Viral: ಪಂಚೆ ತೊಟ್ಟು ದೇಸಿ ಸ್ಟೈಲ್ ಅಡುಗೆ ಮಾಡಿದ ಬ್ರಿಟಿಷ್ ಬಾಣಸಿಗ
ಲುಂಗಿ ನಮ್ಮ ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದು. ಇಂದಿಗೂ ಗ್ರಾಮೀಣ ಭಾಗದಲ್ಲಿನ ಪುರುಷರು ಮನೆಗಳಲ್ಲಿ ಅಥವಾ ಊರಿನಲ್ಲಿ ಸುತ್ತಾಡುವಾಗ ಲುಂಗಿಯನ್ನೇ ಸುತ್ತಿಕೊಳ್ಳುತ್ತಾರೆ. ಅದೇ ರೀತಿ ಇದೀಗ ಬ್ರಿಟಿಷ್ ಬಾಣಸಿಗರೊಬ್ಬರು ಪಂಚೆ ತೊಟ್ಟು ದಕ್ಷಿಣ ಭಾರತೀಯ ಶೈಲಿಯ ಅಡುಗೆ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಬ್ರಿಟಿಷ್ ಸೆಲೆಬ್ರಿಟಿ ಬಾಣಸಿಗ ಗಾರ್ಡನ್ ಜೇಮ್ಸ್ ರಾಮ್ಸೆ ಅವರು ತಮ್ಮ ಡಿಫರೆಂಟ್ ಶೈಲಿಯ ಕುಕಿಂಗ್ ಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಹೊಸ ಹೊಸ ಅವತಾರದಲ್ಲಿ ಅಡುಗೆಗಳನ್ನು ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇದೀಗ ಅವರು ಸ್ಟೈಲ್ ಆಗಿ ಪಂಚೆ ತೊಟ್ಟು ದಕ್ಷಿಣ ಭಾರತೀಯ ಶೈಲಿಯ ಅಡುಗೆಗಳನ್ನು ಮಾಡಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
‘ಹೆಲ್ಸ್ ಕಿಚನ್’ ಮತ್ತು ‘ಮಾಸ್ಟರ್ ಚೆಫ್’ ನಂತಹ ಜನಪ್ರಿಯ ಕಾರ್ಯಕ್ರಮಗಳ ನಿರೂಪಕರಾದ ಗಾರ್ಡನ್ ರಾಮ್ಸೆ. ತಮ್ಮ ವಿನೂತನ ಅಡುಗೆಗಳಿಂದಲೇ ಗಮನ ಸೆಳೆದ ಇವರು ಇದೀಗ ದೇಸಿ ಸ್ಟೈಲ್ ಪಂಚೆ ತೊಟ್ಟು ಭಾರತೀಯ ಶೈಲಿಯ ಅಡುಗೆ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು historyinmemes ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸ್ಥಳೀಯ ಭಾರತೀಯ ಉಡುಗೆ ತೊಟ್ಟು ಅಡುಗೆ ಮಾಡಿದ ಗಾರ್ಡನ್ ರಾಮ್ಸೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಾರ್ಡನ್ ಜೇಮ್ಸ್ ರಾಮ್ಸೆ ಅವರು ಪಂಚೆ ತೊಟ್ಟು ದಕ್ಷಿಣ ಭಾರತೀಯ ಶೈಲಿಯ ಅಡುಗೆ ಮಾಡುವ ದೃಶ್ಯ ಕಾಣಬಹುದು.
Gordon Ramsay dresses and cooks like a local Indian pic.twitter.com/8mw5NYsTte
— Historic Vids (@historyinmemes) September 20, 2024
ಇದನ್ನೂ ಓದಿ: ಎಂಥಾ ಅವಸ್ಥೆ ಮಾರ್ರೆ; ತೆರೆದ ಬಾವಿಯ ಅಂಚಲ್ಲಿ ಕುಳಿತು ಮಗುವನ್ನು ಕೈಯಲ್ಲಿ ಹಿಡಿದು ರೀಲ್ಸ್ ಮಾಡಿದ ಮಹಿಳೆ
ಸೆಪ್ಟೆಂಬರ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಭಾರತೀಯ ಸಂಸ್ಕೃತಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಗಾರ್ಡನ್ ರಾಮ್ಸೆ ಅವರು ವಿಭಿನ್ನ ಸಂಸ್ಕೃತಿಗಳನ್ನು ಸ್ವೀಕರಿಸುವುದನ್ನು ನೋಡುವುದೇ ಒಂದು ಚಂದ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ