Kerala Assembly Election Results 2021: 91 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್​ಡಿಎಫ್, ಪಾಲಕ್ಕಾಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್ ಮುನ್ನಡೆ

Assembly Election 2021: ಆರಂಭಿಕ ಹಂತದ ಮತಎಣಿಕೆಯಲ್ಲಿ ಎಲ್​ಡಿಎಫ್ 91 ಮತ್ತು ಯುಡಿಎಫ್ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಎರಡು ಸೀಟುಗಳಲ್ಲಿ ಮುಂದೆ ಇದೆ. ಪಾಲಕ್ಕಾಡ್, ನೇಮಂ ಮತ್ತು ತ್ರಿಶ್ಶೂರ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

Kerala Assembly Election Results 2021: 91 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್​ಡಿಎಫ್, ಪಾಲಕ್ಕಾಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್ ಮುನ್ನಡೆ
ಇ.ಶ್ರೀಧರನ್
Follow us
ರಶ್ಮಿ ಕಲ್ಲಕಟ್ಟ
|

Updated on:May 02, 2021 | 11:04 AM

ತಿರುವನಂತಪುರಂ: ಕೇರಳದ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್​ಡಿಎಫ್ 91ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. 140 ಸೀಟುಗಳಿರುವ ಕೇರಳ ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆದಿದೆ. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದ ಮತಎಣಿಕೆಯಲ್ಲಿ ಎಲ್​ಡಿಎಫ್ 91 ಮತ್ತು ಯುಡಿಎಫ್ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಎರಡು ಸೀಟುಗಳಲ್ಲಿ ಮುಂದೆ ಇದೆ. ಪಾಲಕ್ಕಾಡ್, ನೇಮಂ  ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಯುಡಿಎಫ್ ಭದ್ರಕೋಟೆಯಾದ ಕೋಟ್ಟಯಂ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ ಮುನ್ನಡ ಸಾಧಿಸಿದೆ. ಪುದುಪ್ಪಳ್ಳಿ, ಕೋಟ್ಟಯಂ ಮತ್ತು ಪಾಲಾದಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿಕೊಂಡಿದೆ. ಪೂಂಞಾರ್​ನಲ್ಲಿ ಪಿ.ಸಿ. ಜಾರ್ಜ್ ಮೂರನೇ ಸ್ಥಾನದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆ ಇರುವ ಏಟ್ಟುಮಾನೂರ್​ನಲ್ಲಿ ಎಲ್​ಡಿಎಫ್ ಅಭ್ಯರ್ಥಿ ವಿ.ಎನ್. ವಾಸವನ್ ಮುನ್ನಡೆ ಸಾಧಿಸಿದ್ದಾರೆ.

ಅಂಚೆ ಮತಗಳ ಕವರ್ ಮೇಲೆ ಸಹಿ ಇಲ್ಲ: ಪಾಲಕ್ಕಾಡ್ ನಲ್ಲಿ ತಡವಾಗಿ ಆರಂಭವಾದ ಮತ ಎಣಿಕೆ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾದಾಗ 6 ಅಂಚೆಮತಗಳ ಕವರ್ ಮೇಲೆ ಸಹಿ ಇರದ ಕಾರಣ ಅದನ್ನು ಪ್ರತ್ಯೇಕವಾಗಿಡಲು ಬಿಜೆಪಿ ಒತ್ತಾಯಿಸಿದೆ. ಈ ಮತಗಳು ಅಸಿಂಧುವಾಗುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದಲ್ಲಿ ವಾಗ್ವಾದ ಮಾಡಿದದು ಬೆಳಗ್ಗೆ 8.40ಕ್ಕೆ ಇಲ್ಲಿ ಮತ ಎಣಿಕೆ ಆರಂಭವಾಗಿದೆ.

ಪಾಲಕ್ಕಾಡ್​ನಲ್ಲಿ ಇ. ಶ್ರೀಧರನ್ ಮುನ್ನಡೆ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿ  ಮೆಟ್ರೊಮ್ಯಾನ್ ಇ. ಶ್ರೀಧರನ್ ಮುನ್ನಡೆ ಸಾಧಿಸಿದ್ದಾರೆ. ತ್ರಿಕೋನ ಸ್ಪರ್ಧೆ ನಡೆಯುತ್ತಿರುವ ಇಲ್ಲಿ 1791 ಮತಗಳಿಂದ ಶ್ರೀಧರನ್ ಮುಂದೆ ಇದ್ದಾರೆ. ಬೆಳಗ್ಗೆ ಅಂಚೆ ಮತ ಎಣಿಕೆ ಪ್ರಾರಂಭಾವಗಿ ಇಲ್ಲಿಯವರೆಗೆ ಕಾಂಗ್ರೆಸ್  ಅಭ್ಯರ್ಥಿ ಶಾಫಿ  ಪರಂಬಿಲ್ ಅವರನ್ನು ಹಿಂದಿಕ್ಕಿ ಶ್ರೀಧರನ್ ಅವರೇ ಮುಂದೆ ಇದ್ದಾರೆ.

ವಡಗರದಲ್ಲಿ ಯುಡಿಎಫ್ ಅಭ್ಯರ್ಥಿ ಕೆ.ಕೆ. ರಮ ಮುನ್ನಡೆ ಸಾಧಿಸಿದ್ದಾರೆ. ಕಳಕ್ಕೂಟ್ಟಂನಲ್ಲಿ ಎಲ್ ಡಿಎಫ್ ಅಭ್ಯರ್ಥಿ ಕಡಕಂಪಳ್ಳಿ ಸುರೇಂದ್ರನ್ 4000 ಮತಗಳಿಂದ ಮುಂದೆ ಇದ್ದಾರೆ.

ಕಾಸರಗೋಡಿನಲ್ಲಿ ಯುಡಿಎಫ್ 4 , ಎಲ್ ಡಿಎಫ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಣ್ಣೂರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್​ಡಿಎಫ್ ಮುನ್ನಡೆಯಲ್ಲಿದೆ. ಇರಿಕ್ಕೂರ್ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಇನ್ನುಳಿದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್​ಡಿಎಫ್ ಮುಂದೆ ಇದೆ.

ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 5000 ಮತಗಳಿಂದ ಮುಂದೆ ಇದ್ದಾರೆ. ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಟ್ಟನ್ನೂರ್ನ​ಲ್ಲಿ.ಟಿಎಂ. ಮಧುಸೂದನ್ ಪಯ್ಯನ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: 5 State Assembly Election Results 2021 LIVE: ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಮತ ಎಣಿಕೆ ಆರಂಭ

PM Modi in Kerala: ಕೇರಳದ ಜನರು ಎಲ್​ಡಿಎಫ್ ಮತ್ತು ಯುಡಿಎಫ್​ನಿಂದ ಬೇಸತ್ತಿದ್ದಾರೆ, ಅವರಿಗೆ ಬದಲಾವಣೆ ಬೇಕಿದೆ: ನರೇಂದ್ರ ಮೋದಿ

Published On - 10:48 am, Sun, 2 May 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ