ರಾಜ್‌ಗಢ ಮೇ.21: ಇಂದು ಬೆಳಿಗ್ಗೆ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಖಾಸಗಿ ಬಸ್‌ನೊಂದು ಫ್ಲೈಓವರ್‌ನಿಂದ ಬಿದ್ದು ಇಬ್ಬರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬಸ್ ಶಿವಪುರಿ ಜಿಲ್ಲೆಯ ಪಿಚೋರ್ ಪಟ್ಟಣಕ್ಕೆ ತೆರಳುತ್ತಿದ್ದಾಗ ಮಧ್ಯರಾತ್ರಿ 1.30 ರ ಸುಮಾರಿಗೆ ಪಚೋರ್ ಪಟ್ಟಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ ಎಂದು ಪಚೋರ್ ಪೊಲೀಸ್ ಠಾಣೆಯ ಉಸ್ತುವಾರಿ ಆಕಾಂಶಾ ಶರ್ಮಾ ಹೇಳಿದ್ದಾರೆ.
ಮೃತರಲ್ಲಿ ಒಬ್ಬನನ್ನು ಹರ್ಜತ್ ಸಿಂಗ್ (28) ಎಂದು ಗುರುತಿಸಲಾಗಿದೆ. ಇನ್ನೊಬ್ಬನ್ನು ಇನ್ನು ಪತ್ತೆ ಮಾಡಿಲ್ಲ ಎಂದು ಹೇಳಲಾಗಿದೆ. ಗಾಯಗೊಂಡವರಲ್ಲಿ 19 ಜನರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಇಂದೋರ್‌ನ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಉಳಿದವರು ಶಾಜಾಪುರ, ಬಯೋರಾ ಮತ್ತು ಪಚೋರ್‌ನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಘಟನೆ ನಡೆದ ಸಮಯದಲ್ಲಿ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಪತ್ತೆ ಮಾಡಲು ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ. ಇಬ್ಬರ ವಿರುದ್ಧವು ದೂರ ದಾಖಲಿಸಲಾಗಿದೆ.
ಇದನ್ನೂ ಓದಿ: ಅಪ್ರಾಪ್ತ ಚಾಲಕನಿಂದ ಪ್ರಮಾದ, ಕಾರು ಅಪಘಾತ, ಇಬ್ಬರು ಸಾವು, ಬಾಲಕನ ತಂದೆಯ ಬಂಧನ
ಇನ್ನು ಇಂತಹದೇ ಘಟನೆಯೊಂದು ಮಧ್ಯಪ್ರದೇಶದ ಸಿಯೋನಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆದು 26 ವಿಶೇಷ ಸಶಸ್ತ್ರ ಪಡೆ (ಎಸ್‌ಎಎಫ್) ಸಿಬ್ಬಂದಿ ಸೇರಿದಂತೆ 28 ಮಂದಿ ಗಾಯಗೊಂಡಿದ್ದು, ಮೂರು ಜನ ಸಾವನ್ನಪ್ಪಿದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಿಯೋನಿ ಮಂಡ್ಲಾ ರಾಜ್ಯ ಹೆದ್ದಾರಿಯ ಕಿಯೋಲಾರಿಯ ಧನಗಡ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. 31 ಯೋಧರಿದ್ದ ಬಸ್ ಮಾಂಡ್ಲಾ ಬೆಟಾಲಿಯನ್ ಕ್ಯಾಂಪ್‌ನಿಂದ ಪಾಂಡುರ್ನಾ (ಚಿಂದ್ವಾರ)ಕ್ಕೆ ಹೋಗುತ್ತಿತ್ತು ಎಂದು ಪೊಲೀಸರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ