ಸಂಚಾರ್ ಸಾಥಿ ಆ್ಯಪ್‌ನಿಂದ ಎಂದಿಗೂ ಬೇಹುಗಾರಿಕೆ ನಡೆಯುವುದಿಲ್ಲ; ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭರವಸೆ

ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಇಂದು ಸಂಚಾರ್ ಸಾಥಿ ಅಪ್ಲಿಕೇಶನ್‌ಗೆ ಸಂಬಂಧಿಸಿದ "ಗೂಢಚಾರಿಕೆ ಅಪ್ಲಿಕೇಶನ್" ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಈ ಅಪ್ಲಿಕೇಶನ್‌ನಿಂದ ಯಾವುದೇ ಗೂಢಚಾರಿಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ಸಮಯದಲ್ಲಿ ಅಪ್ಲಿಕೇಶನ್ ಕುರಿತು ಚರ್ಚೆಗಳ ಸಂದರ್ಭದಲ್ಲಿ ಸರ್ಕಾರವು ಈ ಆ್ಯಪ್ ಮೂಲಕ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡಲು ಬಯಸುತ್ತದೆ ಎಂದು ಸಚಿವ ಸಿಂಧ್ಯ ಹೇಳಿದ್ದಾರೆ.

ಸಂಚಾರ್ ಸಾಥಿ ಆ್ಯಪ್‌ನಿಂದ ಎಂದಿಗೂ ಬೇಹುಗಾರಿಕೆ ನಡೆಯುವುದಿಲ್ಲ; ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭರವಸೆ
Jyotiraditya Schindia

Updated on: Dec 03, 2025 | 4:17 PM

ನವದೆಹಲಿ, ಡಿಸೆಂಬರ್ 3: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು (ಬುಧವಾರ) ಲೋಕಸಭೆಯಲ್ಲಿ ಸಂಚಾರ್ ಸಾಥಿ ಸುರಕ್ಷತಾ ಆ್ಯಪ್‌ನಿಂದ ಬೇಹುಗಾರಿಕೆ ಎಂದಿಗೂ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸ್ಮಾರ್ಟ್‌ಫೋನ್ ತಯಾರಕರು ಎಲ್ಲಾ ಹೊಸ ಮೊಬೈಲ್​ಗಳಲ್ಲಿ ಸರ್ಕಾರಿ ಸೈಬರ್ ಭದ್ರತಾ ಆ್ಯಪ್ ಅನ್ನು ಮೊದಲೇ ಲೋಡ್ ಮಾಡುವಂತೆ ಸೂಚಿಸಿರುವ ಕೇಂದ್ರ ಸಚಿವಾಲಯದ ಆದೇಶದ ವಿವಾದದ ಮಧ್ಯೆ ಈ ಹೇಳಿಕೆ ಬಂದಿದೆ.

ಸಂಚಾರ್ ಸಾಥಿ ಆ್ಯಪ್‌ನಿಂದ ಬೇಹುಗಾರಿಕೆ ನಡೆಯಲು ಸಾಧ್ಯವಿಲ್ಲ, ಇದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಆ್ಯಪ್ ಜನರ ರಕ್ಷಣೆಗಾಗಿ ಮಾತ್ರ ಎಂದು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಸಂಚಾರ್ ಸಾಥಿ ಪೋರ್ಟಲ್​ನಲ್ಲಿ 200 ಕದ್ದ ಮೊಬೈಲ್ ಫೋನ್‌ಗಳು ಪತ್ತೆ: ಈ ಆ್ಯಪ್ ಹೇಗೆ ಬಳಸುವುದು?

ಈ ಆ್ಯಪ್ ಕುರಿತು ಚರ್ಚೆಗಳ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಅಧಿಕಾರ ನೀಡುವ ಉದ್ದೇಶವನ್ನು ಹೊಂದಿದೆ. ಇದು ವಂಚನೆ ಮತ್ತು ಕಳ್ಳತನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಇದನ್ನೂ ಓದಿ: Sanchar Saathi App: ತೀವ್ರ ವಿರೋಧ ಬೆನ್ನಲ್ಲೇ ಸಂಚಾರ್ ಸಾಥಿ ಆ್ಯಪ್ ಕಡ್ಡಾಯ ನಿರ್ಧಾರ ವಾಪಾಸ್ ಪಡೆದ ಕೇಂದ್ರ

ಈ ಆ್ಯಪ್ ಅನ್ನು ಅನೇಕ ವಿರೋಧ ಪಕ್ಷದ ನಾಯಕರು ಮತ್ತು ವಿಮರ್ಶಕರು ಒಂದು ಗೂಢಚಾರಿಕೆಯ ಪ್ರಯತ್ನವೆಂದು ಟೀಕಿಸಿದ್ದರು. ಈ ಅಪ್ಲಿಕೇಶನ್ ಸಂದೇಶಗಳನ್ನು ಗಮನಿಸಬಹುದು ಮತ್ತು ಕರೆಗಳನ್ನು ಕೇಳಬಹುದು ಎಂದು ಭಯಪಟ್ಟಿದ್ದರು. ಆ್ಯಪಲ್‌ನಂತಹ ಕೆಲವು ಫೋನ್ ತಯಾರಕರು ಕೂಡ ಈ ಆದೇಶವನ್ನು ವಿರೋಧಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ