ಪಂಜಾಬ್: ರೀಲ್ಸ್ ಹುಚ್ಚಿನಿಂದ ಕೆಲಸ ಕಳೆದುಕೊಂಡ ಮಹಿಳಾ ಪೊಲೀಸ್​​, ಹಿಗ್ಗಾಮುಗ್ಗಾ ಟ್ರೋಲ್​​ ಮಾಡಿದ ನೆಟ್ಟಿಗರು

|

Updated on: Sep 29, 2023 | 2:03 PM

ಮಹಿಳಾ ಪೊಲೀಸ್​​ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಮಾತ್ರವಲ್ಲದೇ ಟೋಲ್​​ ಕೂಡ ಆಗಿದ್ದಾರೆ. ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಜತೆಗೆ ಆ ಮಹಿಳಾ ಪೊಲೀಸ್​​ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಈ ಮಹಿಳಾ ಪೊಲೀಸ್​​ ಅಧಿಕಾರಿ, ಇಲಾಖೆಯ ವಾಹನವನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್​ ರೀಲ್ಸ್ ಮಾಡಿದ್ದಾರೆ.

ಪಂಜಾಬ್: ರೀಲ್ಸ್ ಹುಚ್ಚಿನಿಂದ ಕೆಲಸ ಕಳೆದುಕೊಂಡ ಮಹಿಳಾ ಪೊಲೀಸ್​​, ಹಿಗ್ಗಾಮುಗ್ಗಾ ಟ್ರೋಲ್​​ ಮಾಡಿದ ನೆಟ್ಟಿಗರು
ವೈರಲ್​​ ವಿಡಿಯೋ
Follow us on

ಪಂಜಾಬ್​, ಸೆ.29: ರೀಲ್ಸ್​​​ ಹುಚ್ಚಿನಿಂದ ಅನೇಕ ತೊಂದರೆಗಳನ್ನು ಅನುಭವಿಸಿರುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅದರಲ್ಲೂ ಇನ್ಸ್ಟಾಗ್ರಾಮ್​ನಲ್ಲಿ ರೀಲ್ಸ್​​​ ಮಾಡುವುದು ಒಂದು ಟ್ರೆಂಡ್​​ ಆಗಿದೆ. ಆದರೆ ಈ ರೀಲ್ಸ್​​​ ಮಾಡುವ ಮುನ್ನ ನಾವು ಯಾವ ಸ್ಥಾನಮಾನದಲ್ಲಿದ್ದೇವೆ? ಇದರ ಜತೆಗೆ ನಾವು ಮಾಡುವ ಒಂದು ವಿಡಿಯೋ ಅಥವಾ ರೀಲ್ಸ್​​ ಈ ಸಮಾಜದ ಮೇಲೆ ಯಾವ ಪ್ರಭಾವ ಉಂಟು ಮಾಡುತ್ತದೆ ಎಂಬುದನ್ನು ಮೊದಲು ನೋಡಬೇಕು. ಹೀಗಿಗಾ ಪೊಲೀಸರು ಕೂಡ ರೀಲ್ಸ್​​ ಮಾಡುವುದು ಹೆಚ್ಚಾಗಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದಲ್ಲ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ ಅಧಿಕಾರಿಗಳು. ಮೊದಲು ಅವರು ಕಾನೂನುಗಳನ್ನು ಪಾಲಿಸಬೇಕು. ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮತ್ತು ಪ್ರೇರಣಾದಾಯಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕು. ಅದನ್ನು ಬಿಟ್ಟು, ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಕೆಲಸ ನಡೆಯುತ್ತಿದೆ. ಇಂತಹದೇ ಒಂದು ಘಟನೆ ಪಂಜಾಬ್​​ನಲ್ಲಿ ನಡೆದಿದೆ. ಪಂಜಾಬ್​​​ನ ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಈ ಮಹಿಳಾ ಪೊಲೀಸ್​​ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಮಾತ್ರವಲ್ಲದೇ ಟೋಲ್​​ ಕೂಡ ಆಗಿದ್ದಾರೆ. ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಜತೆಗೆ ಆ ಮಹಿಳಾ ಪೊಲೀಸ್​​ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಈ ಮಹಿಳಾ ಪೊಲೀಸ್​​ ಅಧಿಕಾರಿ, ಇಲಾಖೆಯ ವಾಹನವನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್​ ರೀಲ್ಸ್ ಮಾಡಿದ್ದಾರೆ.

ಇದನ್ನೂ ಓದಿ:ಮಹಿಳಾ ಪೊಲೀಸ್ ಪೇದೆ ಮೇಲೆ ಕಾಂಗ್ರೆಸ್ ಶಾಸಕನಿಂದ ದೌರ್ಜನ್ಯ ಆರೋಪ

ಪೊಲೀಸ್​​ ಇಲಾಖೆ ಕಾರಿನ ಬಾನೆಟ್ ಮೇಲೆ ಕುಳಿತು ಪಂಜಾಬಿ ಹಾಡಿಗೆ ಡ್ಯಾನ್ಸ್​​ ಮಾಡಿದ್ದಾರೆ. ಜತೆಗೆ ಈ ವಿಡಿಯೋದಲ್ಲಿ ಆಕ್ಷೇಪಾರ್ಹ ಸನ್ನೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ಈ ವಿಡಿಯೋ ಕೊನೆಯಲ್ಲಿ ಮಹಿಳಾ ಪೊಲೀಸ್​​ ಜತೆಗೆ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ.

ಇಲ್ಲಿದೆ ವಿಡಿಯೋ

ಇನ್ನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕೋಪಕ್ಕೆ ಗುರಿಯಾಗಿದ್ದಾರೆ. ಕಾನೂನಿನ ಪಾಠ ಮಾಡುವವರು ಹೀಗೆ ಮಾಡುವುದು ಸರಿಯೇ? ಇದು ಕಾನೂನಿನ ಉಲ್ಲಂಘನೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. ನಂತರ ಪೊಲೀಸ್​​ ಇಲಾಖೆಯ ಹಿರಿಯ ಅಧಿಕಾರಿಗಳು ಅವರನ್ನು ಅಮಾನತು ಮಾಡಿದ್ದಾರೆ. ಇದರ ಜತೆಗೆ ತನಿಖೆಯನ್ನು ನಡೆಸಲಾಗುವುದು ಎಂದು ಪೊಲೀಸ್​​ ಇಲಾಖೆ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:26 pm, Fri, 29 September 23