಿದ್ದಾಳೆ.
ದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಆಡಳಿತ ಭದ್ರತೆ ಬಗ್ಗೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:11 pm, Tue, 7 January 25