ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇದುವರೆಗೂ ಮಳೆಯಿಂದ 116 ಜನರು ಮೃತಪಟ್ಟಿದ್ದಾರೆ, 253 ಜನರಿಗೆ ಗಾಯಗಳಾಗಿವೆ. ಪ್ರವಾಹದಿಂದ ಹಾನಿಗೊಳಗಾದ ಸ್ಥಳಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿ ನಿರಂತರ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರಿದ ನಂತರ ಪಾಕಿಸ್ತಾನದ ಅಧಿಕಾರಿಗಳು ರಾವಲ್ಪಿಂಡಿಯ ನಲಾ ಲೈ ಬಳಿಯ ತಗ್ಗು ಪ್ರದೇಶಗಳಾದ ಗವಲ್ಮಂಡಿ ಮತ್ತು ಕಟಾರಿಯನ್‌ಗೆ ತುರ್ತು ಸ್ಥಳಾಂತರ ಎಚ್ಚರಿಕೆ ನೀಡಿದ್ದಾರೆ.
ಇಸ್ಲಮಾಬಾದ್, ಜುಲೈ 17: ಪಾಕಿಸ್ತಾನದಲ್ಲಿ (Pakistan Rains) 20 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಜೂನ್ 26ರಿಂದ ಪಾಕಿಸ್ತಾನದಲ್ಲಿ (Pakistan Floods) ನಿರಂತರವಾಗಿ ಧಾರಾಕಾರ ಮಳೆಯಾದ್ದರಿಂದ ಹಠಾತ್ ಪ್ರವಾಹ ಉಂಟಾಗಿದೆ. ಇದು ಪಾಕ್ ದೇಶದಲ್ಲಿ ಅಪಾರ ಹಾನಿಯನ್ನುಂಟುಮಾಡಿದೆ. ಈ ಪ್ರವಾಹ ಮತ್ತು ಮಳೆಯಿಂದಾಗಿ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ಇದುವರೆಗೆ 116 ಜನರು ಸಾವನ್ನಪ್ಪಿದ್ದಾರೆ, 253 ಜನರು ಗಾಯಗೊಂಡಿದ್ದಾರೆ. ಈ ಮಾಹಿತಿಯನ್ನು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಬಿಡುಗಡೆ ಮಾಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

