Tamil Nadu Election Results 2021: 137 ಸೀಟುಗಳಲ್ಲಿ ಡಿಎಂಕೆ, ದಕ್ಷಿಣ ಕೊಯಮತ್ತೂರ್​ನಲ್ಲಿ ಕಮಲ್ ಹಾಸನ್ ಮುನ್ನಡೆ

Assembly Election 2021: ಮತ ಎಣಿಕೆಯ ಆರಂಭಿಕ ಹಂತದಲ್ಲಿ ತಿರುನಲ್ವೇಲಿ, ಧಾರಾಪುರಂ , ಹಾರ್ಬರ್, ನೀಲಗಿರಿ , ಕನ್ಯಾಕುಮಾರಿ ಈ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

Tamil Nadu Election Results 2021: 137 ಸೀಟುಗಳಲ್ಲಿ ಡಿಎಂಕೆ, ದಕ್ಷಿಣ ಕೊಯಮತ್ತೂರ್​ನಲ್ಲಿ ಕಮಲ್ ಹಾಸನ್ ಮುನ್ನಡೆ
ಎಂ.ಕೆ. ಸ್ಟಾಲಿನ್

ಚೆನ್ನೈ: ತಮಿಳುನಾಡು ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಮತ ಎಣಿಕೆ ಆರಂಭವಾಗಿ ಮೂರು ಗಂಟೆ ಕಳೆದಾಗ ಡಿಎಂಕೆ 137 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಅದೇ ವೇಳೆ ಆಡಳಿತರೂಢ ಎಐಎಡಿಎಂಕೆ 95 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. 234 ಸೀಟುಗಳಿರುವ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಬೇಕಾದರೆ ರಾಜಕೀಯ ಪಕ್ಷಗಳಿಗೆ 118 ಸೀಟುಗಳ ಅಗತ್ಯವಿದೆ. 2011ರ ವಿಧಾನಸಭಾ ಚುನಾವಣೆ ಗೆದ್ದಿದ್ದ ಎಐಎಡಿಎಂಕೆ ಈ ಬಾರಿಯೂ ಅಧಿಕಾರ ಮುಂದುವರಿಸುವ ನಿರೀಕ್ಷೆ ಹೊಂದಿದ್ದು, ಡಿಎಂಕೆ ಈ ಬಾರಿ ಗದ್ದುಗೆಗೇರುವ ಮಹತ್ವಾಕಾಂಕ್ಷೆಯೊಂದಿಗೆ ಚುನಾವಣೆ ಸ್ಪರ್ಧಿಸಿದೆ. ತಮಿಳುನಾಡಿನ ಹಿರಿಯ ರಾಜಕಾರಣಿಗಳಾದ ಎಂ.ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರ ಮರಣದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮತ್ತು ಡಿಎಂಕೆ ನೇತೃತ್ವದ ಸೆಕ್ಯುಲರ್ ಪ್ರೊಗ್ರೆಸ್ಸಿವ್ ಅಲಯನ್ಸ್ ಶೇ 70-80 ಮತಗಳ ಬೆಂಬಲ ಹೊಂದಿದೆ. ಇನ್ನುಳಿದ ಮತಗಳು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ, ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಸಿಗುವುದಾಗಿ ಅಂದಾಜಿಸಲಾಗಿದೆ. ಏಪ್ರಿಲ 6ರಂದು ನಡೆದ ಚುನಾವಣೆಯಲ್ಲಿ ಶೇ72. 81 ಮತದಾನವಾಗಿತ್ತು.

ಡಿಎಂಕೆ ಕಾರ್ಯಕರ್ತರಿಂದ  ಸಂಭ್ರಮಾಚರಣೆ 
ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿದ್ದು ಆರಂಭಿಕ ಮತ ಎಣಿಕೆಯಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದ ಸುದ್ದಿ ತಿಳಿದು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

#WATCH | DMK workers and supporters celebrate outside Anna Arivalayam, the party headquarters in Chennai, as official trends show the party leading.#TamilNaduElections2021 pic.twitter.com/61tbcETHYk

ಐದು ಸೀಟುಗಳಲ್ಲಿ ಬಿಜೆಪಿ ಮುನ್ನಡೆ
ತಿರುನಲ್ವೇಲಿ, ಧಾರಾಪುರಂ , ಹಾರ್ಬರ್, ನೀಲಗಿರಿ , ಕನ್ಯಾಕುಮಾರಿ ಈ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಎಂ.ಕೆ .ಸ್ಟಾಲಿನ್ ಮುನ್ನಡೆ
ಕೊಲತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ನಾಯಕ ಎಂ.ಕೆ,ಸ್ಟಾಲಿನ್ 1,700 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಎಐಎಡಿಎಂಕೆ ಪಕ್ಷದ ಆದಿರಾಜಾರಾಂ ಪ್ರತಿಸ್ಪರ್ಧಿಯಾಗಿದ್ದಾರೆ

ದುರೈ ಮುರುಗನ್ ಹಿನ್ನಡೆ
ಕಟ್ಪಡಿಯಲ್ಲಿ ಡಿಎಂಕೆ ಪಕ್ಷದ ಹಿರಿಯ ನೇತಾರ ದುರೈ ಮುರುಗನ್ ಹಿನ್ನೆಡೆ ಅನುಭವಿಸಿದ್ದಾರೆ.

ಕಮಲ್ ಹಾಸನ್ ಮುನ್ನಡೆ
ಕೊಯಮತ್ತೂರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಮುನ್ನಡೆ ಸಾಧಿಸಿದ್ದಾರೆ.

ಇಪಿಎಸ್ ಮುನ್ನಡೆ
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಕೆ ಪಳನಿಸ್ವಾಮಿ ತಮ್ಮ ಸ್ವಕ್ಷೇತ್ರ ಎಡಪ್ಪಡಿಯಲ್ಲು ಮುನ್ನಡೆ ಸಾಧಿಸುತ್ತಿದ್ದಾರೆ. ಆರನೇ ಸುತ್ತಿನ ಎಣಿಕೆಯ ನಂತರ ಇಪಿಎಸ್ 25 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಅವನಾಶಿ ಕ್ಷೇತ್ರದಲ್ಲಿ ಸ್ಪೀಕರ್ ಪಿ. ಧನಪಾಲ್ 2,700 ಮತಗಳಿಂದ ಮುನ್ನಡೆ
ತಮಿಳುನಾಡು ವಿಧಾನಸಭಾ ಸ್ಪೀಕರ್, ಎಐಎಡಿಎಂಕೆ ಅಭ್ಯರರ್ಥಿ ಪಿ ಧನಪಾಲ್ ಅವನಾಶಿ ಕ್ಷೇತ್ರದಲ್ಲಿ 2,700 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಅಥಿಯಮಾನ್ ರಾಜು ಹಿನ್ನಡೆ.

(Tamil Nadu Election Results 2021 DMK alliance races ahead Kamal Haasan lands in Coimbatore)

ಇದನ್ನೂ ಓದಿ: ಡಿಎಂಕೆ-ಎಐಎಡಿಎಂಕೆ ಪಾಲಿಗೆ ಪ್ರತಿಷ್ಠೆಯ ಕಣ, ತಮಿಳುನಾಡಿನ ಗಾದಿಯೇರುವಂತೆ ಮಾಡಲಿದೆಯೇ  ಸ್ಟಾಲಿನ್ ಕಾರ್ಯತಂತ್ರ ?

Kerala Assembly Election Results 2021: 91 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್​ಡಿಎಫ್, ಪಾಲಕ್ಕಾಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್ ಮುನ್ನಡೆ

Click on your DTH Provider to Add TV9 Kannada