ಜಮ್ಮು ಕಾಶ್ಮೀರದ ಎಲ್​ಒಸಿ ಬಳಿ ಸ್ಫೋಟ; ಎಲ್​ಇಟಿ ಕಮಾಂಡರ್ ಸೇರಿ ನಾಲ್ವರು ಪಾಕ್ ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿರುವ ಕೃಷ್ಣ ಘಾಟಿ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯನ್ನು (ಎಲ್​ಒಸಿ) ದಾಟಿ ಭಾರತದೊಳಗೆ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಮೃತಪಟ್ಟವರಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಸಂಘಟನೆಯ ಕಮಾಂಡರ್ ಮೊಹಮ್ಮದ್ ಫೈಜಾನ್ ಕೂಡ ಸೇರಿದ್ದಾನೆ. ವಕಾಸ್, ಇಷ್ಟಿಯಾಕ್ ಹಾಗೂ ಆಸಿಮ್ ಎಂದು ಇತರ ಮೂವರು ಉಗ್ರರನ್ನು ಗುರುತಿಸಲಾಗಿದೆ. ಗಡಿ ಭಾಗದಲ್ಲಿ ಉಗ್ರರ ಒಳನುಸುಳುವಿಕೆಯನ್ನು ತಡೆಯಲು ಭದ್ರತಾ ಪಡೆಗಳು ಜಾಗೃತ ಗಡಿ ವ್ಯವಸ್ಥೆಯಡಿ ನೆಲಬಾಂಬ್ ಅಳವಡಿಸಿವೆ. ಕೃಷ್ಣ ಘಾಟಿ ವಲಯದ ನಂಗಿ ಟೇಕ್ರಿ ಪ್ರದೇಶದ ಮೂಲಕ ಉಗ್ರರ ಗುಂಪು ಗಡಿ ದಾಟಲು ಯತ್ನಿಸಿದಾಗ ಈ ಬಾಂಬ್ ಸ್ಫೋಟಗೊಂಡಿವೆ.

ಜಮ್ಮು ಕಾಶ್ಮೀರದ ಎಲ್​ಒಸಿ ಬಳಿ ಸ್ಫೋಟ; ಎಲ್​ಇಟಿ ಕಮಾಂಡರ್ ಸೇರಿ ನಾಲ್ವರು ಪಾಕ್ ಉಗ್ರರ ಹತ್ಯೆ
Poonch Terror Attack
Image Credit source: PTI

Updated on: Oct 12, 2026 | 10:30 PM

ಪೂಂಚ್, ಅಕ್ಟೋಬರ್ 12:  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದ ನಂಗಿ ಟೇಕ್ರಿ ಬಳಿ ನಿಯಂತ್ರಣ ರೇಖೆಯನ್ನು (ಎಲ್​ಒಸಿ) ದಾಟಿ ಒಳನುಸುಳಲು ಯತ್ನಿಸುತ್ತಿದ್ದ ವೇಳೆ ಸಂಭವಿಸಿದ ಗಣಿ ಸ್ಫೋಟದಲ್ಲಿ ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಮೊಹಮ್ಮದ್ ಫೈಜಾನ್ ಸೇರಿದಂತೆ ನಾಲ್ವರು ಉಗ್ರರು ಹತರಾಗಿದ್ದಾರೆ. ಒಳನುಸುಳುವಿಕೆ ತಡೆ ವ್ಯವಸ್ಥೆಯ ಭಾಗವಾಗಿ ಇರಿಸಲಾಗಿದ್ದ ಮೈನ್‌ಗಳು ಉಗ್ರರ ಗುಂಪು ಗಡಿ ದಾಟಲು ಯತ್ನಿಸಿದಾಗ ಸ್ಫೋಟಗೊಂಡಿದ್ದು, ನಾಲ್ವರೂ ಒಳನುಸುಳುಕೋರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತರಾದ ಇತರ ಮೂವರು ಭಯೋತ್ಪಾದಕರನ್ನು ವಕಾಸ್, ಇಷ್ಟಿಯಾಕ್ ಮತ್ತು ಆಸಿಮ್ ಎಂದು ಗುರುತಿಸಲಾಗಿದೆ.

ಸ್ಫೋಟದ ತೀವ್ರತೆಗೆ ನಾಲ್ವರು ಒಳನುಸುಳುಕೋರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸ್ಫೋಟದ ಬೆನ್ನಲ್ಲೇ ಗಡಿ ಭಾಗದಲ್ಲಿ ಭಾರೀ ಸದ್ದು ಕೇಳಿಬಂದಿದ್ದು, ಭದ್ರತಾ ಪಡೆಗಳು ತಕ್ಷಣವೇ ಎಚ್ಚೆತ್ತುಕೊಂಡು ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿವೆ. ಇದೇ ವಲಯದಲ್ಲಿ ಶಂಕಿತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿರುವ ಬಗ್ಗೆಯೂ ವರದಿಯಾಗಿದ್ದು, ಸೇನೆಯು ಗಡಿ ಭಾಗದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಒಳನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಲು ಸಶಸ್ತ್ರ ಪಡೆಗಳು ಸದಾ ಹಗಲಿರುಳು ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ: ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಗುರಿ ತಲುಪಿರುವುದಾಗಿ ಘೋಷಿಸಿಕೊಂಡ ಹೌತಿ ಉಗ್ರರು

ಕೃಷ್ಣ ಘಾಟಿ ವಲಯದ ಶೂನ್ಯ ರೇಖೆಯ ಬಳಿ ಇರುವ ಸತ್ವಾಲ್-ನಾಕಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಸ್ಫೋಟದ ಸದ್ದು ಕೇಳಿಬಂದಿತ್ತು. ಪಾಕಿಸ್ತಾನದ ಕಡೆಯಿಂದ ಗಡಿ ದಾಟಲು ಯತ್ನಿಸುತ್ತಿದ್ದ ಅನುಮಾನಾಸ್ಪದ ಗುಂಪಿನ ಚಲನವಲನದ ವೇಳೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಥವಾ ಭೂಗಣಿ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಳನುಸುಳುವಿಕೆ ತಡೆ ವ್ಯವಸ್ಥೆಯ ಭಾಗವಾಗಿ ನಿಯಂತ್ರಣ ರೇಖೆಯ ಮುಂಚೂಣಿ ಪ್ರದೇಶಗಳಲ್ಲಿ ಭೂಗಣಿಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ತೀವ್ರ ಮಳೆಯಾದಾಗ ಅಥವಾ ಭೂಕುಸಿತ ಸಂಭವಿಸಿದಾಗ ಈ ಮೈನ್​ಗಳು ಕೊಚ್ಚಿಹೋಗಿ ಮೇಲ್ಮೈಗೆ ಬರುತ್ತವೆ, ಇದು ಭದ್ರತಾ ಪಡೆಗಳಿಗೆ ಹಾಗೂ ನಾಗರಿಕರಿಗೆ ನಿರಂತರ ಸವಾಲಾಗಿ ಪರಿಣಮಿಸುತ್ತದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:53 pm, Mon, 12 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us