ಭಾರತದಲ್ಲಿ ಒಂದೇ ದಿನ 3,689 ಜನ ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಬಲಿ

|

Updated on: May 02, 2021 | 2:04 PM

ಭಾರತದಲ್ಲಿ ಒಂದೇ ದಿನದಲ್ಲಿ ಕೊರೊನಾಗೆ 3,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದು ಆತಂಕ ಹೆಚ್ಚಾಗಿದೆ.

ಭಾರತದಲ್ಲಿ ಒಂದೇ ದಿನ  3,689 ಜನ ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಬಲಿ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಭಾರತ ದೇಶದಲ್ಲಿ ಭಾನುವಾರ ಒಂದೇ ದಿನ 3,689 ಜನ ಕೊವಿಡ್​ 19  ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಅಂದರೆ ಶನಿವಾರದಿಂದ ದೈನಂದಿನ ಕೊವಿಡ್​ 19 ಪ್ರಕರಣಗಳ ಸಂಖ್ಯೆ 4,01,993ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಒಳಗಾಗಿ 3,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳು ಈ ಕೆಳಗಿನಂತಿವೆ.

ಮಹಾರಾಷ್ಟ್ರದಲ್ಲಿ 63,282 ಪ್ರಕರಣಗಳು, ಕರ್ನಾಟಕದಲ್ಲಿ 40,990 ಪ್ರಕರಣಗಳು, ಕೇರಳ 35,636 ಪ್ರಕರಣಗಳು, ಉತ್ತರ ಪ್ರದೇಶ 30,180 ಪ್ರಕರಣಗಳು ಮತ್ತು 25,219 ಕೊರೊನಾ ಹೊಸ ಪ್ರಕರಣವನ್ನು ದೆಹಲಿ ದಾಖಲಿಸಿದೆ.

ಶೇ.49.76ರಷ್ಟು ಈ ಐದು ರಾಜ್ಯಗಳವರಾಗಿದ್ದು, ಕೊರೊನಾ ಸಾಂಕ್ರಾಮಿಕ ದಾಖಲಾತಿಯಲ್ಲಿ ಮಹಾರಾಷ್ಟ್ರ ಶೇ.16.16ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 802 ಜನ ಮಹಾರಾಷ್ಟ್ರದಲ್ಲಿ ಬಲಿಯಾಗಿದ್ದು, ಇಂದೇ ದಿನ ಗರಿಷ್ಠ ಸಾವಿಗೀಡಾದ ರಾಜ್ಯ ಮಹಾರಾಷ್ಟ್ರವಾಗಿದೆ. ಇನ್ನು, ದೆಹಲಿಯಲ್ಲಿ 412 ಜನ ಕೊವಿಡ್​19ನಿಂದ ಸಾವಿಗೀಡಾಗಿದ್ದಾರೆ.

ದೇಶದಲ್ಲಿ ಪ್ರಸ್ತುತ 33,49,644 ಸಕ್ರಿಯ ಪ್ರಕರಣಗಳಿವೆ. ಮತ್ತು ಒಟ್ಟು 2,15,542 ಜನ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,07,865 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಇಲ್ಲಿಯವರೆಗೆ ಕೊರೊನಾ ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡ ಜನರ ಸಂಖ್ಯೆ 1,59,92,271. ಹಾಗೂ ಈವರೆಗೆ 15,68,16,031 ಜನರಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ತಂದೆಗೆ ಕೊರೊನಾ ಚಿಕಿತ್ಸೆ ಕೊಡಿಸಲು ಮಗಳ ಪರದಾಟ; ಕರೆಯನ್ನು ಸ್ವೀಕರಿಸದ ಅಧಿಕಾರಿಗಳು

(single day highest death in coronavirus disease in India)

Published On - 12:54 pm, Sun, 2 May 21