ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ; ವಿಡಿಯೋ ನೋಡಿ
ಇಂದು ಬೆಳಿಗ್ಗೆ ಬಿಹಾರದ ಪಾಟ್ನಾದ ಆಸ್ಪತ್ರೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಕೊಲೆ ಆರೋಪಿಯ ಮೇಲೆ ಗುಂಡು ಹಾರಿಸಿದ್ದಾರೆ. ಪೆರೋಲ್ ಮೇಲೆ ಹೊರಬಂದು ಪರಾಸ್ HMRI ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದನ್ ಮಿಶ್ರಾ ಎಂಬ ವ್ಯಕ್ತಿಯನ್ನು ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ವಾರ್ಡ್ನಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಕೊಲೆ ಮಾಡಲಾಗಿದೆ.
ಪಾಟ್ನಾ, ಜುಲೈ 17: ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಚಂದನ್ ಮಿಶ್ರಾ ಎಂಬ ವ್ಯಕ್ತಿ ಪರೋಲ್ ಮೇಲೆ ಹೊರಬಂದು ಅನಾರೋಗ್ಯದಿಂದ ಪಾಟ್ನಾದ (Patna) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಆಸ್ಪತ್ರೆಗೆ ನುಗ್ಗಿದ ಐವರು ರೌಡಿಗಳು ವಾರ್ಡ್ಗೆ ನುಗ್ಗಿ ಚಂದನ್ನನ್ನು ಶೂಟ್ ಮಾಡಿ ಕೊಂದು ಪರಾರಿಯಾಗಿದ್ದಾರೆ. ಅವರು ಕಾರಿಡಾರ್ನಲ್ಲಿ ಬಂದು ವಾರ್ಡ್ ಒಳಗೆ ಹೋಗುವುದನ್ನು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ.
ಈ ಕೊಲೆ ಮಾಡಿದವರನ್ನು ಆ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಕಂಪನಿಯೊಂದಿಗೆ ಸಂಬಂಧ ಹೊಂದಿರುವ ಬಿಲ್ಡರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಗುರುತಿಸಲಾಗಿದೆ. ಈ ದಾಳಿಕೋರರು ಈ ಹಿಂದೆ ಅಪರಾಧ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಇತರರಿಗೆ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

