ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಭೀಕರ ಅನಾಹುತ ನಡೆದಿದೆ. ಮೊಬೈಲ್ ಫೋನ್ (mobile) ಸ್ಫೋಟಗೊಂಡು ಮಗು (girl) ಸಾವನ್ನಪ್ಪಿದೆ. ಸೋಮವಾರ ರಾತ್ರಿ ತ್ರಿಶೂರಿನ (Kerala) ತಿರುವಿಲ್ವಾಮಲದಲ್ಲಿ ಈ ಘಟನೆ ನಡೆದಿದೆ. ಚಾರ್ಜ್ ಮಾಡಿ ಗೇಮ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಮಾರ್ಟ್ ಫೋನ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಪಟ್ಟಿಪರಂಬುವಿನ ಆದಿತ್ಯಶ್ರೀ ಎಂಬ 8 ವರ್ಷದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ (death) ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ಯಾಪ್ ಇಲ್ಲದೇ ಸುದೀರ್ಘ ಕಾಲ ಆಟ ಆಡುವಾಗ ಫೋನ್ ಬಿಸಿಯಾಗುತ್ತದೆ ಎನ್ನಲಾಗಿದೆ. ಬೇಸಿಗೆಯಾಗಿದ್ದರಿಂದ ಬಿಸಿಲಿನ ತಾಪ ಹೆಚ್ಚಿ ಫೋನ್ ಸ್ಫೋಟಗೊಂಡಿದೆ. ಆದಿತ್ಯಶ್ರೀ ಸಾವಿನಿಂದ ಆಕೆಯ ಕುಟುಂಬ ದುಃಖದ ಮಡುವಿನಲ್ಲಿದೆ.
ಸೋಮವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಿತ್ಯಶ್ರೀ ತಿರುವಿಲ್ವಾಮಲದ ಕ್ರೈಸ್ಟ್ ನ್ಯೂ ಲೈಫ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಘಟನೆ ಸಂಬಂಧ ಪಜ್ಜನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಹಲವು ಪ್ರದೇಶಗಳಲ್ಲಿ ಮೊಬೈಲ್ ಸ್ಫೋಟಗೊಂಡ ಘಟನೆಗಳು ಬೆಳಕಿಗೆ ಬಂದಿರುವುದು ಗೊತ್ತಾಗಿದೆ. ಫೋನ್ ಚಾರ್ಜ್ ಮಾಡುವಾಗ ಗೇಮ್ ಆಡುವುದು, ಫೋನ್ ನಲ್ಲಿ ಮಾತನಾಡುವುದು, ಬಿಸಿಯಾಗಿರುವಾಗ ಫೋನ್ ಬಳಸುವುದು ಅಪಾಯಕರ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 am, Tue, 25 April 23