ತಿರುಪತಿಯಲ್ಲಿ ಶ್ರೀವಾರಿ ಲಡ್ಡು ಪ್ರಸಾದದ ಜೊತೆಗೆ 2021ರ ಕ್ಯಾಲೆಂಡರ್​, ಡೈರಿಯನ್ನೂ ಕೊಡ್ತಿದ್ದಾರೆ

|

Updated on: Dec 12, 2020 | 4:57 PM

ತಿರುಪತಿ ಶ್ರೀಕ್ಷೇತ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರಗಳಲ್ಲಿ ಶೇ. 50 ರಿಯಾಯಿತಿಯೊಂದಿಗೆ ಲಡ್ಡು ಮಾರಾಟ ಪ್ರಾರಂಭ ಮಾಡಲಾಗಿದೆ. ಜೊತೆಗೆ 2021 ಕ್ಯಾಲೆಂಡರ್​, ಡೈರಿ ಸಹ ಲಭಿಸಲಿದೆ.

ತಿರುಪತಿಯಲ್ಲಿ ಶ್ರೀವಾರಿ ಲಡ್ಡು ಪ್ರಸಾದದ ಜೊತೆಗೆ 2021ರ ಕ್ಯಾಲೆಂಡರ್​, ಡೈರಿಯನ್ನೂ ಕೊಡ್ತಿದ್ದಾರೆ
ತಿರುಪತಿ ಲಡ್ಡು
Follow us on

ಹೈದರಾಬಾದ್: ಕೊರೊನಾ ಕಾರಣದಿಂದ ದೇಗುಲದಲ್ಲಿ ಲಡ್ಡು ಪ್ರಸಾದವನ್ನು ಭಕ್ತರಿಗೆ ನೀಡುವುದನ್ನು ನಿಲ್ಲಿಸಿದ್ದ ತಿರುಪತಿ ತಿರುಮಲ ದೇವಸ್ಥಾನ ಇತ್ತೀಚಿನ ದಿನಗಳಲ್ಲಿ ಮತ್ತೆ ಶ್ರೀವಾರಿ ಲಡ್ಡು ಮಾರಾಟ ಪ್ರಾರಂಭ ಮಾಡಿದೆ.

ಇದೀಗ ಜಗದ್ವಿಖ್ಯಾತ ಲಡ್ಡು ಪ್ರಸಾದದ ಜತೆ ಹೊಸ ವರ್ಷದ (2021) ಕ್ಯಾಲೆಂಡರ್​ ಮತ್ತು ಡೈರಿಯನ್ನೂ ದೇಗುಲದ ಆಡಳಿತ ಮಂಡಳಿ ನೀಡಲು ಆರಂಭಿಸಿದೆ.

ತಿರುಪತಿ ಲಡ್ಡು ತನ್ನ ವಿಭಿನ್ನ ರುಚಿಯಿಂದ ಸಿಕ್ಕಾಪಟೆ ಪ್ರಸಿದ್ಧಿ ಪಡೆದಿದೆ. 300 ವರ್ಷಗಳನ್ನು ಪೂರೈಸಿರುವ ಪ್ರಸಾದ ಮಾರಾಟವು ಕರೊನಾ ಕಾರಣದಿಂದ ಸ್ಥಗಿತವಾಗಿತ್ತು. ದೇವಸ್ಥಾನದಲ್ಲಿ ದರ್ಶನವನ್ನೇ ಸ್ಥಗಿತಗೊಳಿಸಿದ್ದರ ಕಾರಣ ಲಡ್ಡು ಮಾರಾಟವೂ ಇರಲಿಲ್ಲ. ಆದ್ರೆ, ತಿರುಪತಿ ಪ್ರಸಾದಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದ ಕಾರಣ, ಮೇ ತಿಂಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರದಲ್ಲಿ ಶೇ. 50 ರಿಯಾಯಿತಿ ದರದಲ್ಲಿ ಲಾಡು ಮಾರಾಟ ಪ್ರಾರಂಭ ಮಾಡಲಾಗಿತ್ತು. ಇದೀಗ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದವರು ಅಲ್ಲಿಯೇ ಲಡ್ಡು ಪ್ರಸಾದವನ್ನೂ ಪಡೆಯಬಹುದಾಗಿದೆ. ಜೊತೆಗೆ 2021 ಕ್ಯಾಲೆಂಡರ್​, ಡೈರಿ ಸಹ ಲಭಿಸಲಿದೆ.

ಹೊಸ ಕೃಷಿ ಕಾಯ್ದೆಗಳನ್ನು ಬಿಟ್ಟುಕೊಡುತ್ತಿಲ್ಲ ಪ್ರಧಾನಿ ಮೋದಿ.. FICCI ಸಭೆಯಲ್ಲಿ ಹೇಳಿದ್ದೇನು?

Published On - 4:53 pm, Sat, 12 December 20