ಭಾರತದಲ್ಲಿ ಒಂದೇ ದಿನ 3,689 ಜನ ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಬಲಿ
ಭಾರತದಲ್ಲಿ ಒಂದೇ ದಿನದಲ್ಲಿ ಕೊರೊನಾಗೆ 3,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದು ಆತಂಕ ಹೆಚ್ಚಾಗಿದೆ.
ದೆಹಲಿ: ಭಾರತ ದೇಶದಲ್ಲಿ ಭಾನುವಾರ ಒಂದೇ ದಿನ 3,689 ಜನ ಕೊವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಅಂದರೆ ಶನಿವಾರದಿಂದ ದೈನಂದಿನ ಕೊವಿಡ್ 19 ಪ್ರಕರಣಗಳ ಸಂಖ್ಯೆ 4,01,993ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಕೊರೊನಾ ಸಾಂಕ್ರಾಮಿಕ ಕಾಯಿಲೆಗೆ ಒಳಗಾಗಿ 3,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳು ಈ ಕೆಳಗಿನಂತಿವೆ.
ಮಹಾರಾಷ್ಟ್ರದಲ್ಲಿ 63,282 ಪ್ರಕರಣಗಳು, ಕರ್ನಾಟಕದಲ್ಲಿ 40,990 ಪ್ರಕರಣಗಳು, ಕೇರಳ 35,636 ಪ್ರಕರಣಗಳು, ಉತ್ತರ ಪ್ರದೇಶ 30,180 ಪ್ರಕರಣಗಳು ಮತ್ತು 25,219 ಕೊರೊನಾ ಹೊಸ ಪ್ರಕರಣವನ್ನು ದೆಹಲಿ ದಾಖಲಿಸಿದೆ.
ಶೇ.49.76ರಷ್ಟು ಈ ಐದು ರಾಜ್ಯಗಳವರಾಗಿದ್ದು, ಕೊರೊನಾ ಸಾಂಕ್ರಾಮಿಕ ದಾಖಲಾತಿಯಲ್ಲಿ ಮಹಾರಾಷ್ಟ್ರ ಶೇ.16.16ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 802 ಜನ ಮಹಾರಾಷ್ಟ್ರದಲ್ಲಿ ಬಲಿಯಾಗಿದ್ದು, ಇಂದೇ ದಿನ ಗರಿಷ್ಠ ಸಾವಿಗೀಡಾದ ರಾಜ್ಯ ಮಹಾರಾಷ್ಟ್ರವಾಗಿದೆ. ಇನ್ನು, ದೆಹಲಿಯಲ್ಲಿ 412 ಜನ ಕೊವಿಡ್19ನಿಂದ ಸಾವಿಗೀಡಾಗಿದ್ದಾರೆ.
ದೇಶದಲ್ಲಿ ಪ್ರಸ್ತುತ 33,49,644 ಸಕ್ರಿಯ ಪ್ರಕರಣಗಳಿವೆ. ಮತ್ತು ಒಟ್ಟು 2,15,542 ಜನ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,07,865 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇಲ್ಲಿಯವರೆಗೆ ಕೊರೊನಾ ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡ ಜನರ ಸಂಖ್ಯೆ 1,59,92,271. ಹಾಗೂ ಈವರೆಗೆ 15,68,16,031 ಜನರಿಗೆ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ತಂದೆಗೆ ಕೊರೊನಾ ಚಿಕಿತ್ಸೆ ಕೊಡಿಸಲು ಮಗಳ ಪರದಾಟ; ಕರೆಯನ್ನು ಸ್ವೀಕರಿಸದ ಅಧಿಕಾರಿಗಳು
(single day highest death in coronavirus disease in India)
Published On - 12:54 pm, Sun, 2 May 21