
ಜೈಪುರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ಜೆಟ್ ಮಹಿಳಾ ಸಿಬ್ಬಂದಿ ಸಿಐಎಸ್ಎಫ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ. ಸ್ಪೈಸ್ಜೆಟ್ನ ಆಹಾರ ಮೇಲ್ವಿಚಾರಕಿ ಅನುರಾಧಾ ರಾಣಿ ಅವರನ್ನು ಜೈಪುರ ವಿಮಾನ ನಿಲ್ದಾಣದ ಗೇಟ್ನಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಗಿರಿರಾಜ್ ಪ್ರಸಾದ್ ಅವರು ಬೆಳಗಿನ ಜಾವ 4 ಗಂಟೆ ಸುಮಾರಿಗೆ ತಡೆದರು. ವಾಹನದ ಗೇಟ್ ಬಳಸಲು ಅನುಮತಿ ಇಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಗೇಟ್ ಮೂಲಕ ಹೊರಹೋಗುವಂತೆ ವಿಮಾನಯಾನ ನೌಕರರನ್ನು ಕೇಳಿದಾಗ ಅವರು ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಪೊಲೀಸರು ಮತ್ತು ಸಿಐಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ, ಅನುರಾಧಾ ರಾಣಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ.
ಮತ್ತಷ್ಟು ಓದಿ: ಬೆಂಗಳೂರು ವಿಮಾನ ನಿಲ್ದಾಣದ ರನ್ ವೇನಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್ ಬಂಧನ
ಸಿಐಎಸ್ಎಫ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಮಾನಯಾನ ಸಂಸ್ಥೆ ತನ್ನ ಉದ್ಯೋಗಿಯ ರಕ್ಷಣೆಗೆ ನಿಂತಿದೆ.
ಏರ್ಪೋರ್ಟ್ನಲ್ಲಿ ಸ್ಕ್ರೀನಿಂಗ್ ಪ್ರದೇಶದ ಸುತ್ತಲೂ ಮಹಿಳಾ ಪೊಲೀಸರು ಇರಲಿಲ್ಲ, ಆ ಸಮಯದಲ್ಲಿ ಮಹಿಳಾ ಸಿಬ್ಬಂದಿಯನ್ನು ಸ್ಕ್ರೀನಿಂಗ್ಗೆ ಬರುವಂತೆ ಗಿರಿರಾಜ್ ಕರೆದಿದ್ದರು ಆಗ ವಾಗ್ವಾದ ಶುರುವಾಗಿತ್ತು ಎನ್ನಲಾಗಿದೆ.
ಈ ಪ್ರಕರಣದಲ್ಲಿ, ಸ್ಪೈಸ್ಜೆಟ್ ತನ್ನ ಉದ್ಯೋಗಿಗಳನ್ನು ಸಮರ್ಥಿಸಿಕೊಂಡಿದೆ ಮತ್ತು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಕೆಲಸ ಮುಗಿದ ಮೇಲೆ ಮನೆಗೆ ಬರುವಂತೆ ಕೇಳಿದ್ದಕ್ಕೆ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಉದ್ಯೋಗಿ ಪ್ರವೇಶಕ್ಕಾಗಿ ಮಾನ್ಯವಾದ ವಿಮಾನ ನಿಲ್ದಾಣ ಪ್ರವೇಶ ಪಾಸ್ ಅನ್ನು ಹೊಂದಿದ್ದರು, ಆದರೂ ಅಧಿಕಾರಿ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ