ಡಿಎಂಕೆ-ಎಐಎಡಿಎಂಕೆ ಪಾಲಿಗೆ ಪ್ರತಿಷ್ಠೆಯ ಕಣ, ತಮಿಳುನಾಡಿನ ಗಾದಿಯೇರುವಂತೆ ಮಾಡಲಿದೆಯೇ  ಸ್ಟಾಲಿನ್ ಕಾರ್ಯತಂತ್ರ ?

Tamil Nadu Assembly Elections 2021: 2016 ರ ಚುನಾವಣೆ ಕರುಣಾನಿಧಿಯವರ ಕೊನೆಯ ಚುನಾವಣೆ ಆಗಿತ್ತು. ತಮ್ಮ ಪ್ರತಿಸ್ಪರ್ಧಿ ಜಯಲಲಿತಾ ವಿರುದ್ಧದ ಚುನಾವಣೆಯನ್ನು ಹೇಗೋ ನಿಭಾಯಿಸಿದ್ದ ಸ್ಟಾಲಿನ್ ಈಗ ಮತ್ತಷ್ಟು ಪಳಗಿದ್ದಾರೆ. ಕರುಣಾನಿಧಿ ಇಲ್ಲದ ಜಯಲಲಿತಾ ನಿಧನ ನಂತರದ ಈ ಚುನಾವಣೆ ಸ್ಟಾಲಿನ್​ಗೆ ಅಗ್ನಿ ಪರೀಕ್ಷೆಯೇ

ಡಿಎಂಕೆ-ಎಐಎಡಿಎಂಕೆ ಪಾಲಿಗೆ ಪ್ರತಿಷ್ಠೆಯ ಕಣ, ತಮಿಳುನಾಡಿನ ಗಾದಿಯೇರುವಂತೆ ಮಾಡಲಿದೆಯೇ  ಸ್ಟಾಲಿನ್ ಕಾರ್ಯತಂತ್ರ ?
ಎಂ.ಕೆ.ಸ್ಟಾಲಿನ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 30, 2021 | 8:11 PM

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಹಿಂದೆ  ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಬಹುತೇಕ ಸ್ಥಾನಗಳನ್ನು ಗೆದ್ದಿತ್ತು. ಆಡಳಿತಾರೂಢ ಎಐಎಡಿಎಂಕೆ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂದಿತ್ತು. ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಡಿಎಂಕೆ ನಾಯಕ ಕರುಣಾನಿಧಿ ನಿಧನದ ನಂತರ ನಡೆದ ಮೊದಲ ಸ್ಥಳೀಯ ಚುನಾವಣೆ ಅದಾಗಿತ್ತು. ಸ್ಥಳೀಯ ಚುನಾವಣೆಯ ಗೆಲುವು ಈ  ಬಾರಿ ವಿಧಾನಸಭೆಯಲ್ಲಿ ಸ್ಪರ್ಧಿಸಿದ  ಡಿಎಂಕೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬಿದೆ ಎಂದರೆ ತಪ್ಪಾಗಲಾರದು.

ಜಯಲಲಿತಾ ನಿಧನ ನಂತರದ ರಾಜಕೀಯ ಬೆಳವಣಿಗೆ 2016 ರಲ್ಲಿ ಜಯಲಲಿತಾ ನಿಧನರಾಗಿದ್ದು, ಎರಡು ವರ್ಷದ ನಂತರ ಅಂದರೆ 2018ರಲ್ಲಿ ಕರುಣಾನಿಧಿ ವಿಧಿವಶರಾದರು.ಜಯಲಲಿತಾ ನಿಧನದ ನಂತರ ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಚಿಹ್ನೆಯ ಮುಂದೆ ಇದ್ದದ್ದು ವಿ.ಕೆ. ಶಶಿಕಲಾ ಮತ್ತು ಇ.ಪಳನಿಸ್ವಾಮಿ ಹೆಸರು. ಆದಾಗ್ಯೂ ಶಶಿಕಲಾಗೆ ಸಾರಥ್ಯ ನೀಡಲು ಎಐಎಡಿಎಂಕೆ ಹಿಂಜರಿದಿದ್ದು,ಇ.ಪಳನಿಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿತು. ಆದರೂ ಜಯಲಲಿತಾ ಅವರಷ್ಟು ಜಾಣ್ಮೆಯಿಂದ ಪಕ್ಷ ಮುನ್ನಡೆಸುವ ಸಾಮರ್ಥ್ಯ ಪಳನಿ ಸ್ವಾಮಿ ಅವರಲಿಲ್ಲ.

ಇತ್ತ ಡಿಎಂಕೆ ಕರುಣಾನಿಧಿ ಅವರ ಪುತ್ರ ಎಂಕೆ ಸ್ಟಾಲಿನ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿತು. ಸ್ಟಾಲಿನ್ ಅವರಿಗೆ ಪಕ್ಷದ ಚುಕ್ಕಾಣಿ ನೀಡಿದರೂ ಸಹೋದರ ಎಂಕೆ ಅಳಗಿರಿ,ಸಹೋದರಿ ಕನಿಮೊಳಿಯಿಂದ ಪೈಪೋಟಿ ಎದುರಿಸಬೇಕಾಗಿ ಬಂದಿತ್ತು. ಆದರೆ ಸ್ಟಾಲಿನ್ ಅದನ್ನು ಹೇಗೋ ನಿಭಾಯಿಸಿದರು.

2021ರಲ್ಲಿನ ವಿಧಾನಸಭಾ ಚುನಾವಣೆ ಸ್ಟಾಲಿನ್ ಅವರ ರಾಜಕೀಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಯಾಕೆಂದರೆ ಕರುಣಾನಿಧಿಯ ಪುತ್ರ ಎಂಬ ಕಾರಣದಿಂದ ಜನರು ಸ್ಟಾಲಿನ್ ಕೈ ಹಿಡಿಯಲಿದ್ದಾರೆಯೇ? ಅಥವಾ ಎಐಎಡಿಎಂಕೆಯ ವಿರುದ್ಧ ಸಮರ್ಥ ನಾಯಕರೊಬ್ಬರ ಅಗತ್ಯವಿದೆ ಎಂಬ ಕಾರಣದಿಂದ ಡಿಎಂಕೆ ಪರ ನಿಲ್ಲಲಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಎಐಎಡಿಎಂಕೆಯ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ವಿರುದ್ಧ ಸ್ಟಾಲಿನ್ ಏಕಾಂಗಿಯಾಗಿ ನಿಲ್ಲಬೇಕಾದರೆ ಅಪ್ಪನಿಂದ ಪಡೆದ ರಾಜಕೀಯ ಪಾಠಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಒಂದು ವೇಳೆ ಸ್ಟಾಲಿನ್ ಈ ಚುನಾವಣೆಯಲ್ಲಿ ಗೆದ್ದರೆ ಅವರು ತಮಿಳುನಾಡಿನ ಪ್ರಮುಖ ನಾಯಕರಾಗಿ ಪದೋನ್ನತಿ ಪಡೆಯಲಿದ್ದಾರೆ.

ಸ್ಟಾಲಿನ್​ಗಿದು ಅಗ್ನಿ ಪರೀಕ್ಷೆ 2016 ರ ಚುನಾವಣೆ ಕರುಣಾನಿಧಿಯವರ ಕೊನೆಯ ಚುನಾವಣೆ ಆಗಿತ್ತು. ತಮ್ಮ ಪ್ರತಿಸ್ಪರ್ಧಿ ಜಯಲಲಿತಾ ವಿರುದ್ಧದ ಚುನಾವಣೆಯನ್ನು ಹೇಗೋ ನಿಭಾಯಿಸಿದ್ದ ಸ್ಟಾಲಿನ್ ಈಗ ಮತ್ತಷ್ಟು ಪಳಗಿದ್ದಾರೆ. ಕರುಣಾನಿಧಿ ಇಲ್ಲದ ಜಯಲಲಿತಾ ನಿಧನ ನಂತರದ ಈ ಚುನಾವಣೆ ಸ್ಟಾಲಿನ್​ಗೆ ಅಗ್ನಿ ಪರೀಕ್ಷೆಯೇ. 1967ರಲ್ಲಿ ಚುನಾವಣೆ ನಡೆದಾಗ ಸ್ಟಾಲಿನ್ ಗೆ ಆಗ 14 ವರ್ಷ. ಅಪ್ಪ ಕರುಣಾನಿಧಿಯ ಗರಡಿಯಲ್ಲಿ ಪಳಗಿದ ಸ್ಟಾಲಿನ್ 1967ರ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಿದ್ದರು. ಈಗ 68 ವರ್ಷದವರಾಗಿರುವ ಸ್ಟಾಲಿನ್ ಅಪ್ಪ ಕರುಣಾನಿಧಿ 5 ಬಾರಿ ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.

ಕುಟುಂಬ ರಾಜಕಾರಣದ ಚುಕ್ಕಾಣಿ ಸ್ಟಾಲಿನ್​ಗೆ 1991ರಲ್ಲಿ ಮೊದಲ ಚುನಾವಣೆ ಜಯಸಿದ್ದ ಸ್ಟಾಲಿನ್ 6 ಬಾರಿ ಶಾಸಕರಾಗಿದ್ದಾರೆ. ಹದಿಹರೆಯದಲ್ಲಿಯೇ ರಾಜಕೀಯ ಪ್ರವೇಶಿಸಿದ್ದ ಸ್ಟಾಲಿನ್ ತುರ್ತು ಪರಿಸ್ಥಿತಿ ವೇಳೆ ಜೈಲಿಗೂ ಹೋಗಿದ್ದರು. 1990ರಲ್ಲಿ ಚೆನ್ನೈ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದ ಸ್ಟಾಲಿನ್ ಸಿಂಗಾರ ಚೆನ್ನೈ ಯೋಜನೆಯ ಮೂಲಕ ಚೆನ್ನೈ ನಗರದ ಸೌಂದರ್ಯ ಹೆಚ್ಚಿಸುವ ಕ್ರಮಗಳವನ್ನು ಹಮ್ಮಿಕೊಂಡಿದ್ದರು. ಸದಸ್ಯತ್ವ ನಿಯಮ ಉಲ್ಲಂಘನೆ ಮಾಡಿದ ವಿಚಾರದಲ್ಲಿ ಎರಡನೇ ಚುನಾವಣೆ ವಿವಾದಕ್ಕೀಡಾಗಿತ್ತು. ಈ ವಿಷಯದಲ್ಲಿ ರಾಜೀನಾಮೆ ಕೊಡಬೇಕಾಗಿ ಬಂದಿದ್ದರೂ ಉತ್ತಮ ಆಡಳಿತಗಾರ ಎಂಬ ವ್ಯಕ್ತಿತ್ವ ಅವರಿಗಿತ್ತು.

ಸ್ಟಾಲಿನ್  ಕಾರ್ಯತಂತ್ರ  ಕರುಣಾನಿಧಿ ವಿಧಿವಶವಾದ ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಎಂಟು ಪಕ್ಷಗಳ ಜತೆ ಮೈತ್ರಿ ಮಾಡುವ ಮೂಲಕ ಸ್ಟಾಲಿನ್ ಸ್ವತಃ ಡಿಎಂಕೆ ಮಾತ್ರವಲ್ಲದೆ ಇಡೀ ಮೈತ್ರಿಕೂಟದ ನಾಯಕ ಎಂದು ಸಾಬೀತುಪಡಿಸಿದ್ದಾರೆ.

2016ರ ಚುನಾವಣೆಯಲ್ಲಿ ಡಿಎಂಕೆ 178 ಸ್ಥಾನಗಳಿಗೆ ಸ್ಪರ್ಧಿಸಿತು. ಇದು ಈ ಬಾರಿ 173 ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿದೆ. 2016 ರಲ್ಲಿ ಕರುಣಾನಿಧಿ ಇದ್ದಾಗ ಕಾಂಗ್ರೆಸ್ 41 ರಲ್ಲಿ ಸ್ಪರ್ಧಿಸಿತು ಆದರೆ ಅಲ್ಲಿ  ಕೇವಲ 25 ರೊಂದಿಗೆ ತೃಪ್ತರಾಗಬೇಕಾಯಿತು. ಎಡ ಪಕ್ಷಗಳನ್ನು ಕರೆತಂದು ಮತ್ತು ಡಿಎಂಕೆ ಕೋಟಾದಿಂದ ಹೆಚ್ಚಿನ ಸ್ಥಾನಗಳನ್ನು ನೀಡುವ ಮೂಲಕ ಸ್ಟಾಲಿನ್ ಕಾರ್ಯತಂತ್ರ ಹೆಣೆದಿದ್ದು,ಆವರ ರಾಜತಂತ್ರದ ನಡೆ ಈ ಚುನಾವಣೆಯಲ್ಲಿ ಪ್ರತಿಫಲಿಸಿದೆಯೇ ಎಂಬುದು ಮೇ 2 ರ ಚುನಾವಣಾ ಫಲಿತಾಂಶದಲ್ಲಿ ತಿಳಿದುಬರಲಿದೆ .

(Son rise in South Tamil Nadu Assembly election 2021 is a test for DMK leader MK Stalin)

ಇದನ್ನೂ ಓದಿ: Tamil Nadu Election 2021: ಎಂ.ಕೆ.ಸ್ಟಾಲಿನ್ ಪುತ್ರಿ ಮನೆ ಮೇಲೆ ಐಟಿ ದಾಳಿ; ಆದಾಯ ತೆರಿಗೆ ಇಲಾಖೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಡಿಎಂಕೆ

Exit Poll Results 2021: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳ ಗದ್ದುಗೆ ಯಾರಿಗೆ? ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರ ನೀಡುವ ಒಳನೋಟವೇನು?

Published On - 7:49 pm, Fri, 30 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್