AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಅಂತ್ಯ; ಪಶ್ಚಿಮ ಬಂಗಾಳದಲ್ಲಿ ಭಾಗಶಃ ಲಾಕ್​ಡೌನ್ ಘೋಷಣೆ

ಇಂದು ಪಶ್ಚಿಮ ಬಂಗಾಳದಲ್ಲಿ ಒಟ್ಟು 17,403 ಹೊಸ ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ. ಈವರೆಗೆ ಇಂದು ಒಂದೇ ದಿನ ಪತ್ತೆಯಾದ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಚುನಾವಣಾ ಪ್ರಚಾರ ಸಭೆಗಳು ಕೊರೊನಾ ಸೋಂಕು ಹೆಚ್ಚಿಸುವ ಭೀತಿ ಹುಟ್ಟಿಸಿವೆ.

ಚುನಾವಣೆ ಅಂತ್ಯ; ಪಶ್ಚಿಮ ಬಂಗಾಳದಲ್ಲಿ ಭಾಗಶಃ ಲಾಕ್​ಡೌನ್ ಘೋಷಣೆ
ಮಮತಾ ಬ್ಯಾನರ್ಜಿ- ಸುವೇಂದು ಅಧಿಕಾರಿ ಚುನಾವಣೆಯಲ್ಲಿ ಭರ್ಜರಿ ಹಣಾಹಣಿ ನಡೆಸಿದ್ದರು.
guruganesh bhat
|

Updated on: Apr 30, 2021 | 9:31 PM

Share

ಕೋಲ್ಕತ್ತಾ: ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಭಾಗಶಃ ಲಾಕ್​ಡೌನ್ ಜಾರಿಯಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಈ ಘೋಷಣೆ ಮಾಡಿದ್ದು, ಬೆಳಗ್ಗೆ 7ರಿಂದ 10 ಗಂಟೆ ಮತ್ತು ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಮಾತ್ರ ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಶಾಪಿಂಗ್ ಮಳಿಗೆ, ಬ್ಯೂಟಿ ಪಾರ್ಲರ್, ಚಲನಚಿತ್ರಮಂದಿರ, ಸ್ಪಾ, ಜಿಮ್, ಬಾರ್​, ಈಜುಕೊಳಗಳು ಇನ್ನೂ ಕೆಲವು ದಿನ ಸ್ಥಗಿತಗೊಳ್ಳಲಿವೆ. ಆದರೆ ಹೋಂ ಡೆಲಿವರಿಗೆ ಅವಕಾಶ ಒದಗಿಸಲಾಗಿದೆ.

ಪಶ್ಚಿಮ ಬಂಗಾಳ ರಾಜ್ಯಾದ್ಯಂತ ಮನರಂಜನೆ, ಸಾಂಸ್ಕೃತಿಕ ಕಾರ್ಯಗಳನ್ನು ನಿರ್ಬಂಧಿಸಲಾಗಿದೆ. ಮೇ 2ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮತಎಣಿಕೆಯಲ್ಲಿ ಕೊವಿಡ್ ತಡೆ ನಿಯಮಾವಳಿಗಳನ್ನು ಅನುಸರಿಸಲಾಗುವುದು ಎಂದು ಸರ್ಕಾರ ಮತ್ತು ಚುನಾವಣಾ ಆಯೋಗ ತಿಳಿಸಿದೆ.

ಇಂದು ಪಶ್ಚಿಮ ಬಂಗಾಳದಲ್ಲಿ ಒಟ್ಟು 17,403 ಹೊಸ ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ. ಈವರೆಗೆ ಇಂದು ಒಂದೇ ದಿನ ಪತ್ತೆಯಾದ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಚುನಾವಣಾ ಪ್ರಚಾರ ಸಭೆಗಳು ಕೊರೊನಾ ಸೋಂಕು ಹೆಚ್ಚಿಸುವ ಭೀತಿ ಹುಟ್ಟಿಸಿವೆ. ಅಲ್ಲದೇ ಈವರೆಗೆ ಇಂದೇ ಅತಿ ಹೆಚ್ಚು ಜನರು ಕೊರೊನಾದಿಂದ ಮೃತಪಟ್ಟಿದ್ದು, 89 ಜನರು ಸಾವಿಗೀಡಾಗಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಪಾಸಿಟಿವಿಟಿ ದರವು ಶೇಕಡಾ 6.79ರಿಂದ 7.81ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ಸುಯಮೇಂದ್ರಾಚಾರ್ಯರು ಕೊರೊನಾದಿಂದ ನಿಧನ

Karnataka Covid Update: ರಾಜ್ಯದಲ್ಲಿ ಇಂದು ಒಂದೇ ದಿನ 48,296 ಸೋಂಕಿತರು ಪತ್ತೆ, 217 ಜನರ ಸಾವು

(West Bengal announces partial lockdown after election end)