ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಅತ್ಯಂತ ಭೀಕರವಾದ ಪರಿಣಾಮ ಬೀರುತ್ತಿದೆ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ವೈದ್ಯಕೀಯ ವ್ಯವಸ್ಥೆಯಲ್ಲಿ ಕೊರತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು. ಇದೀಗ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ರವೀಂದ್ರ ಭಟ್ ಅವರಿದ್ದ ನ್ಯಾಯಪೀಠವು ಕೊವಿಡ್-19 ಸಾಂಕ್ರಾಮಿಕದಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ವಿವಿಧ ರಾಜ್ಯಗಳಲ್ಲಿನ ಸಾಂಕ್ರಾಮಿಕ ಬಿಕ್ಕಟ್ಟಿನ ನಿರ್ವಹಣೆಯ ಕುರಿತಾಗಿ ಅಲ್ಲಿನ ಹೈಕೋರ್ಟ್ಗಳು ಕೈಗೆತ್ತಿಕೊಂಡಿದ್ದ ಸ್ವಯಂ ಪ್ರೇರಿತ ವಿಚಾರಣೆಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಮತ್ತು ಸುಪ್ರಿಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಲಯ, ನೀವು ಆದೇಶವನ್ನು ಓದಿದ್ದೀರಿ. ಪ್ರಕರಣವನ್ನು (ಹೈಕೋರ್ಟ್ಗಳಿಂದ) ವರ್ಗಾಯಿಸುವ ಉದ್ದೇಶದ ಛಾಯೆ ಅದರಲ್ಲಿ ಏನಾದರೂ ಇತ್ತೇ? ಆದೇಶವನ್ನು ಅದರಲ್ಲಿ ಇಲ್ಲದ ಅಂಶಗಳ ಬಗ್ಗೆ ಟೀಕೆಗಳು ಕೇಳಿಬಂದವು. ಸಂಸ್ಥೆಯ ಗೌರವ ಈ ರೀತಿಯಾಗಿ ನಾಶವಾಗುತ್ತಿದೆ’ ಎಂದು ಹೇಳಿತು.
‘ನೀವು ಆದೇಶವನ್ನು ಓದದೆಯೇ ಪ್ರಕರಣಗಳನ್ನು ವರ್ಗಾಯಿಸುವ ಉದ್ದೇಶವನ್ನು ಸುಪ್ರೀಂಕೋರ್ಟ್ ಹೊಂದಿದೆ ಎನ್ನುವಂತೆ ಬಿಂಬಿಸುತ್ತಿದ್ದೀರಿ’ ಎಂದು ಗುಜರಾತ್ ಬಾರ್ ಅಸೋಸಿಯೆಷನ್ ಪರವಾಗಿ ಹಾಜರಾಗಿದ್ದ ದುಶ್ಯಂತ್ ದೇವ್ ಅವರಿಗೆ ನ್ಯಾಯಮೂರ್ತಿ ರಾವ್ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವ್, ‘ಇಡೀ ದೇಶವೇ ಆ ರೀತಿಯ ಆಲೋಚನೆಯನ್ನು ಹೊಂದಿತ್ತು’ ಎಂದು ತಿಳಿಸಿದರು. ಆದರೆ ನ್ಯಾಯಮೂರ್ತಿ ಭಟ್ಟ ಅವರು ನಾವು ಅಂತಹ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಬದಲಾಗಿ ಕೇಂದ್ರ ಸರಕಾರಕ್ಕೆ ಹೈಕೋರ್ಟ್ಗಳಿಗೆ ಉತ್ತರಿಸುವಂತೆ ತಿಳಿಸಿದ್ದೆವು ಎಂದಿದ್ದಾರೆ.
ದೇವ್ ಅವರ ಉತ್ತರ ಆಲಿಸಿದ ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಿತು. ಅಷ್ಟರ ಒಳಗೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಫಿಡವಿಟ್ ಸಲ್ಲಿಸುವ ಸಾಧ್ಯತೆ ಇದೆ.
#SupremeCourt [Suo Motu case on #COVID19 issues]
CJI SA Bobde led bench to shortly hear the Suo Motu case pertaining to supply of essential drugs, oxygen, vaccination issues & question on #lockdown . Court to also decide if it will transfer cases from all High Courts#SuoMotu pic.twitter.com/j7ODl1UXdK
— Bar & Bench (@barandbench) April 23, 2021
ಇದನ್ನೂ ಓದಿ: ಕೊರೊನಾ ನಿರ್ವಹಣೆ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್
(Supreme Court postponed covid-19 Control suo-motu)
Published On - 4:12 pm, Fri, 23 April 21