ಹೈದರಾಬಾದ್: ಆಂಧ್ರಪ್ರದೇಶದ ತಿರುಮಲದ ಬಾಲಾಜಿಗೆ ದೇಶದಾದ್ಯಂತ ಕೋಟ್ಯಾಂತರ ಭಕ್ತರಿದ್ದಾರೆ. ಕೊರೊನಾ ನಿಬಂಧನೆಗಳ ಕಾರಣದಿಂದಾಗಿ 7ತಿಂಗಳ ಕಾಲ ವೆಂಕಟೇಶ್ವರನ ದರ್ಶನ ಪಡೆಯಲಾಗದೇ ಭಕ್ತರು ಪರದಾಡುವಂತಾಗಿತ್ತು. ಕೊವಿಡ್ ನಿಬಂಧನೆಗಳ ಮಧ್ಯದಲ್ಲಿ ಕೇವಲ ಸಮಯ ನಿಗದಿತ ಪಾವತಿ ಟಿಕೆಟ್ ಪಡೆದ 3ರಿಂದ 9 ಸಾವಿರ ಭಕ್ತರಿಗೆ ಮಾತ್ರ ದರ್ಶನ ನೀಡಲಾಗುತ್ತಿತ್ತಾದಾರೂ ಸಾಮಾನ್ಯ ಭಕ್ತರಿಗೆ ಇದರ ಲಾಭ ಸಿಗುತ್ತಿರಲಿಲ್ಲ.
ಉಚಿತ ಸರ್ವದರ್ಶನ ಟಿಕೆಟ್ ರದ್ದಾಗಿ ಸಾಮಾನ್ಯ ಭಕ್ತರಿಗೆ ಬಾಲಾಜಿ ದರ್ಶನ ಬಹಳಷ್ಟು ತೊಂದರೆದಾಯಕವಾಗಿತ್ತು . ಆದರೆ, ಇದೀಗ ಇದೇ ಅಕ್ಟೋಬರ್ 29ರಿಂದ ಸಾಮಾನ್ಯ ಭಕ್ತರಿಗೂ ಸಹ ಉಚಿತ ಸರ್ವ ದರ್ಶನ ಆರಂಭಿಸಲಾಗಿದೆ. ಇದರಿಂದಾಗಿ ದಾಖಲೆ ಪ್ರಮಾಣದಲ್ಲಿ ಬಾಲಾಜಿ ದೇವಾಲಯದ ಹುಂಡಿಗೆ ಆದಾಯ ಸಂಗ್ರಹವಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ.
ಕೊರೊನಾ ಲಾಕ್ಡೌನ್ ಬಳಿಕ ಸಂಗ್ರಹವಾದ ಹಣ:
ಕಳೆದ 10 ದಿನಗಳಲ್ಲಿ ದಾಖಲೆ ಎನ್ನುವಂತೆ 18.75ಲಕ್ಷ ಹಣ ಸಂಗ್ರಹವಾಗಿದೆ. 2,53,746 ಭಕ್ತರು ದರ್ಶನ ಪಡೆದಿದ್ದು , 1,03,157 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. ಈ ಪೈಕಿ ಉಚಿತ ಸರ್ವ ದರ್ಶನ ಆರಂಭಗೊಂಡ ಮೊದಲ ದಿನ ಅಂದ್ರೆ ಗುರುವಾರದಂದು 1.52ಕೋಟಿ ಆದಾಯ ಬಾಲಾಜಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿತ್ತು. 21,696ಭಕ್ತರು ಶ್ರೀನಿವಾಸನ ದರ್ಶನ ಪಡೆದಿದ್ದು, 6833ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ಅಕ್ಟೋಬರ್ 30ರ ಶುಕ್ರವಾರ 1.92ಕೋಟಿ ಸಂಗ್ರಹವಾಗಿದೆ. 20,269 ಭಕ್ತರು ದರ್ಶನ ಪಡೆದಿದ್ದು, 6,613 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ಅಕ್ಟೋಬರ್ 31ರ ಶನಿವಾರ 1.45 ಕೋಟಿ ಆದಾಯ ಹುಂಡಿಯಲ್ಲಿ ಸಂಗ್ರಹವಾಗಿದೆ. 24,421 ಭಕ್ತರು ದರ್ಶನ ಪಡೆದಿದ್ದು, 8,469ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ನವೆಂಬರ್ 1ರ ರವಿವಾರ, ಒಂದೇ ದಿನದಲ್ಲಿ 2.22ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಅಂದು ಒಟ್ಟಾರೆ, 27,107 ಭಕ್ತರು ದರ್ಶನ ಪಡೆದಿದ್ದಾರೆ.
-ನವೆಂಬರ್ 2, ರಂದು, ಕಳೆದ ಹತ್ತು ದಿನಗಳಲ್ಲಿಯೇ ಅತ್ಯಧಿಕ ಅಂದರೆ 2.93ಕೋಟಿ ರೂಪಾಯಿ ಕಾಣಿಕೆ ಆದಾಯ ಬಾಲಾಜಿಯ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಂದು 26,167ಭಕ್ತರು ಶ್ರೀನಿವಾಸನ ದರ್ಶನ ಪಡೆದಿದ್ದಾರೆ. 10,905 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ನವೆಂಬರ್ 3ರಂದು 1.90ಕೋಟಿ ಆದಾಯ ಸಂಗ್ರಹವಾಗಿದೆ. 26,931 ಭಕ್ತರು ದರ್ಶನ, 10,255 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ನವೆಂಬರ್ 4ರಂದು 1.74ಕೋಟಿ ರೂ. ಆದಾಯ ಸಂಗ್ರಹವಾಗಿದೆ. 25,857 ಭಕ್ತರು ದರ್ಶನ, 10,908ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ನವೆಂಬರ್ 5ರಂದು 1.91ಕೋಟಿ ರೂ. ಆದಾಯ ಸಂಗ್ರಹವಾಗಿದ್ದು 27,078ಭಕ್ತರ ದರ್ಶನ, 18,667ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ನವೆಂಬರ್ 6ರಂದು 1.68ಕೋಟಿ ಸಂಗ್ರಹವಾಗಿದ್ದರೆ, 23,515ಭಕ್ತರು ದರ್ಶನ, 8,427ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.
-ನಿನ್ನೆ ನವೆಂಬರ್ 7ರಂದು 1.48ಕೋಟಿ ಆದಾಯ ಸಂಗ್ರಹವಾಗಿದೆ. 30,705ಭಕ್ತರು ಗೋವಿಂದನ ದರ್ಶನ ಪಡೆದಿದ್ದಾರೆ. 10,898 ಭಕ್ತರು ತತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.