ಮಗನ ಕುಟುಂಬಕ್ಕೆ ಬೆಂಕಿಯಿಟ್ಟ ತ್ರಿಶೂರ್ ವ್ಯಕ್ತಿ: ಮಗ-ಮೊಮ್ಮಗ ಸಾವು, ಸೊಸೆ ಸ್ಥಿತಿ ಗಂಭೀರ

|

Updated on: Sep 14, 2023 | 4:23 PM

ತ್ರಿಶೂರ್ ವ್ಯಕ್ತಿಯೊಬ್ಬ ತನ್ನ ಮಗನ ಕುಟುಂಬಕ್ಕೆ ಬೆಂಕಿ ಹಚ್ಚಿದ್ದು, ಇಬ್ಬರು ಮೃತಪಟ್ಟಿದ್ದು, ಸೊಸೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆರೋಪಿ ತಂದೆ ಜಾನ್ಸನ್ ಅವರ ಮಗ ಜೋಜಿ (38) ಮತ್ತು ಮೊಮ್ಮಗ ತೆಂಡೂಲ್ಕರ್ (12) ಸಾವನ್ನಪ್ಪಿದ್ದಾರೆ, ಸೊಸೆ ಲಿಜಿ (32) ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಗನ ಕುಟುಂಬಕ್ಕೆ ಬೆಂಕಿಯಿಟ್ಟ ತ್ರಿಶೂರ್ ವ್ಯಕ್ತಿ: ಮಗ-ಮೊಮ್ಮಗ ಸಾವು, ಸೊಸೆ ಸ್ಥಿತಿ ಗಂಭೀರ
ಮಗನ ಕುಟುಂಬಕ್ಕೆ ಬೆಂಕಿಯಿಟ್ಟ ತ್ರಿಶೂರ್ ವ್ಯಕ್ತಿ
Follow us on

ತ್ರಿಶೂರ್ (ಕೇರಳ): ತ್ರಿಶೂರ್‌ನಲ್ಲಿ ವ್ಯಕ್ತಿಯೊಬ್ಬ (Thrissur Father) ಬುಧವಾರ ರಾತ್ರಿ ಕೌಂಟುಂಬಿಕ ಜಗಳದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಮಗನ ಕುಟುಂಬಕ್ಕೆ (Son Family) ಬೆಂಕಿ ಹಚ್ಚಿ, ಆತನನ್ನು ಕೊಂದಿದ್ದಾನೆ. ಈ ಭೀಕರ ಘಟನೆಯ ನಂತರ ಆರೋಪಿ ಜಾನ್ಸನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅನಾಹುತದಲ್ಲಿ ಜಾನ್ಸನ್ ಅವರ ಪುತ್ರ ಜೋಜಿ (38) ಮತ್ತು ಮೊಮ್ಮಗ ತೆಂಡೂಲ್ಕರ್ (12) ಸಾವನ್ನಪ್ಪಿದ್ದು, ಸೊಸೆ ಲಿಜಿ (32) ಗಂಭೀರ ಸ್ಥಿತಿಯಲ್ಲಿದ್ದಾರೆ. ಜಾನ್ಸನ್ ತನ್ನ ಮಗ ಇದ್ದ ರೂಮಿನ ತುಂಬೆಲ್ಲಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಜಾನ್ಸನ್ ತನ್ನ ಹೆಂಡತಿಯನ್ನು ಮತ್ತೊಂದು ಕೋಣೆಯಲ್ಲಿ ಲಾಕ್ ಮಾಡಿದ ನಂತರ ಅಪರಾಧ ಎಸಗಿದ್ದಾನೆ. ವರದಿಗಳ ಪ್ರಕಾರ, ತಂದೆ ಮತ್ತು ಮಗನ ನಡುವೆ ಕಳೆದ ಎರಡು ವರ್ಷಗಳಿಂದ ಜಗಳ ನಡೆಯುತ್ತಿತ್ತು.

ಬೆಂಕಿಯನ್ನು ಗಮನಿಸಿದ ನೆರೆಹೊರೆಯವರು ರಕ್ಷಣಾ ಕಾರ್ಯದಲ್ಲಿ ತೊಡಗಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಜಾನ್ಸನ್ ಅದೇ ಮನೆಯ ಟೆರೇಸ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತ ವಿಷ ಸೇವಿಸಿದ್ದಾನೆ ಎನ್ನಲಾಗಿದೆ. ಜೋಜಿ ಮತ್ತು ತೆಂಡೂಲ್ಕರ್ ಮಧ್ಯಾಹ್ನ ನಿಧನರಾದರು. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಿಜಿ ಅವರ ಸ್ಥಿತಿ ಗಂಭೀರವಾಗಿದೆ.

Also Read ಪುತ್ರಶೋಕಂ ನಿರಂತರಂ: ಸತ್ತ ಮಗನಿಗೆ ಮನೆಯಲ್ಲಿ ದೇವಸ್ಥಾನ ಕಟ್ಟಿದ ಪಾಲಕರು: ದಿನಾ ಪೂಜೆ ಸಲ್ಲಿಸಿ ಅದರಲ್ಲಿಯೇ ಮಗನ ಕಾಣುತ್ತಾರೆ

ಕಳೆದ ವರ್ಷ ಮಾರ್ಚ್‌ನಲ್ಲಿ ಇಡುಕ್ಕಿ ಮೂಲದ ವ್ಯಕ್ತಿಯೊಬ್ಬ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಮಗ ಮತ್ತು ಕುಟುಂಬವನ್ನು ಸಜೀವ ದಹನ ಮಾಡಿದ್ದ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ