ಪುದುಚೇರಿಯಲ್ಲಿ ಬಿಜೆಪಿಗೆ ಕಮಲ ಅರಳಿಸುವ ಹಂಬಲ, ಕಾಂಗ್ರೆಸ್​ಗೆ ಸ್ಥಾನ ಉಳಿಸಿಕೊಳ್ಳುವ ಹೆಣಗಾಟ

Puducherry Assembly Elections 2021: ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷರಾದ ನಮಶಿವಾಯಂ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದ ನಮಶಿವಾಯಂ ಮುಖ್ಯಮಂತ್ರಿ ಕುರ್ಚಿಯ ಹಂಬಲದಿಂದಲೇ ಪಕ್ಷ ತೊರೆದಿದ್ದರು.

ಪುದುಚೇರಿಯಲ್ಲಿ ಬಿಜೆಪಿಗೆ ಕಮಲ ಅರಳಿಸುವ ಹಂಬಲ, ಕಾಂಗ್ರೆಸ್​ಗೆ ಸ್ಥಾನ ಉಳಿಸಿಕೊಳ್ಳುವ ಹೆಣಗಾಟ
ಬಿಜೆಪಿ- ಕಾಂಗ್ರೆಸ್ ಧ್ವಜ
Follow us
ರಶ್ಮಿ ಕಲ್ಲಕಟ್ಟ
|

Updated on: Apr 30, 2021 | 9:29 PM

 30,000 ಮತದಾರರಿರುವ ವಿಧಾಸಭಾ ಕ್ಷೇತ್ರದಿಂದ 1,500 ಮತಗಳನ್ನು ಪಡೆದ ರಾಜ್ಯ ಅಧ್ಯಕ್ಷರ ಮತ್ತು ಅದೇ ಕ್ಷೇತ್ರದಿಂದ 174 ಮತಗಳನ್ನು ಪಡೆದ ಉಪಾಧ್ಯಕ್ಷರೊಂದಿಗೆ ಪುದುಚೇರಿಯಲ್ಲಿ ಅಧಿಕಾರ ನಡೆಸಲು ಬಿಜೆಪಿ ಸಜ್ಜಾಗಿದೆ. ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷಗಳಾದ ಎನ್ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ತೊರೆದ ಶಾಸಕರ ಬೆಂಬಲ ಬಿಜೆಪಿಗಿದೆ. ಇದು ಬಿಜೆಪಿಗೆ ಪ್ರತಿಷ್ಠೆಯ ಹೋರಾಟವಾಗಿದ್ದರೆ, ಅದು ಕಾಂಗ್ರೆಸ್​ಗೆ ಲಿಟ್ಮಸ್ ಪರೀಕ್ಷೆ. ಕಳೆದ ಬಾರಿ ಮಾತ್ರ ಹೆಸರಿನಲ್ಲಿ ಸ್ಪರ್ಧಿಸಿದ ಬಿಜೆಪಿ, ಈ ಬಾರಿ ಅದು ಸರ್ಕಾರ ರಚಿಸುತ್ತೇವೆ ಎಂಬ ಘೋಷಣೆಯೊಂದಿಗೆ ಮುಂದೆ ಬಂದಿದೆ. 2016 ರ ಚುನಾವಣೆಯಲ್ಲಿ ಬಿಜೆಪಿಯ ಮತ ಪಾಲು ಕೇವಲ ಶೇಕಡಾ 2.5 ರಷ್ಟಿತ್ತು. ಪುದುಚೇರಿಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಿರ್ಣಾಯಕ ಶಕ್ತಿಯಾಗಿರುವ ಕಾಂಗ್ರೆಸ್ ಈಗ ತನ್ನ ನಾಯಕರ ಪತನದ ದೊಡ್ಡ ಸವಾಲನ್ನು ಎದುರಿಸುತ್ತಿದೆ.

ಪುದುಚೇರಿ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ಹೊಂದಿಕೊಂಡ ನಾಲ್ಕು ಪ್ರದೇಶಗಳನ್ನು ಒಳಗೊಂಡಿರುವ ಕೇಂದ್ರ ಪ್ರದೇಶವಾಗಿದೆ. ಇಂಗ್ಲಿಷ್ ಮತ್ತು ಫ್ರೆಂಚ್ ಸೇರಿದಂತೆ ಐದು ಅಧಿಕೃತ ಭಾಷೆಗಳ 30 ಸ್ಥಾನಗಳ ಪೈಕಿ 23 ಸ್ಥಾನಗಳು ಪುದುಚೇರಿ ಪ್ರದೇಶದಲ್ಲಿವೆ. ಕಾರೈಕಲ್‌ನಲ್ಲಿ ಐದು ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಮಾಹಿ ಮತ್ತು ಯಾನಂನಲ್ಲಿ ತಲಾ ಒಂದು ಸ್ಥಾನಗಳಿವೆ.

ಪುದುಚೇರಿಯಲ್ಲಿ ಚುನಾವಣೆಗೆ ಮುನ್ನ ಶಾಸಕರು ಭಿನ್ನಾಭಿಪ್ರಾಯದಿಂದ ದೂರ ಹೋಗುತ್ತಿರುವುದು ಹೊಸತೇನಲ್ಲ. ಸರಾಸರಿ 33,000 ಮತದಾರರನ್ನು ಹೊಂದಿರುವ ಈ ಕ್ಷೇತ್ರಗಳಲ್ಲಿನ ಗೆಲುವನ್ನು ರಾಜಕೀಯದಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ. ಪಕ್ಷಗಳ ನಿಲುವಿಗಿಂತ ಅಭ್ಯರ್ಥಿಯ ವೈಯಕ್ತಿಕ ಪ್ರಭಾವವೇ ಇಲ್ಲಿ ಮುಖ್ಯವಾಗಿದೆ. 1964 ರಿಂದ 13 ಚುನಾವಣೆಗಳಲ್ಲಿ, ಕನಿಷ್ಠ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ಆಗಾಗ್ಗೆ ಸರ್ಕಾರ ರಚನೆಯಲ್ಲಿ ಸ್ವತಂತ್ರರ ಬೆಂಬಲ ನಿರ್ಣಾಯಕವಾಗಿತ್ತು.

2011 ರ ಚುನಾವಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್ ತೊರೆದು ಎನ್ಆರ್ ಕಾಂಗ್ರೆಸ್ ರಚಿಸಿದ ರಂಗಸ್ವಾಮಿ ವೈಯಕ್ತಿಕ ಪ್ರಭಾವದ ಮೂಲಕ ಅಧಿಕಾರಕ್ಕೆ ಬಂದರು. ಪುದುಚೇರಿಯ ಕಾಮರಾಜ್ ಎಂದೇ ಖ್ಯಾತಿ ಪಡೆದ ರಂಗಸ್ವಾಮಿ ಈಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಆದರೆ ಮೈತ್ರಿಕೂಟದ ನಾಯಕತ್ವವನ್ನು ವಹಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಯ ನಿಲುವು ನಿರ್ಣಾಯಕವಾಗಲಿದೆ.

ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷರಾದ ನಮಶಿವಾಯಂ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದ ನಮಶಿವಾಯಂ ಮುಖ್ಯಮಂತ್ರಿ ಕುರ್ಚಿಯ ಹಂಬಲದಿಂದಲೇ ಪಕ್ಷ ತೊರೆದಿದ್ದರು.

ಕಳೆದ ಚುನಾವಣೆಗಳಲ್ಲಿ ಕಣಕ್ಕಿಳಿಯದಿದ್ದರೂ, ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ತಮ್ಮ ಪ್ರಭಾವವನ್ನು ಮುಖ್ಯಮಂತ್ರಿ ಸ್ಥಾನವನ್ನು ಗೆಲ್ಲಲು ಬಳಸಿದ ನಾರಾಯಣಸ್ವಾಮಿ, ಈ ಚುನಾವಣೆಯ ಸಂಪೂರ್ಣ ಹೊಣೆಯನ್ನು ಹೊರಬೇಕಾಗುತ್ತದೆ. ಈ ಸೋಲು ಪಕ್ಷಕ್ಕೆ ಹೊಡೆತ ನೀಡಲಿದೆ ಎಂದು ಕಾಂಗ್ರೆಸ್ ನಾಯಕತ್ವ ಆತಂಕ ವ್ಯಕ್ತಪಡಿಸಿದೆ. ನಾರಾಯಣಸ್ವಾಮಿ ಅವರು ಡಿಎಂಕೆ ಜೊತೆಗಿನ ಸಂಬಂಧವನ್ನು ಬಲಪಡಿಸುವುದು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಡಿಎಂಕೆ- ಕಾಂಗ್ರೆಸ್ ಮೈತ್ರಿ ಇಲ್ಲಿ ಸ್ಪರ್ಧಿಸುತ್ತಿದ್ದು ಈ ಮೊದಲು ನಾಲ್ಕು ಬಾರಿ ಪುದುಚೇರಿಯನ್ನು ಆಳಿದ ಪಕ್ಷವಾಗಿದೆ ಡಿಎಂಕೆ.

ಕಳೆದ ಬಾರಿ ಎನ್‌ಆರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅನ್ನು ಒಟ್ಟಾಗಿ ವಿರೋಧಿಸಿದ್ದ ಎಐಎಡಿಎಂಕೆ ಈ ಬಾರಿ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಸಂಘಟನಾ ಬಲದಲ್ಲಿ ಎಐಎಡಿಎಂಕೆ ಬಿಜೆಪಿಗಿಂತ ಬಹಳ ಮುಂದಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಚುನಾವಣಾ ಫಲಿತಾಂಶಕ್ಕಾಗಿ ಮೇ 2ರವರೆಗೆ ಕಾಯಬೇಕಿದೆ.

ಇದನ್ನೂ ಓದಿ:  Exit Poll Results 2021: ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ; ಫಲಿತಾಂಶಕ್ಕೂ ಮುನ್ನ ಈ ಸಮೀಕ್ಷೆಗಳನ್ನೂ ಅವಲೋಕಿಸಿ

Exit Poll Results 2021: ಪುದುಚೇರಿಯಲ್ಲಿಅಧಿಕಾರಕ್ಕೇರಲಿದೆ ಎನ್​ಡಿಎ; Tv9-Polstrat ಸಮೀಕ್ಷೆ

(In Puducherry BJP led NDA projected to win Congress struggles to retain Seat)