ಚೆನ್ನೈ: ಜಲ್ಲಿಕಟ್ಟು ನೋಡುವ ವೇಳೆ ಮನೆ ಗೋಡೆ ಕುಸಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ವೇಪನಪಲ್ಲಿ ಬಳಿಯ ನೆರ್ಲಗಿರಿಯಲ್ಲಿ ನಡೆದಿದೆ. ಅವಘಡದಲ್ಲಿ 2 ವರ್ಷದ ಮಗು ಸೇರಿದಂತೆ ಮೂವರು ದುರ್ಮರಣ ಹೊಂದಿದ್ದಾರೆ.
ಘಟನೆಯಲ್ಲಿ 20 ಕ್ಕೂ ಹೆಚ್ಚು ಜನರ ಮೇಲೆ ಮನೆ ಗೋಡೆ ಕುಸಿದಿದೆ. ಗಾಯಾಳುಗಳಿಗೆ ಕೃಷ್ಣಗಿರಿ ಮತ್ತು ವೇಪನಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಸ್ಪರ್ಧೆ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ, ಕೃಷ್ಣಗಿರಿ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಟ್ರ್ಯಾಕ್ಟರ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ದುರ್ಮರಣ; ಹತ್ತಿ ಗೋದಾಮಿನಲ್ಲಿ ಕೆಲಸ ಮಾಡುವಾಗ ದುರ್ಘಟನೆ