Karnataka Covid Update: ರಾಜ್ಯದಲ್ಲಿ ಇಂದು ಒಂದೇ ದಿನ 48,296 ಸೋಂಕಿತರು ಪತ್ತೆ, 217 ಜನರ ಸಾವು

Corona Update Bengaluru: ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 26,756 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಇಂದು ಕೊರೊನಾ ಸೋಂಕಿಗೆ 93 ಜನರ ಬಲಿಯಾಗಿದ್ದಾರೆ.

Karnataka Covid Update: ರಾಜ್ಯದಲ್ಲಿ ಇಂದು ಒಂದೇ ದಿನ 48,296 ಸೋಂಕಿತರು ಪತ್ತೆ, 217 ಜನರ ಸಾವು
ಮಾಸ್ಕ್ ಧರಿಸೋಣ
guruganesh bhat

|

Apr 30, 2021 | 7:49 PM

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 48,296 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಇಂದೊಂದೇ ಒಂದೇ ದಿನ ಕೊರೊನಾಗೆ 217 ಜನರು ಸಾವಿಗೀಡಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 26,756 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಇಂದು ಕೊರೊನಾ ಸೋಂಕಿಗೆ 93 ಜನರ ಬಲಿಯಾಗಿದ್ದಾರೆ.

ಇಂದಿನ ಸೋಂಕಿತರ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟಾರೆ ಸಂಖ್ಯೆ 15,23,142ಕ್ಕೇರಿಕೆಯಾಗಿದೆ. ಸೋಂಕಿತರ ಪೈಕಿ 11,24,909 ಜನ ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟ 217 ಜನರನ್ನೂ ಸೇರಿ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 15,523 ಜನರ ಸಾವನ್ನಪ್ಪಿದ್ದಾರೆ. ಸದ್ಯ 38,2690 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಸೋಂಕಿತರ ಮಾಹಿತಿ ಇಂತಿದೆ ಬೆಂಗಳೂರು ನಗರ ಜಿಲ್ಲೆಯಲ್ಲಿ 26756, ಮೈಸೂರು 3500 ಪ್ರಕರಣ ಪತ್ತೆಯಾಗಿದೆ. ತುಮಕೂರು 1801, ಮಂಡ್ಯ 1348, ಬಳ್ಳಾರಿ 1282 ಪ್ರಕರಣ, ಕಲಬುರಗಿ 1256, ದಕ್ಷಿಣ ಕನ್ನಡ 1205, ಕೋಲಾರ 845, ಬೆಂಗಳೂರು ಗ್ರಾಮಾಂತರ 818, ರಾಯಚೂರು 733, ಹಾಸನ 709, ಧಾರವಾಡ 703, ಶಿವಮೊಗ್ಗ 673 ಪ್ರಕರಣ, ಉಡುಪಿ 660, ಕೊಡಗು 609, ಚಿಕ್ಕಬಳ್ಳಾಪುರ 579, ಚಿಕ್ಕಮಗಳೂರು 542, ವಿಜಯಪುರ 521, ಬೆಳಗಾವಿ 514, ಚಾಮರಾಜನಗರ 474, ಬೀದರ್ 447, ದಾವಣಗೆರೆ 438, ಉತ್ತರ ಕನ್ನಡ 426, ಯಾದಗಿರಿ 325, ರಾಮನಗರ 286, ಕೊಪ್ಪಳ 256, ಬಾಗಲಕೋಟೆ 234, ಚಿತ್ರದುರ್ಗ 144, ಗದಗ 122, ಹಾವೇರಿ ಜಿಲ್ಲೆಯಲ್ಲಿ 90 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ಸಂಖ್ಯೆ ಬೆಂಗಳೂರಲ್ಲಿ ಹೆಚ್ಚು ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 217 ಜನರ ಸಾವನ್ನಪ್ಪಿದ್ದು ಬೆಂಗಳೂರಿನಲ್ಲಿ  93 ಜನರು ಬಲಿಯಾಗಿದ್ದಾರೆ.  ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 19 ಜನರ ಸಾವನ್ನಪ್ಪಿದ್ದು,  ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 13 ಜನರ ಬಲಿಯಾಗಿದ್ದಾರೆ. ಬಳ್ಳಾರಿ 11, ಧಾರವಾಡ 7, ತುಮಕೂರು, ಶಿವಮೊಗ್ಗ, ಬೀದರ್, ಚಾಮರಾಜನಗರ,ದಾವಣಗೆರೆ, ಕಲಬುರಗಿ ಜಿಲ್ಲೆಗಳಲ್ಲಿ ತಲಾ 6 ಜನರು ಮೃತಪಟ್ಟಿದ್ದಾರೆ. ಕೊಡಗು, ಮಂಡ್ಯ, ಉತ್ತರ ಕನ್ನಡ, ರಾಮನಗರ, ಜಿಲ್ಲೆಯಲ್ಲಿ ಕೊರೊನಾಗೆ ತಲಾ ಐವರು ಬಲಿಯಾಗಿದ್ದಾರೆ. ಬಾಗಲಕೋಟೆ, ಕೋಲಾರ,ವಿಜಯಪುರ ಜಿಲ್ಲೆಯಲ್ಲಿ ತಲಾ ಮೂವರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಉಡುಪಿ ಜಿಲ್ಲೆಗಳಲ್ಲಿ ಇಬ್ಬರು,  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾಗೆ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 15,523 ಜನರು ಸಾವನ್ನಪ್ಪಿದಂತಾಗಿದೆ.

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

(Today 48296 Covid cases in Karnataka 217 death)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada