ಪ್ರಧಾನಿ ಮೋದಿಯಂತೆ ಕಾಟನ್ ಸ್ಕಾರ್ಫ್ ಧರಿಸ್ತೀರಾ? ಹಾಗಿದ್ರೆ ಕೊರೊನಾ ವೈರಸ್ ಅಟ್ಯಾಕ್ ಮಾಡಬಹುದು ಎಚ್ಚರ

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಮುಖಕ್ಕೆ ಕಾಟನ್​ ಸ್ಕಾರ್ಪ್​ ಧರಿಸಿ ಮಾತನಾಡುತ್ತಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು

  • TV9 Web Team
  • Published On - 17:13 PM, 30 Apr 2021
ಪ್ರಧಾನಿ ಮೋದಿಯಂತೆ ಕಾಟನ್ ಸ್ಕಾರ್ಫ್ ಧರಿಸ್ತೀರಾ? ಹಾಗಿದ್ರೆ ಕೊರೊನಾ ವೈರಸ್ ಅಟ್ಯಾಕ್ ಮಾಡಬಹುದು ಎಚ್ಚರ
ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ಕೊರೊನಾ ವೈರಸ್​ ಮೊದಲ ಅಲೆ ಶಾಂತವಾಗುತ್ತಿದ್ದಂತೆ ಎರಡನೇ ಅಲೆ ಕಾಣಿಸಿಕೊಂಡಿದೆ. ಪ್ರತಿನಿತ್ಯ ಭಾರತದಲ್ಲಿ ಸುಮಾರು ನಾಲ್ಕು ಲಕ್ಷ ಕೇಸ್​ಗಳು ಬರುತ್ತಿವೆ. ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೂ ಅದು ಯಶಸ್ಸು ಕಾಣುತ್ತಿಲ್ಲ. ಹೀಗಿರುವಾಗಲೇ ಯಾವ ರೀತಿಯ ಮಾಸ್ಕ್​ ಧರಿಸಬೇಕು ಎನ್ನುವ ಬಗ್ಗೆ ಚರ್ಚೆ ಶುರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಮುಖಕ್ಕೆ ಕಾಟನ್​ ಸ್ಕಾರ್ಪ್​ ಧರಿಸಿ ಮಾತನಾಡುತ್ತಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಟವೆಲ್​ಅನ್ನು ಮಾಸ್ಕ್​ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಬಳಕೆ ಮಾಡುವುದು ಎಷ್ಟು ಪ್ರಯೋಜನಕಾರಿ  ಎನ್ನುವ ಚರ್ಚೆ ಜೋರಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಶಾಲನ್ನು ಮಾಸ್ಕ್​ ರೀತಿ ಬಳಕೆ ಮಾಡಿಕೊಂಡಿದ್ದನ್ನು ನೋಡಿದ ಅನೇಕರು ಅದನ್ನೇ ಅನುಸರಿಸಿದ್ದರು. ತಮ್ಮ ಬಳಿ ಇದ್ದ ಕರ್ಚೀಫ್​​​ಅನ್ನು ಬಳಕೆ ಮಾಡಿಕೊಂಡು ಅದನ್ನು ಮಾಸ್ಕ್​ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದರು. ಆದರೆ, ಇದು ವೈರಸ್​ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಮಾಸ್ಕ್​ ಯಾವ ರೀತಿ ಇರಬೇಕು ಮತ್ತು ಮಾಸ್ಕ್​ ಅನ್ನು ಯಾವ ರೀತಿ ಧರಿಸಬೇಕು ಎನ್ನುವ ಬಗ್ಗೆ ವೈದ್ಯರು ಸೂಚನೆ ನೀಡಿದ್ದಾರೆ. ಅಲ್ಲದೆ, ಕರ್ಚೀಫ್​ ಹಾಗೂ ಟವೆಲ್​ ಅನ್ನು ಮಾಸ್ಕ್​ ರೀತಿ ಬಳಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೂಡ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬಟ್ಟೆಯ ಮಾಸ್ಕ್​​ ಧರಿಸಿದಾಗ ಅದರ ಮೂಲಕ ವೈರಸ್​ ಸುಲಭವಾಗಿ ವ್ಯಕ್ತಿಯ ಮೂಗು ಸೇರಬಹುದು. ಅಲ್ಲದೆ, ಮೂಗನ್ನು ಬಿಟ್ಟು ಕೇವಲ ಬಾಯಿಗೆ ಮಾಸ್ಕ್​ ಹಾಕಿದರೂ ವೈರಸ್​ ದೇಹ ಸೇರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ, ಬಟ್ಟೆಯ ಮಾಸ್ಕ್​ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಾಯಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ವೈದ್ಯರು ಹೇಳುವ ಪ್ರಕಾರ ವ್ಯಕ್ತಿ ಎರಡೆರಡು ಮಾಸ್ಕ್​ ಧರಿಸಬೇಕಂತೆ. ಇದರಿಂದ ಡಬಲ್​ ಸುರಕ್ಷೆ ಸಿಗಲಿದೆ. ಬಟ್ಟೆಯ ಮಾಸ್ಕ್​ ಧರಿಸುವುದು ಅಷ್ಟು ಉತ್ತಮವಲ್ಲ. ಒಂದೊಮ್ಮೆ ಬಟ್ಟೆಯ ಮಾಸ್ಕ್​ ಧರಿಸುತ್ತೇನೆ ಎಂದರೆ ಎರಡು ಅಥವಾ ಮೂರು ಮಾಸ್ಕ್​ಗಳನ್ನು ಒಟ್ಟಿಗೆ ಧರಿಸಬೇಕು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ ಮೆಡಿಸನ್‌ ತಗೊಂಡ್ರೆ 99.97 % ಕೊರೊನಾ ಬರಲ್ವಂತೆ