ಹೈದರಾಬಾದ್: ಅವು ಪ್ರಪಂಚವೇ ಅರಿಯದ ಪುಟ್ಟ ಕಂದಮ್ಮಗಳು. ಹಗಲೊತ್ತಲ್ಲಿ ಆಟವಾಡಿ.. ರಾತ್ರಿ ತುತ್ತು ತಿಂದು ತಣ್ಣಗೆ ಮಲಗಿದ್ವು. ಆದ್ರೆ ಅದೇನಾಯ್ತೋ ನೋಡಿ ಅಲ್ಲಾದ ಆ ಒಂದು ದುರಂತ 3 ಮಕ್ಕಳು ಚಿರನಿದ್ರೆಗೆ ಜಾರಿದ್ವು. ಕರುಳ ಬಳ್ಳಿಯನ್ನ ಕಳೆದ್ಕೊಂಡು ಪೋಷಕರು ಪರಿತಪಿಸಿದ್ರೆ, ಹೃದಯವಿದ್ರಾವಕ ಸೀನ್ ಕಂಡು ಎಲ್ಲರ ಕಣ್ಣಾಲಿ ತುಂಬಿ ಹೋಗಿತ್ತು.
ಮನೆಯ ಗೋಡೆ ಪರ್ವತದಂತೆ ನೆಲಕಪ್ಪಳಿಸಿದೆ. ಪಾತ್ರೆ-ಪಗಡೆಗಳು ದೊಪ್ ಅಂತ ಭೂಮಿಗಪ್ಪಳಿಸಿವೆ. ನೆತ್ತರು ನೀರಿನಂತೆ ಚಿಮ್ಮಿದೆ. ದೇಹದ ಭಾಗಗಳು ಛಿದ್ರವಾಗಿ ಬಿದ್ದಿವೆ. ಈ ಭಯಾನಕ ಸೀನ್ಗೆ ಎಲ್ರೂ ನಡುಗಿ ಹೋಗಿದ್ದಾರೆ. ಕಣ್ಣೀರು ಹೊಳೆಯಂತೆ ಹರಿದಿದೆ.
ಇದು ಅಂತಿಂಥಾ ಅನಾಹುತವಲ್ಲ. ಕರುಳು ಕಿತ್ತು ಬರೋ, ಎದೆ ಝಲ್ ಅನ್ನಿಸೋ ಭಯಾನಕ ದುರಂತ. ಇಲ್ಲಾಗಿರೋ ಸೀನ್ಗಳಿಗೆ ದೇವರಿಗೂ ಒಂದಿಷ್ಟು ಕರುಣೆ ಇಲ್ವಾ.. ಅಷ್ಟೊಂದು ಕ್ರೂರಿಯಾದ್ನಾ ಅನ್ನಿಸಿ ಬಿಡುತ್ತೆ. ಅದಕ್ಕೆ ಕಾರಣ ಹೈದರಾಬಾದ್ನಲ್ಲಾ ಈ 3 ಕಂದಮ್ಮಗಳ ದಾರುಣ ಸಾವು.
ಉರುಳಿ ಬಿದ್ದ ಗೋಡೆ.. 3 ಮಕ್ಕಳು ದಾರುಣ ಸಾವು..!
ಅಂದ್ಹಾಗೆ.. ಈ ಭಯಾನಕ.. ಘೋರಾತಿಘೋರ.. ರಣಭೀಕರ ದುರಂತ ನಡೆದಿದ್ದು ಹೈದರಾಬಾದ್ನ ಹಬೀಬ್ ನಗರ ಪ್ರದೇಶದಲ್ಲಿರೋ ಮಾಂಗಾರ ಬಸ್ತಿ ಪ್ರದೇಶದಲ್ಲಿ. ಮಿಠಾಯಿಲಾಲ್ ಹಾಗೂ ಸೀಮಾ ದಂಪತಿಗೆ ನಾಲ್ಕು ಜನ ಮಕ್ಕಳಿದ್ರು. ಈ ಪೈಕಿ ಒಂದು ಮಗು ಕೆಲ ತಿಂಗಳ ಹಿಂದಷ್ಟೇ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಇದೇ ನೋವಲ್ಲಿ ದಂಪತಿ ಬದುಕಿನ ಬಂಡಿ ಸಾಗಿಸ್ತಿದ್ರು.
ಇನ್ನು ಮನೆ ಗೋಡೆ ಶಿಥಿಲಾವಸ್ಥೆ ಸ್ಥಿತಿಗೆ ತಲುಪಿತ್ತಂತೆ. ಆದ್ರೂ ದುರಸ್ತ್ತಿ ಮಾಡೋ ಗೋಜಿಗೆ ಹೋಗಿರ್ಲಿಲ್ಲ ಎನ್ನಲಾಗಿದೆ. ಅಂದಿನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕುಸಿದ ಗೋಡೆ ತೆರವುಗೊಳಿಸಿದ್ರು. ಇತ್ತ ಭೀಕರ ದುರಂತದಲ್ಲಿ ಮಿಠಾಯಿಲಾಲ್ ಸಹೋದರನಿಗೆ ಸೇರಿದ 3 ಮಕ್ಕಳು ಗಂಭೀರ ಗಾಯಗಳಾಗಿವೆ. ಹೈದಾರಾಬಾದ್ನ ನಿಲೋಫರ್ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ. ಹಬೀಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಒಟ್ನಲ್ಲಿ, ಇಂಥದೊಂದು ಘಟನೆ ನಡೆದೋಗುತ್ತೆ ಅಂತ ಕನಸು ಕಂಡಿರ್ಲಿಲ್ಲ. ಕತ್ತಲು ಸರಿದು ಬೆಳಕು ಮೂಡೋ ಹೊತ್ತಲ್ಲಿ ಘೋರ ದುರಂತ ನಡೆದೋಗಿದೆ. ತುತ್ತು ತಿಂದು ನಿದ್ದೆಗೆ ಜಾರಿದ್ದ ಕಂದಮ್ಮಗಳು ಚಿರನಿದ್ರೆಗೆ ಜಾರಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.
Published On - 7:41 am, Sat, 29 February 20