ದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಗಳ ಅಧಿಕಾರಾವಧಿ ಮೂರು ವರ್ಷವಾದರೂ ಇರಬೇಕು. ಹಾಗಿದ್ದಾಗ ಮಾತ್ರ ಅವರು ಕೈಗೊಂಡ ಕ್ರಮಗಳು ತಾರ್ಕಿಕ ಅಂತ್ಯ ಪಡೆಯಬಹುದು ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಶುಕ್ರವಾರ ಅಭಿಪ್ರಾಯಪಟ್ಟರು. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಹೊಂದಿದ ಎಸ್.ಎ.ಬೋಬ್ಡೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುವುದು ನಿಜಕ್ಕೂ ಬೇಸರದ ಸಂಗತಿ. ಸುಮಾರು ಮೂರು ವರ್ಷಗಳ ಕರ್ತವ್ಯದ ಅವಧಿಯಾದರೂ ದೊರೆತರೆ ತಾವು ಅಂದುಕೊಂಡ ಮಹತ್ವದ ಸಂಗತಿಗಳನ್ನು ಪೂರ್ಣಗೊಳಿಸಬಹುದು. ಒಂದು ತಾರ್ಕಿಕ ಅಂತ್ಯ ಹಾಡಬಹುದು ಎಂದು ಅಟಾರ್ನಿ ಜನರಲ್ ಕೆ ಕೆ ವೆಣುಗೋಪಾಲ್ ಹೇಳಿದರು. 2020ರ ಮಾರ್ಚ್ನಲ್ಲಿ ಕೊವಿಡ್ ಸೋಂಕಿನಿಂದ ಇಡೀ ವಿಶ್ವವೇ ತೊಂದರೆಗೆ ಒಳಗಾಯಿತು. ನ್ಯಾಯಾಲಯಗಳು ಸಹ ಮುಚ್ಚಲ್ಪಡುತ್ತವೆ ಎಂದು ಹಲವರು ಭಾವಿಸಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನ್ಯಾಯಾಲಯಗಳು ಮುಚ್ಚಲು ಅವಕಾಶ ನೀಡಲಿಲ್ಲ. ವರ್ಚುವಲ್ ಹಿಯರಿಂಗ್ ಪದ್ಧತಿಯನ್ನು ಪರಿಚಯಿಸಿದರು. 50 ಸಾವಿರ ಪ್ರಕರಣಗಳು ವರ್ಚುವಲ್ ಹಿಯರಿಂಗ್ನಿಂದಲೆ ಪರಿಹಾರವಾಗಿವೆ ಎಂದು ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಇಂದು ನಿವೃತ್ತಿ ಹೊಂದಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ‘ಖುಷಿ, ಸದ್ಭಾವನೆ ಮತ್ತು ಇಷ್ಟಪಟ್ಟ ನೆನಪುಗಳೊಂದಿಗೆ ನಿವೃತ್ತನಾಗುತ್ತಿದ್ದೇನೆ. ಅಧಿಕಾರಾವಧಿಯಲ್ಲಿ ನನ್ನ ಬಳಿ ಸಾಧ್ಯವಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ ಎಂಬ ಸಂಪೂರ್ಣ ತೃಪ್ತಿಯಿಂದ ನಿವೃತ್ತಿ ಹೊಂದುತ್ತಿದ್ದೇನೆ ’ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಉಪಸ್ಥಿತರಿದ್ದ ಸುಪ್ರೀಂಕೊರ್ಟ್ ಬಾರ್ ಅಸೋಸಿಯೇಶನ್ ಅದ್ಯಕ್ಷ ವಿಕಾಸ್ ಸಿಂಗ್ ಸಹ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು. 65ನೇ ವಯಸ್ಸಿಗೆ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುವುದು ಸರಿಯಲ್ಲ. ನಿವೃತ್ತಿ ವಯಸ್ಸಿನ ಬದಲಾವಣೆಯಾಗಲು ಸಾಂವಿಧಾನಿಕ ತಿದ್ದುಪಡಿ ತರಬೇಕಿದೆ ಎಂದರು.
ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ; ಆನ್‌ಲೈನ್ ನೋಂದಣಿಗೆ ಅವಕಾಶ, ಇಲ್ಲಿದೆ ವಿವರ
ಕೊರೊನಾ ದೃಢಪಟ್ಟರೆ ಆತಂಕ ಪಡಬೇಡಿ, ಜನರು ಪ್ರಾಣಾಯಾಮ ಮಾಡಬೇಕು -ಡಾ. ಕೆ.ಸುಧಾಕರ್
(Tenure of CJI should 3 years says attorney general K K Venugopal)
Published On - 2:42 pm, Fri, 23 April 21