ತಮಿಳುನಾಡು: ಪೊಲೀಸ್​ ಠಾಣೆ ಬಳಿ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಯ ಬರ್ಬರ ಹತ್ಯೆ

ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯನ್ನು ಪೊಲೀಸ್ ಠಾಣೆ ಬಳಿಯೇ ದುಷ್ಕರ್ಮಿಗಳು ಕೊಚ್ಚಿ ಕೊಲೆ(Murder) ಮಾಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮೃತ ಆರೋಪಿಯನ್ನು ಮದನ್ ಅಲಿಯಾಸ್ ಅಪ್ಪುಲು ಎಂದು ಗುರುತಿಸಲಾಗಿದೆ. ತೂತುಕುಡಿ ಮೂಲದವನಾಗಿದ್ದು, ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದ. ಬೆಳಗ್ಗೆ 10 ಗಂಟೆ ವೇಳೆಗೆ ತಮ್ಮ ಪತ್ನಿ ಜತೆಗೆ ಪೊಲೀಸ್​ ಸ್ಟೇಷನ್​ಗೆ ಬಂದಿದ್ದ, ನಿತ್ಯವೂ ಠಾಣೆಗೆ ಬಂದು ಸಹಿಹಾಕುವ ನಿಯಮವಿದೆ. ಅಲ್ಲಿಂದ ಊಟ ಮಾಡಲೆಂದು ಹೋಟೆಲ್​ಗೆ ಹೋಗಿದ್ದ.

ತಮಿಳುನಾಡು: ಪೊಲೀಸ್​ ಠಾಣೆ ಬಳಿ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಯ ಬರ್ಬರ ಹತ್ಯೆ
ಸಾವು
Image Credit source: Times Of India

Updated on: Jul 18, 2025 | 9:29 AM

ಸೇಲಂ, ಜುಲೈ 18: ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯನ್ನು ಪೊಲೀಸ್ ಠಾಣೆ ಬಳಿಯೇ ದುಷ್ಕರ್ಮಿಗಳು ಕೊಚ್ಚಿ ಕೊಲೆ(Murder) ಮಾಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಮೃತ ಆರೋಪಿಯನ್ನು ಮದನ್ ಅಲಿಯಾಸ್ ಅಪ್ಪುಲು ಎಂದು ಗುರುತಿಸಲಾಗಿದೆ. ತೂತುಕುಡಿ ಮೂಲದವನಾಗಿದ್ದು, ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದ.

ಬೆಳಗ್ಗೆ 10 ಗಂಟೆ ವೇಳೆಗೆ ತಮ್ಮ ಪತ್ನಿ ಜತೆಗೆ ಪೊಲೀಸ್​ ಸ್ಟೇಷನ್​ಗೆ ಬಂದಿದ್ದ, ನಿತ್ಯವೂ ಠಾಣೆಗೆ ಬಂದು ಸಹಿಹಾಕುವ ನಿಯಮವಿದೆ. ಅಲ್ಲಿಂದ ಊಟ ಮಾಡಲೆಂದು ಹೋಟೆಲ್​ಗೆ ಹೋಗಿದ್ದ. ಹೋಟೆಲ್​​ನಲ್ಲಿ ಕುಳಿತಿದ್ದಾಗ ಮೂವರು ಅಪಚರಿತರುಇದ್ದಕ್ಕಿದ್ದಂತೆ ಅವರನ್ನು ಸುತ್ತುವರೆದು ಹರಿತವಾದ ಆಯುಧಗಳಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಹಸ್ತಂಪಟ್ಟಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮದನ್ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆಂದು ಸೇಲಂನ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪ್ರಾಥಮಿಕ ತನಿಖೆ ನಡೆಯುತ್ತಿದೆ. ಆರು ಸದಸ್ಯರ ಗ್ಯಾಂಗ್ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ದಾಳಿಕೋರರನ್ನು ಗುರುತಿಸಲು ಮತ್ತು ಬಂಧಿಸಲು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ಓದಿ: ಗೋಪಾಲ್ ಖೇಮ್ಕಾ ಕೊಲೆ ಪ್ರಕರಣ: ಆರೋಪಿ ವಿಕಾಸ್ ಪೊಲೀಸ್ ಎನ್​ಕೌಂಟರ್​​ನಲ್ಲಿ ಹತ್ಯೆ

ಮತ್ತೊಂದು ಘಟನೆ 

ಪೆರೋಲ್​ ಮೇಲೆ ಹೊರಗಿದ್ದ ಕೈದಿಗೆ ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ ದುಷ್ಕರ್ಮಿಗಳು
ಪೆರೋಲ್(Parole) ಮೇಲೆ ಹೊರಗಿದ್ದ ಕೈದಿಗೆ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಶಾಸ್ತ್ರಿ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಪ್ಯಾರಾಸ್ ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಅಪರಿಚಿತ ದುಷ್ಕರ್ಮಿಗಳು ಕೈದಿಯ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಕೋರರನ್ನು ಗುರುತಿಸಲು ಮತ್ತು ಹಲ್ಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಈ ಘಟನೆಯು ಆಸ್ಪತ್ರೆಯೊಳಗೆ ಭೀತಿ ಮತ್ತು ಅವ್ಯವಸ್ಥೆಗೆ ಕಾರಣವಾಯಿತು. ಗಾಯಗೊಂಡ ಕೈದಿ ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಬಕ್ಸಾರ್ ಮೂಲದ ಕೈದಿ ಚಂದನ್ ಮಿಶ್ರಾ, ಕೇಸರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಬೇವೂರ್ ಜೈಲಿನಲ್ಲಿದ್ದಾನೆ. ವೈದ್ಯಕೀಯ ಚಿಕಿತ್ಸೆಗಾಗಿ ಆತನನ್ನು ಪೆರೋಲ್ ಮೇಲೆ ಆಸ್ಪತ್ರೆಗೆ ಕರೆತರಲಾಗಿತ್ತು. ಘಟನೆಯ ನಂತರ, ಶಾಸ್ತ್ರಿ ನಗರ ಪೊಲೀಸ್ ಠಾಣೆಯ ತಂಡವೊಂದು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ