ಮತ್ತೆ ನಕ್ಸಲರ ಅಟ್ಟಹಾಸ, ಗುಂಡಿನ ಚಕಮಕಿಯಲ್ಲಿ ಮೂವರು CRPF ಯೋಧರು ಹುತಾತ್ಮ

|

Updated on: Feb 25, 2023 | 2:18 PM

ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಮೂವರು CRPF ಯೋಧರು ಹುತಾತ್ಮರಾಗಿದ್ದಾರೆ.

ಮತ್ತೆ ನಕ್ಸಲರ ಅಟ್ಟಹಾಸ, ಗುಂಡಿನ ಚಕಮಕಿಯಲ್ಲಿ ಮೂವರು CRPF ಯೋಧರು ಹುತಾತ್ಮ
ಸಾಂದರ್ಭಿಕ ಚಿತ್ರ
Follow us on

ಸುಕ್ಮಾ: ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಸುಕ್ಮಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು CRPF ಯೋಧರು ಹುತಾತ್ಮರಾಗಿದ್ದಾರೆ. ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಸಹಾಯಕ ಸಬ್ ಇನ್ಸ್​ಪೆಕ್ಟರ್ ಸೇರಿದಂತೆ ಮೂವರು ಪೊಲೀಸರ್ ಹುತಾತ್ಮರಾಗಿದ್ದಾರೆ ಎಂದು CRPF ಪೊಲೀಸರು ತಿಳಿಸಿದ್ದಾರೆ.

ಸುಕ್ಮಾ ಜಿಲ್ಲೆಯ ಜಗರಗುಂದ ಮತ್ತು ಕುಂಡೆಡ್ ಗ್ರಾಮಗಳಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಎನ್ಕೌಂಟರ್​ನಲ್ಲಿ ಡಿಆರ್​ಜಿ ಸಹಾಯಕ ಸಬ್ ಇನ್ಸ್​ಪೆಕ್ಟರ್ ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೇಬಲ್ ಕುಂಜ್ರಾಮ್ಜೋಗ ಮತ್ತು ಕಾನ್ಸ್ಟೇಬಲ್ ವಂಜಮ್ ಭೀಮ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಸುಕ್ಮಾ ಜಿಲ್ಲೆಯ ಕುಂಡೆಡ್ ಬಳಿ ನಕ್ಸಲೀಯರು ಮತ್ತು CRPF ಯೋಧರ ನಡುವೆ ಎನ್ಕೌಂಟರ್ ನಡೆದಿದೆ.

ಇದನ್ನೂ ಓದಿ: CRPF Rising Day : ಸಿಆರ್‌ಪಿಎಫ್ ಯೋಧರ ಶೌರ್ಯವನ್ನು ಕೊಂಡಾಡಿದ ಮೋದಿ

ಈ ಎನ್ಕೌಂಟರ್​​ನಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು , ಇಬ್ಬ ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಜಾಗರಗುಂದ ಪೊಲೀಸ್ ಠಾಣೆಯಿಂದ ಡಿಆರ್​ಜಿ ತಂಡವನ್ನು ಗಸ್ತು ತಿರುಗಲು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಜಾಗರಗುಂದ ಮತ್ತು ಕುಂಡೆಡ್ ಗ್ರಾಮದ ನಡುವೆ ಪಾರ್ಟಿ ನಡೆಯುತ್ತಿದ್ದಾ ಗಂಡಿನ ದಾಳಿ ನಡೆದಿದೆ.

 

Published On - 12:18 pm, Sat, 25 February 23