ಯಾರೂ ಕಾನೂನಿಗಿಂತ ಮೇಲಲ್ಲ: ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್

|

Updated on: Feb 14, 2023 | 9:41 PM

BBC Officeತೆರಿಗೆ ಅಧಿಕಾರಿಗಳು ಈಗಾಗಲೇ ನೌಕರರ ವೈಯಕ್ತಿಕ ಲ್ಯಾಪ್‌ಟಾಪ್ ಮತ್ತು ಸೆಲ್‌ಫೋನ್‌ಗಳನ್ನು ಪರಿಶೀಲಿಸಿದ್ದಾರೆ. ಡೆಸ್ಕ್‌ಟಾಪ್‌ಗಳನ್ನು ಸಹ ಪರಿಶೀಲಿಸಿದ್ದಾರೆ. " tax " ಎಂಬ ಕೀವರ್ಡ್‌ನೊಂದಿಗೆ ಉದ್ಯೋಗಿಗಳ ವೈಯಕ್ತಿಕ ಲಾಗಿನ್‌ಗಳನ್ನು ಹುಡುಕುತ್ತಿದ್ದಾರೆ.

ಯಾರೂ ಕಾನೂನಿಗಿಂತ ಮೇಲಲ್ಲ: ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Follow us on

ನವದೆಹಲಿ: ದೆಹಲಿ ಮತ್ತು ಮುಂಬೈ ಬಿಬಿಸಿ (British Broadcasting Corporation) ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಪರಿಶೀಲನೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್(Anurag Thakur), “ಯಾರೂ ಕಾನೂನಿಗಿಂತ ಮೇಲಲ್ಲ” ಎಂದು ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆಯ ಕ್ರಮದ ಬಗ್ಗೆ ವಿರೋಧ ಮತ್ತು ಸಂಪಾದಕರ ಗಿಲ್ಡ್ ಟೀಕೆಗಳ ನಡುವೆಬಿಜೆಪಿ, ಬಿಬಿಸಿ ಭಾರತದ ಬಗ್ಗೆ “ವಿಷಕಾರಿ ಮತ್ತು ಆಧಾರ ರಹಿತ” ವರದಿ ಮಾಡುತ್ತಿದೆ ಎಂದು ಆರೋಪಿಸಿದೆ. ಆಪಾದಿತ ತೆರಿಗೆ ವಂಚನೆಗೆ ಸಂಬಂಧಿಸಿದ ಪರಿಶೀಲನೆ ಇಂದು ಬೆಳಗ್ಗೆ ಆರಂಭಗೊಂಡಿದ್ದು, ರಾತ್ರಿಯೂ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಅಧಿಕಾರಿಗಳು, 2012 ರ ಹಿಂದಿನ ಖಾತೆಯ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ತೆರಿಗೆ ಅಧಿಕಾರಿಗಳು ಈಗಾಗಲೇ ನೌಕರರ ವೈಯಕ್ತಿಕ ಲ್ಯಾಪ್‌ಟಾಪ್ ಮತ್ತು ಸೆಲ್‌ಫೋನ್‌ಗಳನ್ನು ಪರಿಶೀಲಿಸಿದ್ದಾರೆ. ಡೆಸ್ಕ್‌ಟಾಪ್‌ಗಳನ್ನು ಸಹ ಪರಿಶೀಲಿಸಿದ್ದಾರೆ. ” tax ” ಎಂಬ ಕೀವರ್ಡ್‌ನೊಂದಿಗೆ ಉದ್ಯೋಗಿಗಳ ವೈಯಕ್ತಿಕ ಲಾಗಿನ್‌ಗಳನ್ನು ಹುಡುಕುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯು ಪರಿಶೀಲನೆಯ ವಿವರಗಳನ್ನು ಹಂಚಿಕೊಳ್ಳುತ್ತದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:BBC Tax Survey: ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಐಟಿ ಪರಿಶೀಲನೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ: ಬಿಬಿಸಿ

ಬಿಬಿಸಿಯಲ್ಲಿನ ಐಟಿ ಪರಿಶೀಲನೆಯನ್ನು ಅಂತರಾಷ್ಟ್ರೀಯ ಸಮುದಾಯವು ತೀವ್ರವಾಗಿ ವೀಕ್ಷಿಸುತ್ತಿದೆ. ಯುಕೆ ತನ್ನ ರಾಜ್ಯ ಪ್ರಸಾರದಲ್ಲಿ ಪರಿಸ್ಥಿತಿಯನ್ನು “ನಿಕಟವಾಗಿ ಗಮನಿಸುತ್ತಿದೆ” ಎಂದು ಬ್ರಿಟಿಷ್ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ