Viral: ಇದು ಡಿಜಿಟಲ್ ಇಂಡಿಯಾ ಕಣ್ರೀ; ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುತ್ತಾರೆ ಬೆಂಗಳೂರಿನ ಈ ಆಟೋ ಚಾಲಕ
ಇದು ಡಿಜಿಟಲ್ ಯುಗ. ಇಲ್ಲಿ ಎಲ್ಲಾ ವಹಿವಾಟುಗಳು ಹೆಚ್ಚಾಗಿ ಆನ್ಲೈನ್ ಮೂಲಕ ನಡೆಯುತ್ತಿವೆ. ಇದೀಗ ಡಿಜಿಟಲ್ ಭಾರತಕ್ಕೆ ಸಂಬಂಧಿಸಿದ ಫೋಟೋವೊಂದು ವೈರಲ್ ಆಗಿದ್ದು, ಆಟೋ ಡ್ರೈವರ್ ಒಬ್ಬರು ಚಿಲ್ಲರೆ ಸಮಸ್ಯೆಯನ್ನು ಹೋಗಲಾಡಿಸಲು ಸ್ಮಾರ್ಟ್ ವಾಚ್ ಸ್ಕ್ಯಾನರ್ ಮೂಲಕ ಗ್ರಾಹಕರಿಂದ ಹಣ ಸ್ವೀಕರಿಸಿದ್ದಾರೆ. ಈ ದೃಶ್ಯ ಕಂಡು ಇದು ಡಿಜಿಟಲ್ ಇಂಡಿಯಾ ಸ್ವಾಮಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಈಗಂತೂ ಭಾರತದಲ್ಲಿಯೂ ಡಿಜಿಟಲೀಕರಣ ಪ್ರಗತಿ ಪಡೆದಿದೆ. ಪ್ರತಿ ವ್ಯಾಪಾರ ವಹಿವಾಟಿನಲ್ಲಿ ಈಗ ನಗದು ರಹಿತ ವಹಿವಾಟುಗಳೇ ಹೆಚ್ಚಾಗಿ ನಡೆಯುತ್ತಿದೆ. ಚಿಲ್ಲರೆ ಅಂಗಡಿಗಳಿಂದ ದೊಡ್ಡ ದೊಡ್ಡ ವ್ಯವಹಾರಗಳವರೆಗೂ ಈಗ ಕ್ಯೂಆರ್ (QR) ಕೋಡ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಅಷ್ಟೇ ಯಾಕೆ ಭಿಕ್ಷುಕರು ಸಹ ಕ್ಯೂಆರ್ ಕೋಡ್ ಹಿಡಿದು ಭಿಕ್ಷೆ ಬೇಡಲು ಆರಂಭಿಸಿದ್ದಾರೆ. ಇದೀಗ ನಮ್ಮ ದೇಶ ಡಿಜಿಟಲೀಕರಣದಲ್ಲಿ ಸಾಧನೆ ಮಾಡುತ್ತಿದೆ ಎಂಬುದಕ್ಕೆ ನಿದರ್ಶನದಂತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಟೋ ಡ್ರೈವರ್ ಒಬ್ಬರು ಚಿಲ್ಲರೆ ಸಮಸ್ಯೆ ಯಾರಿಗೆ ಬೇಕಪ್ಪಾ ಎನ್ನುತ್ತಾ ಸ್ಮಾರ್ಟ್ ವಾಚ್ ಸ್ಕ್ಯಾನರ್ ಮೂಲಕ ಗ್ರಾಹಕರಿಂದ ಆನ್ಲೈನ್ ಪೇಮೆಂಟ್ ಸ್ವೀಕರಿಸಿದ್ದಾರೆ. ಈ ದೃಶ್ಯ ನೋಡಿ ಇದು ಡಿಜಿಟಲ್ ಇಂಡಿಯಾ ಕಣ್ರೀ ಎಂದು ನೆಟ್ಟಿಗರು ಹೇಳಿದ್ದಾರೆ.
ವಿಶ್ವಜೀತ್ (Vishvajeet590) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ ಬೆಂಗಳೂರಿನ ಆಟೋ ಡ್ರೈವರ್ ಒಬ್ಬರು ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಮೂಲಕ ಗ್ರಾಹಕರಿಂದ ಹಣ ಸ್ವೀಕರಿಸುತ್ತಿರುವ ದೃಶ್ಯವನ್ನು ಕಾಣಬಹುದು.
Auto anna pulled out the #peakBengaluru move. pic.twitter.com/Y6750c6ZDU
— Vishvajeet (@Vishvajeet590) September 20, 2024
ಇದನ್ನೂ ಓದಿ: ಎಂಥಾ ಅವಸ್ಥೆ ಮಾರ್ರೆ; ತೆರೆದ ಬಾವಿಯ ಅಂಚಲ್ಲಿ ಕುಳಿತು ಮಗುವನ್ನು ಕೈಯಲ್ಲಿ ಹಿಡಿದು ರೀಲ್ಸ್ ಮಾಡಿದ ಮಹಿಳೆ
ಸೆಪ್ಟೆಂಬರ್ 20 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 6 ಲಕ್ಷಕ್ಕೂ ಅಧಿಕ ವೀಕ್ಷಿಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದು ನಮ್ಮ ನವ ಭಾರತ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈಗ ಭಾರತ ಡಿಜಿಟಲ್ ಆಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ