ಶಾರ್ಪ್​ ಶೂಟರ್ ‘ಶೂಟರ್ ದಾದಿ’ ಚಂದ್ರೋ ತೋಮರ್​ಗೆ ಕೊರೊನಾ ವೈರಸನ್ನು​ ಶೂಟ್​ ಮಾಡಲಾಗಲಿಲ್ಲ!

ತೋಮರ್ ಶೂಟಿಂಗ್ ಮಾಡುವುದನ್ನು ನೋಡಲಿ ಜನ ತಮ್ಮ ಮಕ್ಕಳನ್ನು ಕರೆತರುತ್ತಿದ್ದರು. ಭಾಗಪತ್, ಮೀರತ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸುತ್ತಮುತ್ತಲಿನ ಹಲವಾರು ಪ್ರದೇಶಗಳ ಬಾಲಕಿಯರು ಶೂಟಿಂಗ್ ಮಾಡಲು ಪ್ರಾರಭಿಸಿದರಂತೆ.

ಶಾರ್ಪ್​ ಶೂಟರ್ ‘ಶೂಟರ್ ದಾದಿ’ ಚಂದ್ರೋ ತೋಮರ್​ಗೆ ಕೊರೊನಾ ವೈರಸನ್ನು​ ಶೂಟ್​ ಮಾಡಲಾಗಲಿಲ್ಲ!
ಚಂದ್ರೋ ತೋಮರ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:May 04, 2021 | 5:39 PM

ಭಾರತದೆಲ್ಲಡೆ ಶೂಟರ್​ ದಾದಿ ಎಂದೇ ಜನಪ್ರಿಯರಾಗಿದ್ದ ಚಂದ್ರೋ ತೋಮರ್ ಶುಕ್ರವಾರದದಂದು ಮೀರತ್​ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊವಿಡ್​ಗೆ ಬಲಿಯಾಗದ್ದಾರೆ. ಉಸಿರಾಟದ ತೊಂದರೆ ಬಗ್ಗೆ ದೂರಿದ ನಂತರ ಸೋಮವಾರದಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 89 ವರ್ಷ ವಯಸ್ಸಾಗಿತ್ತು. ತಮ್ಮ 60ನೇ ವಯಸ್ಸಿನಲ್ಲಿ ಶೂಟಿಂಗ್ ಮಾಡುವುದನ್ನು ಆರಂಭಿಸಿದ ತೋಮರ್ ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದರು. ಅವರ ಬದುಕಿನಿಂದ ಪ್ರಭಾವಕ್ಕೊಳಗಾಗಿದ್ದ ನಿರ್ಮಾಪಕರೊಬ್ಬರು ಬಯೋಪಿಕ್ (ಸಾಂಡ್​ ಕಿ ಆಂಖ್) ನಿರ್ಮಿಸಿದ್ದಾರೆ. ಅವರು ಕೇವಲ ಸಿನಿಮಾದವರಿಗೆ ಮಾತ್ರ ಪ್ರೇರಣೆಯಾಗಿರಲಿಲ್ಲ. ಅವರ ಸಾಧನೆಗಳು ಅನೇಕ ಯುವತಿಯರಿಗೆ ಸ್ಫೂರ್ತಿಯಾಗಿ ಅವರು ಶೂಟಿಂಗನ್ನು ವೃತ್ತಿಬದುಕನ್ನಾಗಿ ಮಾಡಿಕೊಳ್ಳಲು ಹುರಿದುಂಬಿಸಿವೆ. ಶೂಟಿಂಗ್ ಸ್ಪರ್ಧೆಗಳು ನಡೆಯುವಾಗ ಯಾರಾದರೂ ಆತಂಕದಲ್ಲಿರುವುದು ಕಂಡರೆ, ‘ಯಾಕೆ ಹೆದರಿಕೊಳ್ಳುತ್ತಿದ್ದಿಯಾ? ಟಾರ್ಗೆಟ್​ನೆಡೆ ಗುರಿಯಿಡು ಮತ್ತು ಟ್ರಿಗ್ಗರ್ ಒತ್ತಿಬಿಡು,’ ಅಂತ ಹೇಳುತ್ತಿದ್ದರಂತೆ.

ತೋಮರ್ ಶೂಟಿಂಗ್ ಮಾಡುವುದನ್ನು ನೋಡಲಿ ಜನ ತಮ್ಮ ಮಕ್ಕಳನ್ನು ಕರೆತರುತ್ತಿದ್ದರು. ಭಾಗಪತ್, ಮೀರತ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸುತ್ತಮುತ್ತಲಿನ ಹಲವಾರು ಪ್ರದೇಶಗಳ ಬಾಲಕಿಯರು ಶೂಟಿಂಗ್ ಮಾಡಲು ಪ್ರಾರಭಿಸಿದರಂತೆ.

ಅವರ ಸಾವಿನ ಸುದ್ದಿ ಕೇಳಿ ನಾದಿನಿ ಪ್ರಕಾಶಿ ತೋಮರ್ ಅವರು, ‘ ಆಕೆ ನನ್ನನ್ನು ಅಗಲಿದ್ದಾರೆ, ಚಂದ್ರೋ ನೀನೆಲ್ಲಿರುವೆ,’ ಎಂದು ಟ್ವೀಟ್​ ಮಾಡಿದ್ದಾರೆ.

2019ರಲ್ಲಿ ಒಬ್ಬ ಪತ್ರಕರ್ತ ತೋಮರ್​ ನಿಧನ ಹೊಂದಿದ್ದಾರೆ ಅಂತ ಟ್ವೀಟ್​ ಮಾಡಿದ್ದಾಗ, ತೋಮರ್ ದಾದಿ, ‘ನೀನು ತುಂಬಾ ಅವಸರದಲ್ಲಿರುವಂತಿದೆ,’ ಅಂತ ಹೇಳಿದ್ದರು.

ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯ ಜೊಹ್ರಿ ಹೆಸರಿನ ಊರಿವರಾಗಿದ್ದ ತೋಮರ್ ಶೂಟರ್​ ದಾದಿ ಎಂದೇ ಜನಜನಿತರಾಗಿದ್ದರು, ಅವರು ಶೂಟಿಂಗ್ ಆರಂಭಿಸಿದ್ದು 1999ರಲ್ಲಿ. 60 ವಯಸ್ಸಿನವರಾದ ನಂತರ ಅವರು ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ 30 ಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದಿದ್ದರು.

ವಿಶ್ವದ ನಂಬರ್ ವನ್ ರೈಫಲ್ ಶೂಟರ್ ದಿವ್ಯಾಂಶ್ ಪರ್ವರ್​ ಅವರನ್ನು ಟ್ರೇನ್ ಮಾಡುವ ಕೋಚ್ ದೀಪಕ್ ದುಬೆ ಅವರು, ಚಂದ್ರೋ ಮತ್ತು ಪ್ರಕಾಶೀ ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಿರುವುದನ್ನು ನೆನೆಪಿಸಿಕೊಂಡಿದ್ದಾರೆ.

‘ನಾನು ಶೂಟರ್​ ಆಗಿದ್ದ ದಿನಗಳಲ್ಲಿ ಅಗಾಗ ಜೊಹ್ರಿ ರೇಂಜ್​ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಅವರಿಬ್ಬರೂ ನಮ್ಮಲ್ಲಿ ಸ್ಫೂರ್ತಿಯನ್ನು ತುಂಬುತ್ತಿದ್ದರು. ದೇಹಕ್ಕೆ ವಯಸ್ಸಾಗಿರಹುದು, ಅದರೆ ಹೃದಯಕ್ಕಲ್ಲ, ಎಂದು ಅವರು ಹೇಳುತ್ತಿದ್ದರು. ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಅವರಿಬ್ಬರು ಹಿರಿಯರ ಕೆಟೆಗೆರಿಯಲ್ಲಿ ಭಾಗವಹಿಸುತ್ತಿದ್ದರು. ಆಗ ಹಿರಿಯರ ಕೆಟೆಗಿರಿಯಲ್ಲಿ ಜಾಸ್ತಿ ಸ್ಪರ್ಧಿಗಳು ಇರುತ್ತಿರಲಿಲ್ಲ, ಆದರೆ ಈಗ ಅವರ ಸಂಖ್ಯೆ ಹೆಚ್ಚಾಗಿದೆ. ಅತಂಕಮಯವಾದ ವಾತಾವರಣವನ್ನು ತಿಳಿಯಾಗಿಸುವ ಅಪರೂಪದ ಕಲೆ ಅವರಲ್ಲಿತ್ತು. ಅವರು ತಮ್ಮ ಬದುಕಿನ ಅನುಭವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು ಮತ್ತು ಯುವ ಶೂಟರ್​ಗಳನ್ನು ಹುರಿದುಂಬಿಸುತ್ತಿದ್ದರು,’ ಎಂದು ದುಬೆ ಹೇಳಿದ್ದಾರೆ.

‘ಸಾಂಡ್ ಕಿ ಆಂಖ್​ನಲ್ಲಿ’ ನಲ್ಲಿ ಚಂದ್ರೋ ತೋಮರ್ ಅವರ ಪಾತ್ರ ನಿರ್ವಿಹಿಸಿರುವ ಖ್ಯಾತ ನಟಿ ಭೂಮಿ ಪೆಡ್ನೇಕರ್ ಅವರು ಟ್ವೀಟ್​ಮೂಲಕ ಶ್ರದ್ಧಾಂಜಿಯನ್ನು ಸಮರ್ಪಿಸಿದ್ದಾರೆ.

‘ಚಂದ್ರೋ ದಾದಿ ಅವರ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೇನೆ. ನನ್ನ ಒಂದು ಭಾಗವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಅವರು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿದ್ದರು ಮತ್ತು ಅನೇಕ ಯುವತಿಯರಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರೇರಣೆಯಾದರು. ಆಕೆ ಬಿಟ್ಟು ಹೋಗಿರುವ ಪರಂಪರೆ ಯಾವತ್ತೂ ಅಳಿಯದು. ಆಕೆಯ ಬಗ್ಗೆ ತಿಳಿದುಕೊಳ್ಳುವ ಸಿಕ್ಕಿದ್ದು ನನ್ನ ಅದೃಷ್ಟ ,’ ಎಂದು ಭೂಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Tokyo Olympics 2021: ಈ ಬಾರಿಯ ಒಲಿಂಪಿಕ್ಸ್ ಪ್ರೇಕ್ಷಕರಿಲ್ಲದೆ ನಡೆಯಬಹುದು; ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥ ಹಶಿಮೊಟೊ

Published On - 12:42 am, Sat, 1 May 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!