AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics 2021: ಈ ಬಾರಿಯ ಒಲಿಂಪಿಕ್ಸ್ ಪ್ರೇಕ್ಷಕರಿಲ್ಲದೆ ನಡೆಯಬಹುದು; ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥ ಹಶಿಮೊಟೊ

Tokyo Olympics 2021: ಈ ಬಾರಿ ಒಲಿಂಪಿಕ್ಸ್ ಅನ್ನು ಅಭಿಮಾನಿಗಳಿಲ್ಲದೆ ನಡೆಸಬಹುದು ಎಂದು ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥ ಸೈಕೊ ಹಶಿಮೊಟೊ ಹೇಳಿದ್ದಾರೆ.

Tokyo Olympics 2021: ಈ ಬಾರಿಯ ಒಲಿಂಪಿಕ್ಸ್ ಪ್ರೇಕ್ಷಕರಿಲ್ಲದೆ ನಡೆಯಬಹುದು; ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥ ಹಶಿಮೊಟೊ
ಟೋಕಿಯೊ ಒಲಿಂಪಿಕ್ಸ್‌
ಪೃಥ್ವಿಶಂಕರ
|

Updated on: Apr 30, 2021 | 5:09 PM

Share

ಈ ವರ್ಷದ ಜುಲೈನಲ್ಲಿ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಿರಂತರವಾಗಿ ಹೆಚ್ಚುತ್ತಿರುವ ಕರೊನಾ ಪ್ರಕರಣಗಳಿಂದಾಗಿ ಅಪಾಯದಲ್ಲಿದೆ. ಏತನ್ಮಧ್ಯೆ, ಈ ಬಾರಿ ಒಲಿಂಪಿಕ್ಸ್ ಅನ್ನು ಅಭಿಮಾನಿಗಳಿಲ್ಲದೆ ನಡೆಸಬಹುದು ಎಂದು ಒಲಿಂಪಿಕ್ ಕ್ರೀಡಾಕೂಟದ ಮುಖ್ಯಸ್ಥ ಸೈಕೊ ಹಶಿಮೊಟೊ ಹೇಳಿದ್ದಾರೆ. ಈ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ, ಆದರೆ ಇದನ್ನು ಖಂಡಿತವಾಗಿ ಪರಿಗಣಿಸಲಾಗುತ್ತಿದೆ. ಈ ಬಾರಿ ವಿದೇಶಿ ಅಭಿಮಾನಿಗಳಿಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಮಾರ್ಚ್‌ನಲ್ಲಿ ನಿರ್ಧರಿಸಲಾಗಿತ್ತು. ವಿದೇಶಿ ಅಭಿಮಾನಿಗಳಿಲ್ಲದೆ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿರುವುದು ಇದೇ ಮೊದಲು.

ಅಭಿಮಾನಿಗಳು ಬರಲು ನಾವು ಅನುಮತಿಸದಂತಹ ಪರಿಸ್ಥಿತಿ ಬರಬಹುದು ಎಂದು ಶಿಕೊ ಸಂದರ್ಶನವೊಂದರಲ್ಲಿ ಹೇಳಿದರು. ಆಯೋಜಕರು ಕ್ರೀಡಾಪಟುಗಳನ್ನು ಮತ್ತು ಜಪಾನ್ ಜನರನ್ನು ರಕ್ಷಿಸಲು ಸಾಧ್ಯವಾದಾಗ ಮಾತ್ರ ಆಟಗಳನ್ನು ಆಯೋಜಿಸಬಹುದು ಎಂದು ಹೇಳಿದರು.

ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ವಿಧಿಸಲಾಗಿದೆ ಕೊರೊನಾ ವೈರಸ್‌ನಿಂದ ಬಳಲುತ್ತಿರುವ ರಾಜಧಾನಿ ಟೋಕಿಯೊ (ಟೋಕಿಯೊ) ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜಪಾನ್ ತುರ್ತು ಪರಿಸ್ಥಿತಿ ಘೋಷಿಸಿದೆ. ತುರ್ತು ಪರಿಸ್ಥಿತಿಯಿಂದಾಗಿ ವೇಗವಾಗಿ ಬೆಳೆಯುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ಭಾವಿಸಿದೆ. ಈ ತುರ್ತು ಪರಿಸ್ಥಿತಿ ಮೇ 11 ರವರೆಗೆ ಇರುತ್ತದೆ. ಒಲಿಂಪಿಕ್ಸ್‌ನ ದೃಷ್ಟಿಯಿಂದ ಈ ತುರ್ತು ಪರಿಸ್ಥಿತಿಯನ್ನು ಸಹ ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಜಪಾನ್‌ನಲ್ಲಿ 4,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಂಡುಬಂದಿವೆ, ಇದು ವರ್ಷದ ಆರಂಭಕ್ಕೆ ಹೊಲಿಸಿದರೆ ಅತಿ ಹೆಚ್ಚು ಎಂಬುದು ಕಂಡುಬದಿದೆ. ಜಪಾನ್‌ನಲ್ಲಿ ಕೋವಿಡ್ -19 ರಿಂದ 9,500 ಸಾವುಗಳು ವರದಿಯಾಗಿವೆ. ಜಪಾನ್‌ನಲ್ಲಿ ವ್ಯಾಕ್ಸಿನೇಷನ್ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿದ್ದ ಸರ್ಕಾರಿ ಸಚಿವ ತಾರೊ ಕೊನೊ ಅವರು ಒಲಿಂಪಿಕ್ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರು ಇರುವುದಿಲ್ಲ ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​