Solar Eclipse 2023: ಏಪ್ರಿಲ್ 20ರಂದು ಅಪರೂಪದ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರವಾಗಲಿದೆ?

ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯಗ್ರಹಣವು ಬೆಳಗ್ಗೆ 10.04ಕ್ಕೆ ಆರಂಭವಾಗಲಿದ್ದು, 11.30ಕ್ಕೆ ಇದು ಗರಿಷ್ಠ ಪಾಯಿಂಟ್​​ಗೆ ತಲುಪಲಿದೆ. ಈ ಸೂರ್ಯಗ್ರಹಣವು ಸುಮಾರು 2 ಗಂಟೆ ವರೆಗೆ ಇರಲಿದ್ದು ಸೂರ್ಯ ಸಂಪೂರ್ಣ ಆವೃತಗೊಂಡರೆ ಅದು ಒಂದು ನಿಮಿಷದೊಳಗಷ್ಟೇ ಇರುತ್ತದೆ.

Solar Eclipse 2023: ಏಪ್ರಿಲ್ 20ರಂದು ಅಪರೂಪದ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರವಾಗಲಿದೆ?
ಸೂರ್ಯಗ್ರಹಣ ವೀಕ್ಷಣೆ
ರಶ್ಮಿ ಕಲ್ಲಕಟ್ಟ

Updated on: Apr 19, 2023 | 4:42 PM

ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬರುವ ಮೂಲಕ ಭೂಮಿ ಮೇಲೆ ನೆರಳು ಬಿದ್ದು ಸೂರ್ಯ ಗ್ರಹಣ (Solar eclipse)ವುಂಟಾಗಲಿದೆ. ಏಪ್ರಿಲ್ 20ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಗುರುವಾರ ಕಾಣಿಸಲಿರುವ ಸೂರ್ಯ ಗ್ರಹಣ ಭಾಗಶಃ ಸೂರ್ಯಗ್ರಹಣ (partial solar eclipse) ಅಥವಾ ಸಂಪೂರ್ಣ ಸೂರ್ಯ ಗ್ರಹಣ (total solar eclipse)ವಾಗಿರಲಿದೆ. ಇಲ್ಲದೇ ಇದ್ದರೆ ಇದು ಎರಡೂ ಇರುವ ಗ್ರಹಣ ಆಗಿರಲಿದೆ. ಜಗತ್ತಿನ ಯಾವುದಾದರೊಂದು ಮೂಲೆಯಲ್ಲಿ 8 ತಿಂಗಳಿಗೊಮ್ಮೆ ಸೂರ್ಯ ಗ್ರಹಣ ಆಗುತ್ತದೆ.

ಹೈಬ್ರಿಡ್ ಸೂರ್ಯ ಗ್ರಹಣ ಯಾವಾಗ ಶುರು ಆಗುತ್ತದೆ?

ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ಬೆಳಗ್ಗೆ 10.04ಕ್ಕೆ ಆರಂಭವಾಗಲಿದ್ದು, 11.30ಕ್ಕೆ ಇದು ಗರಿಷ್ಠ ಪಾಯಿಂಟ್​​ಗೆ ತಲುಪಲಿದೆ. ಈ ಸೂರ್ಯ ಗ್ರಹಣವು ಸುಮಾರು 2 ಗಂಟೆ ವರೆಗೆ ಇರಲಿದ್ದು ಸೂರ್ಯ ಸಂಪೂರ್ಣ ಆವೃತಗೊಂಡರೆ ಅದು ಒಂದು ನಿಮಿಷದೊಳಗಷ್ಟೇ ಇರುತ್ತದೆ.

2023ರ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?

ಸೂರ್ಯ ಗ್ರಹಣದ ಹಾದಿ ಭಾರತ ಮೂಲಕ ಹಾದುಹೋಗುವುದಿಲ್ಲ. ಇದು ದಕ್ಷಿಣ,ಪೂರ್ವ ಏಷ್ಯಾ , ಆಸ್ಟ್ರೇಲಿಯಾ, ದಿ ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಲ್ಲಿ ಕಾಣಿಸುತ್ತದೆ.ಸಂಪೂರ್ಣ ಗ್ರಹಣವು ಪಶ್ಚಿಮ ಆಸ್ಟ್ರೇಲಿಯಾದ ಎಕ್ಸ್​​ಮೌತ್​​ನಲ್ಲಿ ಕಾಣಿಸಲಿದೆ.
ಇನ್ನುಳಿದಂತೆ ಆಮ್ಸ್ಟರ್ಡ್ಯಾಮ್ ದ್ವೀಪ, ಪೋರ್ಟ್ ಆಕ್ಸ್ ಫ್ರಾನ್ಸಿಯಾಸ್, ಪರ್ತ್, ಜಕಾರ್ತಾ, ಮಾಕಾಸ್ಸರ್, ದಿಲಿ, ಡಾರ್ವಿನ್, ಜನರಲ್ ಸಾಂಟೋಸ್, ಮನಕ್ವಾರಿ, ಪೋರ್ಟ್ ಮೊರೆಸ್ಬಿ, ಗೆರುಲ್ಮುಡ್, ಹೊನಿಯಾರ, ಹಗಾತ್ನಾ, ಸೈಪಾನ್, ಬೇಕರ್ ಐಲ್ಯಾಂಡ್, ಪಲಿಕಿರ್, ಫನಾಫುಟಿ, ಯರೇನ್,ತರಾವಾ,ಮಾಜುರೋದಲ್ಲಿ ಗೋಚರಿಸಲಿದೆ.

ಹೈಬ್ರಿಡ್ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ?

ಇಲ್ಲ, ಇದು ಭಾರತದಲ್ಲಿ ಗೋಚರವಾಗುವುದು ಇಲ್ಲ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us