ಈ ಕುರಿತು ತೆಲಂಗಾಣ ರಾಜ್ಯದ ವಿಧಾನಸಭೆಯಲ್ಲಿ ಇಂದು ನಿರ್ಣಯವೊಂದನ್ನು ಪ್ರಸ್ತಾಪಿಸಿ ನಂತರ ಅಂಗೀಕರಿಸಲಾಯಿತು. ಆದರೆ, ಎ ಐ ಎಮ್ ಐ ಎಮ್ ಪಕ್ಷದ ಸದಸ್ಯರು ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರ ನೇತೃತ್ವದಲ್ಲಿ ಪ್ರಸ್ತಾಪವನ್ನು ವಿರೋದಿಸಿದ್ದೂ ಅಲ್ಲದೆ ಕಲಾಪ ಬಹಿಷ್ಕರಿಸಿ ಸದನದಿಂದ ಹೊರನಡೆದರು. ಆಮೇಲೆ ಮಾಧ್ಯಮ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ ಒವೈಸಿ,‘‘ ಮಾಜಿ ಪ್ರಧಾನ ಮಂತ್ರಿ ದಿವಂಗತ ಪಿ ವಿ ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕೋರುವ ಚರ್ಚೆ ಮತ್ತು ಪ್ರಸ್ತಾವನೆಯನ್ನು ವಿರೋಧಿಸಿ ನಾವು ಕಲಾಪವನ್ನು ಬಹಿಷ್ಕರಿಸಿದ್ದೇವೆ. ಒಬ್ಬ ಪ್ರಧಾನ ಮಂತ್ರಿಯಾಗಿ ಅವರು ಅವರು ಬಾಬ್ರಿ ಮಸೀದಿ ಧ್ವಂಸ ಮಾಡುವುದನ್ನು ತಡೆಯುವಲ್ಲಿ ವಿಫಲರಾದರು. ಅವರ ಮತೀಯ ರಾಜಕಾರಣ ಎಲ್ಲರಿಗೂ ಗೊತ್ತಿರುವ ವಿಷಯವೇ,’’ ಎಂದು ಹೇಳಿದರು.