ತಿರುಪತಿ ತಿರುಮಲ ಶ್ರೀವಾರಿ ಭಕ್ತರಿಗೆ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ) ಗುಡ್ ನ್ಯೂಸ್ ನೀಡಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಆನ್ಲೈನ್ನಲ್ಲಿ ಟಿಕೆಟ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಹಾಗೇ, ಡಿಸೆಂಬರ್ ತಿಂಗಳ ಸರ್ವದರ್ಶನ ಟೋಕನ್ನ್ನು ಇಂದು ಬೆಳಗ್ಗೆ 9 ಗಂಟೆಯಿಂದ ನೀಡಲು ಪ್ರಾರಂಭಿಸಿದ್ದಾಗಿ ಟಿಟಿಡಿ ಪ್ರಕಟಣೆ ಹೊರಡಿಸಿದೆ.
ಹಾಗೇ ಭಕ್ತರು ಬೆಟ್ಟದಲ್ಲಿ ತಂಗಲು ವಸತಿ ಬುಕಿಂಗ್ ಮತ್ತು ಸರ್ವದರ್ಶನ ಟಿಕೆಟ್ನ್ನು ನವೆಂಬರ್ 28ರಂದು ಬೆಳಗ್ಗೆ 9 ಗಂಟೆಗೆ ಬಿಡುಗಡೆ ಮಾಡುವುದಾಗಿಯೂ ಟಿಟಿಡಿ ತಿಳಿಸಿದೆ. ಭಕ್ತರು ಟಿಟಿಡಿ ವೆಬ್ಸೈಟ್ಗೆ ಹೋಗಿ, ಅಲ್ಲಿಯೇ ವಿಶೇಷ ದರ್ಶನ (300 ರೂ.ಗೆ ಒಂದು ಟಿಕೆಟ್) ಟಿಕೆಟ್ ಮತ್ತು ಸರ್ವದರ್ಶನಕ್ಕೆ ಟಿಕೆಟ್ ಬುಕ್ ಮಾಡಬಹುದು. ಅದರಲ್ಲೂ ಕಳೆದ ತಿಂಗಳಿನಿಂದ ಸರ್ವದರ್ಶನ ಕೋಟಾವನ್ನು ಹೆಚ್ಚಿಸಲಾಗಿದೆ.
ದೇಗುಲಕ್ಕೆ ಬರುವ ಭಕ್ತರು ಯಾವ ಕಾರಣಕ್ಕೂ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯುವಂತಿಲ್ಲ. ಪ್ರತಿಯೊಂದನ್ನೂ ಪಾಲನೆ ಮಾಡಲೇಬೇಕು ಎಂದು ಟಿಟಿಡಿ ಸಲಹೆ ನೀಡಿದೆ. ಆನ್ಲೈನ್ಲ್ಲಿ ಕೂಡ ಕ್ಯೂ ಮಾದರಿಯಲ್ಲೇ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇರಲಿದ್ದು, ಯಾರು ಮೊದಲು ಲಾಗಿನ್ ಆಗುತ್ತಾರೋ ಅವರಿಗೆ ಮೊದಲು ಬುಕ್ಕಿಂಗ್ ಮಾಡಲು ಅವಕಾಶ ಇರುತ್ತದೆ.
ಇದನ್ನೂ ಓದಿ: ಕಾಡುಹಂದಿ ಊರೊಳಗೆ ಬಂದು ಕಾರು ಶೋರೂಮ್ ಸಿಬ್ಬಂದಿ ಮೇಲೆ ಅಟ್ಟಾಡಿಸಿ ಹಲ್ಲೆ ಮಾಡಿದ್ದು ಮಂಗಳೂರಿನಲ್ಲಿ ಮಾರಾಯ್ರೇ!