Explainer: ಭಾರತದಲ್ಲಿ ಈಗ ಹರಡುತ್ತಿರುವ ಕೊರೊನಾ 2ನೇ ಅಲೆ ಮೊದಲ ಅಲೆಗಿಂತ ಸಂಪೂರ್ಣ ಭಿನ್ನ: ಏನಿದು 2ನೇ ಅಲೆ? ಏಕಿಷ್ಟು ಆತಂಕ?

ಮಹಾರಾಷ್ಟ್ರದಲ್ಲಿ ಈಗ ಕೊರೊನಾ ಕೇಸ್ ಅತಿ ಹೆಚ್ಚಾಗಿ ಪತ್ತೆಯಾಗುತ್ತಿರುವುದು ಧಾರಾವಿಯಂಥ ಸ್ಲಂಗಳಲ್ಲಿ ಅಲ್ಲ. ಬದಲಿಗೆ ಶ್ರೀಮಂತರು ವಾಸಿಸುವ ಅಪಾರ್ಟ್ ಮೆಂಟ್, ಹೌಸಿಂಗ್ ಸೊಸೈಟಿಗಳಲ್ಲಿ. ಹಿಂದೆ ಸ್ಪಾನಿಷ್ ಫ್ಲೂ ಸಾಂಕ್ರಾಮಿಕ ಬಂದಿದ್ದಾಗಲೂ 2ನೇ ಅಲೆ ಹೆಚ್ಚು ಅಪಾಯಕಾರಿಯಾಗಿತ್ತು.

Explainer: ಭಾರತದಲ್ಲಿ ಈಗ ಹರಡುತ್ತಿರುವ ಕೊರೊನಾ 2ನೇ ಅಲೆ ಮೊದಲ ಅಲೆಗಿಂತ ಸಂಪೂರ್ಣ ಭಿನ್ನ: ಏನಿದು 2ನೇ ಅಲೆ? ಏಕಿಷ್ಟು ಆತಂಕ?
ಸಾಂದರ್ಭಿಕ ಚಿತ್ರ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 02, 2021 | 9:47 PM

ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆ ಆರಂಭವಾಗಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ದೇಶದಲ್ಲಿ ಈಗ ಮತ್ತೆ ಲಾಕ್​ಡೌನ್ ಬಗ್ಗೆ ಚರ್ಚೆಯಾಗುತ್ತಿದೆ. ಕಳೆದ ವರ್ಷದ ಲಾಕ್​ಡೌನ್​ನಿಂದ ಸಮಾಜದ ಎಲ್ಲ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಈಗ ಮತ್ತೆ ಯಾರಿಗೂ ಕೂಡ ಲಾಕ್​ಡೌನ್ ವಿಧಿಸುವುದು ಬೇಡವಾಗಿದೆ. ಆದರೇ, ಕೊರೊನಾ ಹೊಸ ಕೇಸ್ ಗಳ ಹೆಚ್ಚಳದಿಂದಾಗಿ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಭಾಗಶಃ ಲಾಕ್​ಡೌನ್ ಘೋಷಿಸಲಾಗಿದೆ. ದೇಶದಲ್ಲಿ 2ನೇ ಅಲೆಯ ಅಪಾಯದ ಬಗ್ಗೆ ಈ ಬರಹದಲ್ಲಿ ವಿವರಿಸಿದ್ದಾರೆ ಟಿವಿ9 ಸುದ್ದಿವಾಹಿನಿಯ ನ್ಯಾಷನಲ್ ಕರೆಸ್ಪಾಂಡೆಂಟ್ ಎಸ್.ಚಂದ್ರಮೋಹನ್ ಕಟ್ಟಿಕೊಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 7ರವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ಸದ್ಯ ದೇಶದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಕೊರೊನಾ ಕೇಸ್ ಗಳ ಪೈಕಿ ಅರ್ಧದಷ್ಟು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಪತ್ತೆಯಾಗುತ್ತಿರುವುದು ವಿಶೇಷ. ಏಪ್ರಿಲ್ 2ರ ಶುಕ್ರವಾರ ದೇಶದಲ್ಲಿ 81,466 ಹೊಸ ಕೊರೊನಾ ಕೇಸ್ ಪತ್ತೆಯಾಗಿವೆ. ಇವುಗಳ ಪೈಕಿ 43,183 ಕೊರೊನಾ ಕೇಸ್​ಗಳು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಪತ್ತೆಯಾಗಿವೆ. ಶುಕ್ರವಾರ ದೇಶದಲ್ಲಿ ಕೊರೊನಾದಿಂದ 469 ಮಂದಿ ಸಾವನ್ನಪ್ಪಿದ್ದರೇ, ಇದರಲ್ಲಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 249 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೊನಾ ಕೇಸ್ ಹೆಚ್ಚಳ ಹಾಗೂ ಕೊರೊನಾ ಸಾವುಗಳಿಗೆ ಅರ್ಧಕ್ಕಿಂತ ಹೆಚ್ಚಿನ ಪಾಲು ಮಹಾರಾಷ್ಟ್ರ ರಾಜ್ಯದ್ದೇ ಇದೆ.

ಇಲ್ಲೊಂದು ವಿಶೇಷವೂ ಇದೆ. ಮಹಾರಾಷ್ಟ್ರದಲ್ಲಿ ಈಗ ಕೊರೊನಾ ಕೇಸ್ ಅತಿ ಹೆಚ್ಚಾಗಿ ಪತ್ತೆಯಾಗುತ್ತಿರುವುದು ಧಾರಾವಿಯಂಥ ಸ್ಲಂಗಳಲ್ಲಿ ಅಲ್ಲ. ಬದಲಿಗೆ ಶ್ರೀಮಂತರು ವಾಸಿಸುವ ಅಪಾರ್ಟ್​ಮೆಂಟ್, ಹೌಸಿಂಗ್ ಸೊಸೈಟಿಗಳಲ್ಲಿ. ಬಹುಶಃ ಸ್ಲಂಗಳಲ್ಲಿ ವಾಸಿಸುವ ಜನರ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧದ ಪ್ರತಿಕಾಯಗಳು ಬೆಳವಣಿಗೆ ಆಗಿರಬಹುದು. ಈ ಪ್ರತಿಕಾಯಗಳು ವೈರಸ್ ದೇಹದೊಳಗೆ ಎಂಟ್ರಿಯಾಗಲು ಅವಕಾಶ ಕೊಡಲ್ಲ. ಹೀಗಾಗಿ ಮುಂಬೈ, ಮಹಾರಾಷ್ಟ್ರದ ಸ್ಲಂಗಳಲ್ಲಿ ಕಡಿಮೆ ಹೊಸ ಕೊರೊನಾ ಕೇಸ್ ಪತ್ತೆಯಾಗುತ್ತಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಮೊದಲ ಅಲೆಗಿಂತ 2ನೇ ಅಲೆ ಭಿನ್ನ! ದೇಶದಲ್ಲಿ ಈ ವರ್ಷದ ಫೆಬ್ರವರಿ 22ರಂದು ಹತ್ತು ಸಾವಿರ ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿದ್ದವು. ಆದರೇ 10 ಸಾವಿರದಿಂದ 82 ಸಾವಿರ ತಲುಪಲು ಕೊರೊನಾ ವೈರಸ್ ಕೇವಲ 40 ದಿನಗಳನ್ನು ತೆಗೆದುಕೊಂಡಿದೆ. ಕಳೆದ ವರ್ಷ ಜೂನ್ 11 ರಂದು ಮೊದಲ ಬಾರಿಗೆ ದೇಶದಲ್ಲಿ ಕೊರೊನಾ ಹತ್ತು ಸಾವಿರದ ಗಡಿ ದಾಟಿತ್ತು. ನಿತ್ಯ ಪತ್ತೆಯಾಗುವ ಕೇಸ್ ಗಳಲ್ಲಿ 80 ಸಾವಿರದ ಗಡಿ ದಾಟಲು ಸೆಪ್ಟೆಂಬರ್ 2ರವರೆಗೂ ಕಾಲಾವಕಾಶ ತೆಗೆದುಕೊಂಡಿತ್ತು. ಅಂದರೇ, ಕಳೆದ ವರ್ಷ ನಿತ್ಯ ಪತ್ತೆಯಾಗುವ ಕೇಸ್ ಗಳು 10 ಸಾವಿರದಿಂದ 83 ಸಾವಿರ ತಲುಪಲು 83 ದಿನ ತೆಗೆದುಕೊಂಡಿತ್ತು. ಆದರೆ, ಇದಕ್ಕೆ ಹೋಲಿಸಿ ನೋಡಿದರೆ, ಕಳೆದ ವರ್ಷಕ್ಕಿಂತ ಈ ವರ್ಷ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ಕಡಿಮೆ ಸಮಯದಲ್ಲೇ ಹೆಚ್ಚಿನ ಕೊರೊನಾ ಕೇಸ್ ಪತ್ತೆಯಾಗುತ್ತಿವೆ. ಅಂದರೆ, ಎರಡನೇ ಅಲೆಯಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ ಎನ್ನುವುದನ್ನು ಈ ಅಂಕಿಅಂಶಗಳೇ ಸ್ಪಷ್ಟವಾಗಿ ಹೇಳುತ್ತಿವೆ.

ವೈದ್ಯಕೀಯ ಕ್ಷೇತ್ರದ ತಜ್ಞರು ಹೇಳುವ ಪ್ರಕಾರವೂ ಕೂಡ ಎರಡನೇ ಅಲೆಯಲ್ಲಿ ಕೊರೊನಾ ವೈರಸ್ ಬಹಳ ವೇಗವಾಗಿ ಹರಡುತ್ತೆ. ಆದರೇ, ಮೊದಲನೇ ಅಲೆಯಷ್ಟು ಸಾವು ಸಂಭವಿಸಲ್ಲ. ಕಳೆದ ವರ್ಷ ಭಾರತ ಹಾಗೂ ಜಗತ್ತಿಗೆ ಕೊರೊನಾ ವೈರಸ್ ವಕ್ಕರಿಸಿದಾಗ, ಈ ರೋಗದ ಬಗ್ಗೆ ವೈದ್ಯಕೀಯ ಲೋಕಕ್ಕೂ ಸರಿಯಾದ ಮಾಹಿತಿ ಇರಲಿಲ್ಲ. ಆದರೆ, ಈಗ ಕಳೆದೊಂದು ವರ್ಷದಲ್ಲಿ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದೆ. ವೈರಸ್ ಗೆ ಹೇಗೆ ಚಿಕಿತ್ಸೆ ನೀಡಬೇಕು, ವೈರಸ್ ಹೇಗೆ ವರ್ತಿಸುತ್ತೆ, ವೈರಸ್ ಹರಡದಂತೆ ತಡೆಯುವ ಬಗೆ ಹೇಗೆ ಎನ್ನುವ ಬಗ್ಗೆ ವೈದ್ಯಕೀಯ ಲೋಕದ ತಜ್ಞರಿಗೆ ಚೆನ್ನಾಗಿಯೇ ಅರಿವಾಗಿದೆ. ಆಸ್ಪತ್ರೆ, ಬೆಡ್, ವೆಂಟಿಲೇಟರ್, ಐಸಿಯು ವಿಷಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಚೆನ್ನಾಗಿ ಕೊರೊನಾ ವೈರಸ್ ಎದುರಿಸಲು ದೇಶ ಸಜ್ಜಾಗಿದೆ.

ಕೊರೊನಾ ವೈರಸ್ ಹರಡದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತೆ ದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ . ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಭೌತಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಅನಗತ್ಯವಾಗಿ ಜನದಟ್ಟಣೆಯ ಪ್ರದೇಶಗಳಿಗೆ ಹೋಗದೇ ಇರುವ ಮುನ್ನೆಚ್ಚರಿಕೆ ಕ್ರಮಗಳನ್ನ ಜನರೇ ಸ್ವಪ್ರೇರಣೆಯಿಂದ ಪಾಲಿಸುವುದು ಅನಿವಾರ್ಯ.

ಈ ಮೂಲಕ ಮೊದಲ ಅಲೆಯ ಕೊರೊನಾ ವೈರಸ್ ಗಿಂತ 2ನೇ ಅಲೆಯ ಕೊರೊನಾ ಸಂಪೂರ್ಣ ಭಿನ್ನವಾಗಿದೆ ಎನ್ನುವುದು ಅಂಕಿಅಂಶಗಳಿಂದಲೇ ಸ್ಪಷ್ಟವಾಗಿದೆ. 1918-19ರಲ್ಲಿ ಸ್ಪಾನಿಷ್ ಪ್ಲೂ ಕೂಡ 2ನೇ ಅಲೆಯಲ್ಲಿ ಬಹಳ ಅಪಾಯಕಾರಿಯಾಗಿತ್ತು. ಸ್ಪಾನಿಷ್ ಪ್ಲೂ 2ನೇ ಅಲೆಯಲ್ಲಿ ಎರಡೇ ದಿನಕ್ಕೆ ಜನರು ಸಾವನ್ನಪ್ಪುತ್ತಿದ್ದರು. ದೇಶದಲ್ಲಿ ಈಗ ಕೊರೊನಾದ ಎರಡನೇ ಅಲೆಯಲ್ಲಿ ಕೊರೊನಾದ ಹೊಸ ಕೇಸ್ ಹೆಚ್ಚಾಗುತ್ತಿವೆ. ಆದರೇ, ಕಡಿಮೆ ಸಾವು ಸಂಭವಿಸುತ್ತಿವೆ ಎಂದು ವೈರಸ್ ಅನ್ನು ಹಗುರವಾಗಿ ತೆಗೆದುಕೊಳ್ಳಬಾರದು.

Corona virus

ಪ್ರಾತಿನಿಧಿಕ ಚಿತ್ರ

ಲಾಕ್​ಡೌನ್​​ಗೆ ಎಲ್ಲ ರಾಜ್ಯಗಳ ಹಿಂಜರಿಕೆ ಕೊರೊನಾ ಸೋಂಕು ಹರಡದಂತೆ ತಡೆಯಲು ಕಳೆದ ವರ್ಷ ಮಾರ್ಚ್ 24 ರಂದು ಪ್ರಧಾನಿ ಮೋದಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರು. ಹೀಗಾಗಿ ಮತ್ತೆ ಲಾಕ್​ಡೌನ್ ಘೋಷಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಆದರೇ, ಸಂಪೂರ್ಣ ಲಾಕ್​ಡೌನ್ ವಿಧಿಸಲು ಯಾವುದೇ ರಾಜ್ಯ ಸರ್ಕಾರ ಒಲವು ತೋರುತ್ತಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಲಾಕ್​ಡೌನ್ ಜಾರಿಗೊಳಿಸುವ ಚಿಂತನೆ ಇಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕರ್ನಾಟಕದಲ್ಲೂ ಲಾಕ್ ಡೌನ್, ಮಿನಿ ಲಾಕ್ ಡೌನ್, ನೈಟ್ ಕರ್ಪ್ಯೂ ಜಾರಿಗೊಳಿಸಲ್ಲ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರಾಗಿದ್ದವರ ಪೈಕಿ ಶೇ.94 ರಷ್ಟು ಜನರು ಗುಣಮುಖರಾಗಿದ್ದಾರೆ. ಕಳೆದೊಂದು ತಿಂಗಳಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಸ್ಪಲ್ಪ ಕುಸಿಯುತ್ತಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದೊಂದು ತಿಂಗಳ ಹಿಂದೆ ದೇಶದಲ್ಲಿ ಕೊರೊನಾದ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದೂವರೆ ಲಕ್ಷಕ್ಕೆ ಕುಸಿದಿತ್ತು. ಆದರೇ, ಏಪ್ರಿಲ್ 2ರ ಶುಕ್ರವಾರ ದೇಶದಲ್ಲಿ ಸಕ್ರಿಯ ಕೊರೊನಾ ಕೇಸ್ ಗಳ ಸಂಖ್ಯೆ ಆರು ಲಕ್ಷದ ಹದಿನಾಲ್ಕು ಸಾವಿರಕ್ಕೆ ಏರಿಕೆಯಾಗಿದೆ.

ದೇಶದಲ್ಲಿ 11 ರಾಜ್ಯಗಳಲ್ಲಿ ಪರಿಸ್ಥಿತಿ ವಿಷಮ ದೇಶದಲ್ಲಿ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಕೇರಳ ಸೇರಿದಂತೆ ಹನ್ನೊಂದು ರಾಜ್ಯಗಳಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ಇದು ಕಳವಳಕಾರಿಯಾಗಿದೆ ಎಂದು ಕೇಂದ್ರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಶುಕ್ರವಾರ ನಡೆಸಿದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಹೇಳಿದ್ದಾರೆ. 11 ರಾಜ್ಯಗಳು ಕೊರೊನಾ ವೈರಸ್ ಹರಡದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತೆ ಜಾರಿಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ. ಇದರ ಪರಿಣಾಮವಾಗಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ಜಿಮ್, ಪಬ್, ಬಾರ್, ರೆಸ್ಟೊರೆಂಟ್, ಸ್ವಿಮ್ಮಿಂಗ್ ಫೂಲ್ ಗಳ ಮೇಲೆ ಕೆಲ ನಿರ್ಬಂಧ ವಿಧಿಸಲಾಗಿದೆ. ಮಹಾರಾಷ್ಟ್ರದ ನಾಗಪುರ, ಅಕೋಲಾ, ಅಮರಾವತಿ, ಪರ್ಬಾನಿ ಜಿಲ್ಲೆಗಳಲ್ಲಿ ಲಾಕ್ ಡೌನ್ ಅನ್ನು ಮತ್ತೆ ಜಾರಿಗೊಳಿಸಲಾಗಿದೆ. ಪುಣೆಯಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ಉತ್ತರದ ಅನೇಕ ರಾಜ್ಯಗಳಲ್ಲಿ ಕೆಲ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ .

ಕಳೆದ ವರ್ಷ ಪ್ರಧಾನಿ ಮೋದಿ ಘೋಷಿಸಿದ ಲಾಕ್​ಡೌನ್​ನಿಂದಾಗಿ ಕೊರೊನಾ ವೈರಸ್ ಹರಡದಂತೆ ತಡೆಯುವಲ್ಲಿ ಭಾರತ ಯಶಸ್ವಿಯಾಯಿತು . ಹೆಚ್ಚಿನ ಸಾವು ಸಂಭವಿಸದಂತೆ ತಡೆಯುವಲ್ಲಿ ಲಾಕ್ ಡೌನ್ ನಿಂದ ಸಾಧ್ಯವಾಯಿತು ಎಂದು ಕೇಂದ್ರ ಸರ್ಕಾರ ತನ್ನ ಲಾಕ್​ಡೌನ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ. ದೇಶದಲ್ಲಿ ಜನರಿಗೆ ಕಳೆದ ವರ್ಷ ಕೊರೊನಾ ಬಗ್ಗೆ ಇದ್ದಷ್ಟು ಭಯ, ಆತಂಕ ಈಗ ಇಲ್ಲ. ಹೀಗಾಗಿಯೇ ಮೈ ಮರೆಯುತ್ತಿದ್ದಾರೆ. ಕೊರೊನಾ ವೈರಸ್​ಗೆ ಡೋಂಟ್​ಕೇರ್ ಎನ್ನುತ್ತಿದ್ದಾರೆ. ಕಳೆದ ವರ್ಷ ಕೊರೊನಾ ವೈರಸ್ ಗೆ ಲಸಿಕೆ ಬಂದರೇ, ಕೊರೊನಾ ವೈರಸ್ ಅನ್ನು ಮೆಟ್ಟಿ ನಿಲ್ಲಬಹುದು ಎನ್ನುವ ಭಾವನೆ ಜನರಲ್ಲಿತ್ತು. ಲಸಿಕೆ ಬರುವುದನ್ನೇ ಜನರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದರು. ಆದರೇ, ಈ ವರ್ಷ ಕೊರೊನಾ ವೈರಸ್ ವಿರುದ್ಧದ ಲಸಿಕೆ ಬಂದರೂ, ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿಲ್ಲ. ಇದೊಂಥರ ವಿಚಿತ್ರ. ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ, ಜನರು ಲಸಿಕೆ ಪಡೆಯಲು ಈಗ ಹಿಂದೇಟು ಹಾಕುತ್ತಿದ್ದಾರೆ.

(What is newly spreading Corona 2nd wave here is the full details)

ಇದನ್ನೂ ಓದಿ: ಕೊವಿಡ್ ಹಾವಳಿ ಶಾಂತವಾದ ನಂತರ ಹುಟ್ಟಿಕೊಳ್ಳಲಿವೆಯೇ ಸೂಪರ್ ಬ್ಯಾಕ್ಟೀರಿಯಾಗಳು?

ಇದನ್ನೂ ಓದಿ: ಕೊರೊನಾ ತಡೆಗೆ ಹೊಸ ಮಾರ್ಗಸೂಚಿ: ಬಾರ್​, ರೆಸ್ಟೋರೆಂಟ್, ಜಿಮ್, ಸ್ವಿಮ್​ಗೆ ನಿರ್ಬಂಧ

Published On - 9:46 pm, Fri, 2 April 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್