Madurai Police: ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಸೂರ್ಯ ಬಂಧನ -ತೀವ್ರವಾಗಿ ಖಂಡಿಸಿದ ಕೆ ಅಣ್ಣಾಮಲೈ

ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯ ಅವರನ್ನು ಮಧುರೈ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ನಿನ್ನೆ ರಾತ್ರಿ ಚೆನ್ನೈನಲ್ಲಿ ಬಂಧಿಸಿದ್ದಾರೆ.

Madurai Police: ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಸೂರ್ಯ ಬಂಧನ -ತೀವ್ರವಾಗಿ ಖಂಡಿಸಿದ ಕೆ ಅಣ್ಣಾಮಲೈ
ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಸೂರ್ಯ ಬಂಧನ

Updated on: Jun 17, 2023 | 8:09 AM

ಚೆನ್ನೈ: ತಮಿಳುನಾಡು ಬಿಜೆಪಿ (Tamil Nadu BJP) ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯ ಅವರನ್ನು ಮಧುರೈ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು (Madurai Police) ನಿನ್ನೆ ರಾತ್ರಿ ಚೆನ್ನೈನಲ್ಲಿ ಬಂಧಿಸಿದ್ದಾರೆ. ಮಧುರೈ ಸಂಸದ ಸು ವೆಂಕಟೇಶನ್ ಅವರ ಇತ್ತೀಚಿನ ಟ್ವೀಟ್‌ಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್‌ ಜಿ ಸೂರ್ಯ ಅವರ ಬಂಧನವು ಅತ್ಯಂತ ಖಂಡನೀಯವಾಗಿದೆ. ಕಮ್ಯುನಿಸ್ಟರು, ಡಿಎಂಕೆ ಮಿತ್ರಪಕ್ಷಗಳ ಅಸಹ್ಯ ದ್ವಂದ್ವ ನೀತಿಯನ್ನು ಬಹಿರಂಗಪಡಿಸುವುದು ಅವರ ಏಕೈಕ ತಪ್ಪು … ಈ ಬಂಧನಗಳು ನಮ್ಮನ್ನು ತಡೆಯುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಟ್ವೀಟ್ ಮಾಡಿದ್ದಾರೆ

Published On - 8:07 am, Sat, 17 June 23