ಇದು ದೇಶದ ವಿಷಯ, ವಿರೋಧವಲ್ಲ: ಶರದ್ ಪವಾರ್​​ನ್ನು ಭೇಟಿ ಮಾಡಿದ ಅರವಿಂದ ಕೇಜ್ರಿವಾಲ್

|

Updated on: May 25, 2023 | 6:53 PM

ಶರದ್ ಪವಾರ್ ಅವರು ಇಂದು ದೇಶದ ದೊಡ್ಡ ನಾಯಕರಲ್ಲಿ ಒಬ್ಬರು. ಅವರು ನಮ್ಮನ್ನು ಬೆಂಬಲಿಸಬೇಕು ಎಂದು ನಾನು ಅವರನ್ನು ವಿನಂತಿಸುತ್ತೇನೆ, ದಯವಿಟ್ಟು ದೇಶದ ಇತರ ಪಕ್ಷಗಳಿಂದ ಬೆಂಬಲವನ್ನು ಗಳಿಸಲು ನಮಗೆ ಸಹಾಯ ಮಾಡಿ ಎಂದ ಕೇಜ್ರಿವಾಲ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದು ದೇಶದ ವಿಷಯ, ವಿರೋಧವಲ್ಲ: ಶರದ್ ಪವಾರ್​​ನ್ನು  ಭೇಟಿ ಮಾಡಿದ ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್- ಶರದ್ ಪವಾರ್
Follow us on

ಮುಂಬೈ: ದೆಹಲಿ ಅಧಿಕಾರಿಗಳ ನಿಯಂತ್ರಣ ಕುರಿತ ಕೇಂದ್ರದ ಮಸೂದೆಯನ್ನು ರಾಜ್ಯಸಭೆಯಲ್ಲಿ ಸೋಲಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಹೊರಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ತಮಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್ (Sharad Pawar )ಮತ್ತು ಉದ್ಧವ್ ಠಾಕ್ರೆ (Uddhav Thackeray) ಅವರ ಬೆಂಬಲವಿದೆ ಎಂದು ಹೇಳಿದ್ದಾರೆ. ನಿನ್ನೆ ಮುಂಬೈನಲ್ಲಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದ ಕೇಜ್ರಿವಾಲ್, ಬಿಜೆಪಿಯ ಆಟದ ಯೋಜನೆಯು ದೇಶಕ್ಕೆ ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಇದು ವಿರೋಧದ ವಿಚಾರವಲ್ಲ, ದೇಶದ ವಿಚಾರ ಎಂದು ಹೇಳಿದ್ದಾರೆ. ಕೇಜ್ರಿವಾಲ್ ಈಗಾಗಲೇ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಶರದ್ ಪವಾರ್ ಅವರು ಇಂದು ದೇಶದ ದೊಡ್ಡ ನಾಯಕರಲ್ಲಿ ಒಬ್ಬರು. ಅವರು ನಮ್ಮನ್ನು ಬೆಂಬಲಿಸಬೇಕು ಎಂದು ನಾನು ಅವರನ್ನು ವಿನಂತಿಸುತ್ತೇನೆ, ದಯವಿಟ್ಟು ದೇಶದ ಇತರ ಪಕ್ಷಗಳಿಂದ ಬೆಂಬಲವನ್ನು ಗಳಿಸಲು ನಮಗೆ ಸಹಾಯ ಮಾಡಿ ಎಂದ ಕೇಜ್ರಿವಾಲ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೇಜ್ರಿವಾಲ್ ಅವರು ಇತರ ಪಕ್ಷಗಳನ್ನು ಹೆಸರಿಸದಿದ್ದರೂ, ರಾಜ್ಯಸಭೆಯ ಕಾರ್ಯತಂತ್ರದೊಂದಿಗೆ ಕಾಂಗ್ರೆಸ್ ಅನ್ನು ತರಲು ಪವಾರ್ ಅವರ ಸಹಾಯದ ಅಗತ್ಯವಿದೆ ಎಂಬ ಊಹಾಪೋಹವಿದೆ.


ಈ ವಿಷಯದ ಬಗ್ಗೆ ಕಾಂಗ್ರೆಸ್ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಅಂದ ಹಾಗೆ ತನ್ನ ಪ್ರಾದೇಶಿಕ ನಾಯಕರೊಂದಿಗೆ ಸಮಾಲೋಚಿಸಿದ ನಂತರವೇ ನಿರ್ಧಾರ ಕೈಗೊಳ್ಳುವುದಾಗಿ ಕಾಂಗ್ರೆಸ್ ಹೇಳಿದೆ., ಅವರಲ್ಲಿ ಹಲವರು ಪ್ರಾದೇಶಿಕ ಪಕ್ಷಗಳಿಗೆ ಸಹಾಯ ಮಾಡುವ ಕಲ್ಪನೆಯನ್ನು ವಿರೋಧಿಸುತ್ತಾರೆ. ಕಾಂಗ್ರೆಸ್‌ನ ದೆಹಲಿ ಘಟಕವು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದೊಂದಿಗೆ ಭಿನ್ನಾಭಿಪ್ರಾಯದಲ್ಲಿದೆ.

ರಾಜ್ಯಸಭಾ ಕದನದಲ್ಲಿ ಎಎಪಿ ಗೆಲ್ಲಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಜತೆಗೆ ತರುವು ಅತ್ಯಗತ್ಯ. ಮೇಲ್ಮನೆಯಲ್ಲಿ ಪಕ್ಷವು 31 ಸಂಸದರನ್ನು ಹೊಂದಿದೆ. ತೃಣಮೂಲ ಕಾಂಗ್ರೆಸ್ 12 ಸಂಸದರನ್ನು ಹೊಂದಿದೆ, ಎನ್‌ಸಿಪಿ ನಾಲ್ವರನ್ನು ಮತ್ತು ಶಿವಸೇನೆ (ಯುಬಿಟಿ) ಮೂರು ಸದಸ್ಯರನ್ನು ಹೊಂದಿದ್ದು ಎಎಪಿ 10 ಸಂಸದರನ್ನು ಹೊಂದಿದೆ.

ಮುಂಗಾರು ಅಧಿವೇಶನದಲ್ಲಿ ಈ ವಿಷಯದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ನಿರೀಕ್ಷೆಯಿದ್ದು, ಉಭಯ ಸದನಗಳಲ್ಲಿ ಅಂಗೀಕಾರವಾಗುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Thu, 25 May 23