
ಅಬುಧಾಬಿ, ಅಕ್ಟೋಬರ್ 24: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಭೇಟಿ ನೀಡಿದ್ದಾರೆ. ನಿನ್ನೆ ಯುಎಇಗೆ ಮೂರು ದಿನಗಳ ಭೇಟಿಗಾಗಿ ತೆರಳಿರುವ ಅವರು ಅಬುಧಾಬಿಯಲ್ಲಿರುವ ಬಿಎಪಿಎಸ್ (ಬೋಚಸಂವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ) ಹಿಂದೂ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ಯುಎಇಗೆ 3 ದಿನಗಳ ಭೇಟಿ ನೀಡಿರುವ ಚಂದ್ರಬಾಬು ನಾಯ್ಡು ಅವರು, ಮಧ್ಯಪ್ರಾಚ್ಯದ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದೂ ದೇವಾಲಯದಲ್ಲಿ ಕೈಯಿಂದ ಕೆತ್ತಿದ ವಿಶಿಷ್ಟ ಲಕ್ಷಣಗಳನ್ನು ವೀಕ್ಷಿಸಿದ ನಂತರ ಭಾವಪರವಶರಾದರು. “ಇದೊಂದು ಅದ್ಭುತವಾದ ಅನುಭವ. ಇದು ನಿಜವಾದ ಪವಾಡ” ಎಂದು ಅವರು ಹೇಳಿದ್ದಾರೆ.
Shri Chandrababu Naidu, Hon Chief Minister of Andhra Pradesh was overwhelmed and overjoyed by his visit of the BAPS Hindu Mandir in Abu Dhabi on 23 October 2025. Calling it ‘extraordinary’, ‘the greatest success story’ and ‘creation of history and legacy’ he deeply appreciated… pic.twitter.com/dYrHDdIVZT
— BAPS Hindu Mandir (@AbuDhabiMandir) October 23, 2025
ಇದನ್ನೂ ಓದಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ದೇಶವಾಗಿ ಮಾಡೋಣ; ಬಿಎಪಿಎಸ್ ಸ್ವಯಂಸೇವಕರನ್ನು ಹುರಿದುಂಬಿಸಿದ ಮೋದಿ
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಬಿಎಪಿಎಸ್ ಹಿಂದೂ ಮಂದಿರದ ಮುಖ್ಯಸ್ಥ ಬ್ರಹ್ಮವಿಹರಿದಾಸ್ ಸ್ವಾಮಿ ಮಾರ್ಗದರ್ಶನದ ಪ್ರವಾಸವನ್ನು ನೀಡಿದರು. ಅವರು ದೇವಾಲಯದ ವಿನ್ಯಾಸ, ನಿರ್ಮಾಣ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಬಗ್ಗೆ ವಿವರಿಸಿದರು. ಸಾಂಪ್ರದಾಯಿಕ ಮೌಲ್ಯಗಳನ್ನು ಕಳೆದುಕೊಳ್ಳದೆ ಆಧುನಿಕ ತಂತ್ರಗಳ ಮೂಲಕ ನಂಬಿಕೆಯನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುದನ್ನು ಈ ಮಂದಿರವು ಪ್ರದರ್ಶಿಸಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇದನ್ನೂ ಓದಿ: ಭಾಷಾ ವಿವಾದದ ನಡುವೆಯೇ ಹಿಂದಿ ಕಲಿಕೆ ಸಮರ್ಥಿಸಿಕೊಂಡ ಸಿಎಂ ಚಂದ್ರಬಾಬು ನಾಯ್ಡು
ಮುಖ್ಯ ದೇವಾಲಯ ಪ್ರದೇಶದ ಒಳಗೆ ಸಿಎಂ ಚಂದ್ರಬಾಬು ನಾಯ್ಡು ಪ್ರಾರ್ಥನೆ ಸಲ್ಲಿಸಿದರು. ನಂತರ ಮಂದಿರದ ನಿರ್ಮಾಣದಲ್ಲಿ ಭಾಗಿಯಾಗಿರುವ ಸ್ವಯಂಸೇವಕರು ಮತ್ತು ಕುಶಲಕರ್ಮಿಗಳನ್ನು ಭೇಟಿಯಾದರು. ಈ ಮಂದಿರವು ನಾಗರಿಕತೆಗಳಾದ್ಯಂತ ಶಾಂತಿಯ ಬೋಧನೆಗಳನ್ನು ಸಂಯೋಜಿಸುತ್ತದೆ, ಧರ್ಮ ಅಥವಾ ರಾಷ್ಟ್ರೀಯತೆಯನ್ನು ಮೀರಿ ಏಕತೆಯನ್ನು ಉತ್ತೇಜಿಸುತ್ತದೆ ಎಂದು ಚಂದ್ರಬಾಬು ನಾಯ್ಡು ಬಣ್ಣಿಸಿದ್ದಾರೆ.
“ಇದು ನನ್ನ ಜೀವಿತಾವಧಿಯಲ್ಲಿ ಒಂದು ಅಸಾಧಾರಣ ಅನುಭವ. ನಾನು ಅನೇಕ ಸಾಧನೆಗಳನ್ನು ಕಂಡಿದ್ದೇನೆ, ಆದರೆ ಇಂದು ನಾನು ಇಲ್ಲಿ ಕಂಡದ್ದು ನಿಜಕ್ಕೂ ನಂಬಲಾಗದ ವಿಷಯ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ