PM Modi in Kerala: ಕೇರಳದ ಜನರು ಎಲ್​ಡಿಎಫ್ ಮತ್ತು ಯುಡಿಎಫ್​ನಿಂದ ಬೇಸತ್ತಿದ್ದಾರೆ, ಅವರಿಗೆ ಬದಲಾವಣೆ ಬೇಕಿದೆ: ನರೇಂದ್ರ ಮೋದಿ

Kerala Assembly Elections 2021: ಎಲ್​ಡಿಎಫ್ ಮತ್ತು ಯುಡಿಎಫ್ ಬಗ್ಗೆ ಜನರು  ಸಾಕಪ್ಪಾ ಸಾಕು ಎಂದು  ಹೇಳುತ್ತಿದ್ದಾರೆ. ಕೇರಳದ ಜನರು ಬಿಜೆಪಿಯ ಅಭಿವೃದ್ದಿ ಕಾರ್ಯಗಳನ್ನು ಬಯಸುತ್ತಿದ್ದಾರೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

PM Modi in Kerala: ಕೇರಳದ ಜನರು ಎಲ್​ಡಿಎಫ್ ಮತ್ತು ಯುಡಿಎಫ್​ನಿಂದ ಬೇಸತ್ತಿದ್ದಾರೆ, ಅವರಿಗೆ ಬದಲಾವಣೆ ಬೇಕಿದೆ: ನರೇಂದ್ರ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Apr 02, 2021 | 7:26 PM

ಕೋನ್ನಿ (ಪತ್ತನಂತಿಟ್ಟ): ಕೇರಳದ ಜನರು ಎಲ್​ಡಿಎಫ್ ಮತ್ತು ಯುಡಿಎಫ್​ನಿಂದ ಬೇಸತ್ತಿದ್ದಾರೆ. ಇಲ್ಲಿನ ಜನರಿಗೆ ಬಿಜೆಪಿಯ ಅಭಿವೃದ್ಧಿ ಅಜೆಂಡಾ ಬೇಕಿದೆ.  ಎಲ್​ಡಿಎಫ್ ಮತ್ತು ಯುಡಿಎಫ್ ಬಗ್ಗೆ ಜನರು  ಸಾಕಪ್ಪಾ ಸಾಕು ಎಂದು  ಹೇಳುತ್ತಿದ್ದಾರೆ. ಕೇರಳದ ಜನರು ಬಿಜೆಪಿಯ ಅಭಿವೃದ್ದಿ ಕಾರ್ಯಗಳನ್ನು ಬಯಸುತ್ತಿದ್ದಾರೆ. ನಮ್ಮ ಯೋಜನೆ ಮತ್ತು ನೀತಿಗಳನ್ನು ಅವರು ಮೆಚ್ಚಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ಕೇರಳದ ಪತ್ತನಂತಿಟ್ಟ ಜಿಲ್ಲೆಯ  ಕೋನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ, ಕೇರಳದ ಎಲ್​ಡಿಎಫ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್​ಡಿಎಫ್ ಏಳು ಮಹಾ ಪಾಪಗಳನ್ನು ಮಾಡಿದೆ ಎಂದಿದ್ದಾರೆ ಮೋದಿ. ಕೆಲವು ದಿನಗಳ ಹಿಂದೆ ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಮೋದಿ, ಜೂಡಸ್ ಬೆಳ್ಳಿಗಾಗಿ ವಂಚಿಸಿದಂತೆ ಎಲ್​ಡಿಎಫ್ ಚಿನ್ನಕ್ಕಾಗಿ ಕೇರಳದ ಜನರನ್ನ ವಂಚಿಸಿದೆ ಎಂದಿದ್ದರು. ಇಂದು ಪ್ರಚಾರ ಸಭೆಯಲ್ಲಿ  ಭಾಷಣ ಮಾಡಿದ ಮೋದಿ, ನಾವು ಏಳು ಮಹಾ ಪಾಪಗಳ ಬಗ್ಗೆ ಕೇಳಿದ್ದೇವೆ. ಯುಡಿಎಫ್ ಮತ್ತು ಎಲ್​ಡಿಎಫ್ ಕೇರಳದಲ್ಲಿ ಈ ಏಳು ಮಹಾ ಪಾಪಗಳನ್ನು ಮಾಡಿದೆ ಎಂದು ಒಂದೊಂದನ್ನೇ ವಿವರಿಸಿದ್ದಾರೆ.

ಮೊದಲ ತಪ್ಪು ಸುಳ್ಳು ಗರ್ವ ಮತ್ತು ಸೊಕ್ಕು. ಯುಡಿಎಫ್ ಮತ್ತು ಎಲ್​ಡಿಎಫ್​ನ್ನು ಯಾವತ್ತೂ ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಅಂದುಕೊಂಡಿದ್ದಾರೆ. ಹಾಗಾಗಿ ಅವರ ನಾಯಕರಿಗೆ ಸೊಕ್ಕು ಇದೆ. ಅವರು ಬುಡದಿಂದ ಸಂಪರ್ಕ ಕಡಿದುಕೊಂಡಿದ್ದಾರೆ. ಎರಡನೇ ಪಾಪ ಅಂದರೆ ದುರಾಸೆ ಮತ್ತು ಹಣ. ಸೋಲಾರ್ ಹಗರಣ, ಡಾಲರ್ ಹಗರಣ, ಚಿನ್ನ ಹಗರಣ, ಭೂ ಹಗರಣ, ಬಾರ್ ಲಂಚ ಹಗರಣ, ಅಬಕಾರಿ ಹಗರಣ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಎರಡೂ ಪಕ್ಷಗಳು ಪ್ರತಿಯೊಂದು ವಲಯವನ್ನೂ ಲೂಟಿ ಮಾಡಿದೆ.  ಮೂರನೇ ಪಾಪ ಏನೆಂದರೆ ಜನರ ಮೇಲಿನ ರೋಷ. ಯಾವ ಸರ್ಕಾರ ಮುಗ್ಧ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಯಾವ ಸರ್ಕಾರ ಪದೇ ಪದೇ ತಮ್ಮದೇ ನಾಗರಿಕರ ಮೇಲೆ ದಾಳಿ ನಡೆಸುತ್ತದೆ? ಎಂದು ಮೋದಿ ಪ್ರಶ್ನಿಸಿದ್ದಾರೆ.

ನಾಲ್ಕನೇ ಪಾಪ ಅಸೂಯೆ. ಯುಡಿಎಫ್ ಮತ್ತು ಎಲ್​ಡಿಎಫ್  ಪರಸ್ಪರ ಅಸೂಯೆ ಹೊಂದಿದೆ. ತಪ್ಪುಗಳನ್ನು ಮಾಡುವ ಮೂಲಕ ಅವರು ಪರಸ್ಪರ ಪೈಪೋಟಿ ಮಾಡುತ್ತಿದ್ದಾರೆ. ಅವರಿಬ್ಬರೂ ಹಗರಣಗಳಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಳು ತಮಗಿಂತ ಹೆಚ್ಚು ಹಣ ಮಾಡುತ್ತಿದ್ದಾರೆ ಎಂದಾಗ ಅವರಿಗೆ ಹೊಟ್ಟೆಕಿಚ್ಚುವುಂಟಾಗಿದೆ. 5ನೇ ಪಾಪ ಅಧಿಕಾರದ ವ್ಯಾಮೋಹ. ಹಾಗಾಗಿಯೇ ಅವರು ಕೋಮುವಾದಿಗಳು, ಅಪರಾಧಿಗಳು ಮತ್ತು ಸಮಾಜಘಾತುಕ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ. ತ್ರಿವಳಿ ತಲಾಖ್ ಬಗ್ಗೆ ಮುಸ್ಲಿಂ ಲೀಗ್​ನ ನಿಲುವು ಏನು? ಎಸ್​ಡಿಪಿಐ ಮತ್ತು ಪಿಎಫ್ಐ ಅವರ ಸಾಮಾಜಿಕ ನೀತಿಗಳೇನು?

ಆರನೇ ಪಾಪ ಎಂದರೆ ರಾಜಕೀಯದಲ್ಲಿನ ವಂಶಾಡಳಿತ. ಎರಡೂ ಪಕ್ಷಗಳು ವಂಶಾಡಳಿತದ ಬಗ್ಗೆ ಆತುರ ಹೊಂದಿವೆ. ಇದು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ .ಹಿರಿಯ ನಾಯಕರ ಮಕ್ಕಳು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಎಲ್​ಡಿಎಫ್​ನ ಹಿರಿಯ ನಾಯಕರೊಬ್ಬರ ಮಗನ ಪ್ರಕರಣ ಎಲ್ಲರಿಗೂ ಗೊತ್ತಿರುವಂತದ್ದೇ ಆದನ್ನು ವಿವರಿಸುವ ಅಗತ್ಯವಿಲ್ಲ.

ಎಂಟನೇ ಪಾಪ ಎಂದರೆ ಕೆಲಸ ಮಾಡಲು ಸೋಮಾರಿತನ. ಹಣ ಮಾಡುವುದರಲ್ಲಿ, ವಂಶಾಡಳಿತವನ್ನು ಪ್ರೋತ್ಸಾಹಿಸುವಲ್ಲಿ, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಆದ್ಯತೆ ನೀಡುವ ಸರ್ಕಾರ ಹಿಂದುಳಿಯುತ್ತಿದೆ. ಎಲ್​ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳು ಕೇರಳದ ಅಭಿವೃದ್ಧಿಯನ್ನು ಕುಂಠಿತಗೊಳಿಸಿವೆ ಎಂದು ಮೋದಿ ಹೇಳಿದ್ದಾರೆ.

ಏಪ್ರಿಲ್ 6ರಂದು ಕೇರಳದಲ್ಲಿ  ಚುನಾವಣೆ ನಡೆಯಿಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ  ಓದಿ: PM Modi in Kerala: ಚಿನ್ನಕ್ಕಾಗಿ ಎಲ್​ಡಿಎಫ್ ಸರ್ಕಾರ ಜನರಿಗೆ ಮೋಸ ಮಾಡಿದೆ: ನರೇಂದ್ರ ಮೋದಿ

Published On - 7:22 pm, Fri, 2 April 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ