
ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ಲೈವ್ ಪರ್ಫಾರ್ಮನ್ಸ್ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಮಹಿಳೆಗೆ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಲಾಗಿದೆ. ಆನ್ಲೈನ್ನಲ್ಲಿ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಆರೋಪಿಗಳಲ್ಲಿ ಕೊರಿಯಾದ ಯೂಟ್ಯೂಬರ್ (YouTuber) ಒಬ್ಬರು ಎಷ್ಟೇ ಬೇಡ ಬೇಡ ಎಂದು ಕೂಗುತ್ತಿದ್ದರೂ ಕೇಳದೆ ಆಕೆಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಆಕೆಯ ವಿರೋಧದ ನಡುವೆಯೂ ಆ ವ್ಯಕ್ತಿ ಆ ಯೂಟ್ಯೂಬರ್ ಹತ್ತಿರ ಬಂದು ಆಕೆಯ ಕೈ ಹಿಡಿದಿರುವುದು ವಿಡಿಯೋದಲ್ಲಿದೆ. ಆತನಿಂದ ಬಿಡಿಸಿಕೊಂಡು ಅವಳು ದೂರ ಹೋಗುತ್ತಿದ್ದಂತೆ ಅವನು ಮತ್ತೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕಿನಲ್ಲಿ ಬಂದು ಅವಳಿಗೆ ಲಿಫ್ಟ್ ಕೊಡುತ್ತೇನೆ ಬಾ ಎಂದು ಹೇಳುತ್ತಾನೆ. ಅದಕ್ಕೆ ಆ ಮಹಿಳೆ ನಿರಾಕರಿಸುತ್ತಾಳೆ. ನನ್ನ ಮನೆ ಇಲ್ಲಿಯೇ ಹತ್ತಿರದಲ್ಲಿದೆ, ನಾನೇ ಹೋಗುತ್ತೇನೆ ಎಂದು ಆಕೆ ಇಂಗ್ಲಿಷ್ನಲ್ಲಿ ಹೇಳುತ್ತಾಳೆ.
ಇದನ್ನೂ ಓದಿ: Viral Video: ಭತ್ತದ ಗದ್ದೆಯಿಂದ ಓಡಿಸಿದ ಜನರ ಮೇಲೆ ಕೋಪಗೊಂಡು ಅಟ್ಟಾಡಿಸಿದ ಕಾಡಾನೆ; ವಿಡಿಯೋ ವೈರಲ್
ಈ ವಿಡಿಯೋ ಇದೀಗ ವೈರಲ್ ಆಗಿದೆ. ನಿನ್ನೆ ರಾತ್ರಿ ಸ್ಟ್ರೀಮ್ನಲ್ಲಿ ಒಬ್ಬ ವ್ಯಕ್ತಿ ನನಗೆ ಕಿರುಕುಳ ನೀಡಿದನು. ಅವನು ತನ್ನ ಸ್ನೇಹಿತನೊಂದಿಗೆ ಇದ್ದುದರಿಂದ ನಾನು ಪರಿಸ್ಥಿತಿಯನ್ನು ನಿಯಂತ್ರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಇಂತಹ ಘಟನೆಗಳಿಂದಾಗಿ ರಾತ್ರಿ ಲೈವ್ ಸ್ಟ್ರೀಮಿಂಗ್ ನೀಡಲು ಯೋಚಿಸುವಂತಾಗಿದೆ ಎಂದು ಆ ಯುವತಿ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ವಿಡಿಯೋ ಆಧರಿಸಿ ಪೊಲೀಸರು ಸ್ವಯಂ ಪ್ರೇರಿತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.