ತೃಣಮೂಲ ಸಂಸದೆ (TMC) ಮಹುವಾ ಮೊಯಿತ್ರಾ (Mahua Moitra ) ಲೋಕಸಭೆಯಲ್ಲಿ ತಾನು ಹೇಳಿದ ಆಕ್ಷೇಪಾರ್ಹ ಪದವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಅದನ್ನು ಕಿತ್ತಳೆ ಅನ್ನಲ್ಲ. “ನಾನು ಹೇಳಿದ್ದು ದಾಖಲೆಯಿಲ್ಲ. ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಎಂದಲ್ಲ, ನಾನು ಗುದ್ದಲಿಯನ್ನು ಗುದ್ದಲಿ ಎಂದೇ ಹೇಳುತ್ತೇನೆ. ಅವರು ನನ್ನನ್ನು ಸವಲತ್ತುಗಳ ಸಮಿತಿಗೆ ಕರೆದೊಯ್ದರೆ, ನಾನು ಹೇಳಿದ್ದರ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ ಮಹುವಾ ಮೊಯಿತ್ರಾ. ಇನ್ನೋರ್ವ ಸಂಸದರು ಮಾತನಾಡುತ್ತಿರುವಾಗ ಮೊಯಿತ್ರಾ ಈ ರೀತಿ ಆಕ್ಷೇಪಾರ್ಹ ಪದ ಬಳಸಿದ್ದಾರೆ.ಈ ಮಾತು ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಬಿಜೆಪಿ ಸಂಸದೆ ಹೇಮಾ ಮಾಲಿನಿ (Hema Malini) ಅವರು ಬುಧವಾರ ವಾಗ್ದಾಳಿ ನಡೆಸಿ ಸಂಸತ್ತಿನ ಪ್ರತಿಯೊಬ್ಬ ಸದಸ್ಯರು ಗೌರವಾನ್ವಿತ ವ್ಯಕ್ತಿಗಳು ಎಂದು ಹೇಳಿದ್ದಾರೆ. “ಅವರು ತಮ್ಮ ನಾಲಿಗೆಯನ್ನು ನಿಯಂತ್ರಿಸಬೇಕು. ಅವರು ಅತಿಯಾಗಿ ಉತ್ಸುಕರಾಗಬಾರದು ಮತ್ತು ಭಾವನಾತ್ಮಕವಾಗಿರಬಾರದು. ಅವರ ಸ್ವಭಾವವೇ ಹಾಗೆ ಇರಬೇಕು. ನನಗೆ ಗೊತ್ತಿಲ್ಲ ಎಂದಿದ್ದಾರೆ ಹೇಮಾ ಮಾಲಿನಿ.
ಮಹುವಾ ಮೊಯಿತ್ರಾ ಅವರು ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಸಂದರ್ಭದಲ್ಲಿ ಮಾತನಾಡಿದ್ದರು. ಅದಾನಿ ವಿಚಾರವಾಗಿ ಆಕೆ ಮಾತನಾಡುತ್ತಿರುವಾಗ ಆಕೆಯ ಭಾಷಣಕ್ಕೆ ಬಿಜೆಪಿ ಸಂಸದರು ಹಲವು ಬಾರಿ ಅಡ್ಡಿಪಡಿಸಿದರು. ಮೊಯಿತ್ರಾ ಭಾಷಣದ ನಂತರ, ಟಿಡಿಪಿ ಸಂಸದ ಕೆ ರಾಮ್ ಮೋಹನ್ ನಾಯ್ಡು ಮಾತನಾಡುವಾಗ, ಮಹುವಾ ಮೊಯಿತ್ರಾ ಅವರು ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕೆಟ್ಟ ಪದ ಬಳಸಿದ್ದಾರೆ.
. @MahuaMoitra has shamed the entire WB with her unparliamentary language.
Use of such words shows the TMC culture wherein murder, violence, rape and abuses are so common. TMC leaders have lost their common sense in such atmosphere.
I feel pity for them. Bengal is watching. pic.twitter.com/O0KyuoES8j
— Dr. Sukanta Majumdar (@DrSukantaBJP) February 7, 2023
ಮಹುವಾ ಮೊಯಿತ್ರಾ ಅವರು ಈ ಪದವನ್ನು ಹೇಳುತ್ತಿರುವ ವಿಡಿಯೊವನ್ನು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ಡಾ ಸುಕಾಂತ ಮಜುಂದಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಂಚಿಕೊಂಡಿದ್ದು, ತೃಣಮೂಲ ಕಾಂಗ್ರೆಸ್‌ನ ಸಂಸ್ಕೃತಿಯನ್ನು ಪ್ರಶ್ನಿಸಿದ್ದಾರೆ.
ಅವರು ತಮ್ಮ ನಾಲಿಗೆಯನ್ನು ನಿಯಂತ್ರಿಸಬೇಕು. ಅತಿಯಾದ ಉತ್ಸಾಹ ಮತ್ತು ಭಾವನಾತ್ಮಕತೆಯನ್ನು ಹೊಂದಿರಬಾರದು. ಸಂಸತ್ತಿನ ಪ್ರತಿಯೊಬ್ಬ ಸದಸ್ಯರು ಗೌರವಾನ್ವಿತ ವ್ಯಕ್ತಿಗಳೇ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.
#WATCH | They should control their tongue and not get over-excited and emotional. Each and every member of Parliament is a respectable person: BJP MP Hema Malini on TMC MP Mahua Moitra using offensive language in Lok Sabha yesterday pic.twitter.com/J4OlQtLQDB
— ANI (@ANI) February 8, 2023
“ನಾನು ಯಾವ ರೀತಿಯ ಭಾಷೆಯನ್ನು ಬಳಸಬೇಕು ಎಂದು ನನಗೆ ತಿಳಿದಿಲ್ಲ, ಇಂದು ಬಿಜೆಪಿ ಪಕ್ಷವು ನಮಗೆ ಸಂಸದೀಯ ಶಿಷ್ಟಾಚಾರವನ್ನು ಕಲಿಸುತ್ತಿದೆ ಎಂದು ನನಗೆ ಆಶ್ಚರ್ಯವಾಗಿದೆ. ನೀವು ನನ್ನ ಭಾಷಣ ಮತ್ತು ಆ ಜಂಟಲ್ಮ್ಯಾನ್ ಕೂಗಾಡುತ್ತಿರುವುದನ್ನು ನೋಡಿ, ನಾನು ಅವರನ್ನು ಜಂಟಲ್ಮೆನ್ ಎಂದು ಕರೆಯುವುದಿಲ್ಲ. ಆದರೆ ದೆಹಲಿಯ ಗೌರವಾನ್ವಿತ ಪ್ರತಿನಿಧಿ ಪ್ರತೀ ಬಾರಿ ಹಾಗೆ ಅಡ್ಡಿಪಡಿಸಿದರು. ನನಗೆ ಮಾತನಾಡಲು ಸಹ ಅವಕಾಶ ನೀಡಲಿಲ್ಲ, ಅವರು ನನ್ನನ್ನು ನಿರಂತರವಾಗಿ ಕೆರಳಿಸಿದರು, ನಾನು 5 ಬಾರಿ ಸಭಾಪತಿಯಿಂದ ರಕ್ಷಣೆ ಕೇಳಿದೆ. ಆದರೆ ಸಭಾಪತಿ ನನಗೆ ರಕ್ಷಣೆ ನೀಡಿಲ್ಲ. ನಾನು ಹೇಳಿದ್ದೆಲ್ಲವೂ ದಾಖಲೆಯಲ್ಲಿಲ್ಲ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.
Please watch … monkey brigade out in full force to shut me up. https://t.co/C2jPC2CYxm
— Mahua Moitra (@MahuaMoitra) February 7, 2023
ನಿನ್ನೆ ನಡೆದದ್ದು ಏನೆಂದರೆ..ಇದೇ ಜಂಟಲ್ಮ್ಯಾನ್ ರೈತರನ್ನು ಪಿಂಪ್ ಎಂದ ಕರೆದಿದ್ದ ವಿಡಿಯೊವನ್ನು ಟ್ವೀಟ್ ಮಾಡಿದ್ದೇನೆ. ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಡಾ.ಸಂತನು ಸೇನ್‌ಗೆ ಸಂಪೂರ್ಣವಾಗಿ ಆಕ್ಷೇಪಾರ್ಹ ಪದವನ್ನು ಬಳಸಿದ್ದಾರೆ. ಸಂಸತ್ತಿನಲ್ಲಿ ಆಕ್ಷೇಪಾರ್ಹ ಪದ ಬಳಸಿರುವುದು ಇದೇ ಮೊದಲಲ್ಲ ಎಂದು ಮೊಯಿತ್ರಾ ಹೇಳಿದ್ದಾರೆ.
ಇದನ್ನೂ ಓದಿ: Virginity Test: ಕನ್ಯತ್ವ ಪರೀಕ್ಷೆ ಸೆಕ್ಸಿಸ್ಟ್; ಖೈದಿಯೇ ಆದರೂ ಇದು ತಪ್ಪು: ದೆಹಲಿ ಹೈಕೋರ್ಟ್
ನನಗೆ ನಗು ತರಿಸುವ ಸಂಗತಿ ಏನಪ್ಪಾ ಎಂದರೆ ಬಿಜೆಪಿಯವರು ಯೇ ಮಹಿಳಾ ಹೋ ಕರ್ ಕೈಸೇ ಯೇ ವರ್ಡ್ ಯೂಸ್ ಕಿ ಎಂದು ಹೇಳುತ್ತಿದ್ದಾರೆ (ಮಹಿಳೆಯಾಗಿಯೂ ಆಕೆ ಆ ಪದವನ್ನು ಹೇಗೆ ಬಳಸಿದರು ಎಂದು ಅವರು ಕೇಳುತ್ತಾರೆ). ಹಾಗಾದರೆ ನಾನು ಈ ಮಾತು ಹೇಳಲು ಗಂಡಸು ಆಗಬೇಕೇ? ಅವರ ಪಿತೃಪ್ರಭುತ್ವ ನಿಲುವು ಎದ್ದು ಕಾಣುತ್ತದೆ ಎಂದು ಎಂದು ತೃಣಮೂಲ ಸಂಸದೆ ಹೇಳಿದ್ದಾರೆ.