ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿನಿಯೊಬ್ಬಳು ದೆಹಲಿಗೆ ಬಂದಿದ್ದಳು. ಅಲ್ಲಿನ ಶಕರ್ಪುರದಲ್ಲಿ ಮನೆಯೊಂದಕ್ಕೆ ಬಾಡಿಗೆಗೆಂದು ಹೋಗಿದ್ದಳು. ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಮನೆ ಮಾಲೀಕನ ಮಗ ವಾಸವಾಗಿದ್ದ. ಒಂದು ಬಾರಿ ಆಕೆ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗುವಾಗ ಮನೆಯ ಕೀಗಳನ್ನು ಆತನಿಗೆ ಕೊಟ್ಟಿದ್ದಳು.
ವಾಪಸ್ ಬಂದಾಗ ತನ್ನ ವಾಟ್ಸಾಪ್ ಬೇರೊಂದು ಲ್ಯಾಪ್ಟಾಪ್ನಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅರಿತು ದಂಗಾಗಿದ್ದಳು. ತಕ್ಷಣವೇ ಆಕೆ ಲಾಗ್ಔಟ್ ಆಗಿದ್ದಳು.
ನಂತರ ಜಾಗೃತಳಾದ ಆಕೆ ತನ್ನ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಎಂಬುದನ್ನು ಅರಿತಳು, ಯಾವುದೇ ಸಾಧನದ ಮೂಲಕ ತನ್ನ ಮೇಲೆ ನಿಗಾ ಇರಿಸಿರುಬಹುದು ಎಂದು ಕೊಠಡಿ ತುಂಬಾ ಹುಡುಕಾಟ ನಡೆಸಿದ್ದಾಳೆ. ಹೀಗಾಗಿ ಈ ವೇಳೆ ಕೊಠಡಿಯ ಬಾತ್ ರೂಂನ ಬಲ್ಬ್ ಹೋಲ್ಡರ್ ನಲ್ಲಿ ಕ್ಯಾಮೆರಾ ಅಳವಡಿಸಿರುವುದು ಕಂಡು ಪಿಸಿಆರ್ ಕರೆ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಮಹಿಳಾ ಸಬ್ ಇನ್ಸ್‌ಪೆಕ್ಟರ್ ನಿರುಪಮಾ ಅವರ ಮನೆಗೆ ಆಗಮಿಸಿ ಮತ್ತೆ ಮನೆಯನ್ನು ಹುಡುಕಿದಾಗ ಅವರ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಮತ್ತೊಂದು ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಕೆಯ ಕೋಣೆಗೆ ಬೇರೆ ಯಾರಾದರೂ ಬಂದಿದ್ದಾರೆಯೇ ಎಂದು ಪೊಲೀಸರು ಕೇಳಿದಾಗ, ಅವಳು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಕೋಣೆಯ ಕೀಲಿಗಳನ್ನು ಮನೆ ಮಾಲೀಕನ ಮಗನಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾಳೆ. ಈ ವಿಚಾರವಾಗಿ ಕರಣ್ ಎಂಬಾತನನ್ನು ವಿಚಾರಿಸಿದಾಗ, ಒಂದು ತಿಂಗಳ ಹಿಂದೆ ಆಕೆ ಮನೆಗೆ ಹೋಗಿದ್ದಾಗ, ಕೀಗಳನ್ನು ಕೊಟ್ಟಿದ್ದಳು, ಆ ಸಂದರ್ಭವನ್ನೇ ಬಳಸಿಕೊಂಡು ಹಿಡನ್ ಕ್ಯಾಮರಾಗಳನ್ನು ತಂದು ಬಾತ್ರೂಂ ಹಾಗೂ ಕೋಣೆಯಲ್ಲಿ ಅಳವಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಓದಿ: Viral: ಇದು ಡಿಜಿಟಲ್ ಇಂಡಿಯಾ ಕಣ್ರೀ; ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುತ್ತಾರೆ ಬೆಂಗಳೂರಿನ ಈ ಆಟೋ ಚಾಲಕ
ಆ ಕ್ಯಾಮರಾಗಳಲ್ಲಿ ಮೆಮೊರಿ ಚಿಪ್ ಕೂಡ ಇತ್ತು, ಇದರಿಂದಾಗಿ ಆನ್ಲೈನ್ ಮೂಲಕ ವೀಕ್ಷಿಸುತ್ತಿದ್ದ, ಚಿಪ್‌ಗಳನ್ನು ಪಡೆಯಲು ಆರೋಪಿ ಕರಣ್ ವಿದ್ಯುತ್ ರಿಪೇರಿ ಮಾಡುವ ನೆಪದಲ್ಲಿ ಆಕೆಯ ಕೋಣೆಗೆ ಹೋಗಲು ಪದೇ ಪದೇ ಕೀ ಕೇಳುತ್ತಿದ್ದ.ಇದರಿಂದ ರೆಕಾರ್ಡ್ ಮಾಡಿದ ವೀಡಿಯೊಗಳನ್ನು ತನ್ನ ಲ್ಯಾಪ್‌ಟಾಪ್‌ಗೆ ವರ್ಗಾಯಿಸಬಹುದು.
ಲ್ಯಾಪ್‌ಟಾಪ್‌ಗಳಲ್ಲಿ ಇರಿಸಿದ್ದ ಸ್ಪೈ ಕ್ಯಾಮೆರಾ ಮತ್ತು ರೆಕಾರ್ಡ್ ಮಾಡಿದ ವಿಡಿಯೋ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಕಾಯಿದೆಯಡಿ ಅಂಗವಿಕಲ ವ್ಯಕ್ತಿಯಾಗಿರುವ 30 ವರ್ಷದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾನೂನಿನ ಪ್ರಕಾರ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ