ಡಬಲ್​​ ಮರ್ಡರ್​ಗೆ ಕಾರಣವಾಯ್ತು ಒಂದು ಚಿಕ್ಕ ಬೈಕ್​ ಅಪಘಾತ; ಇಬ್ಬರು ಯುವಕರನ್ನು ಕೊಂದ ಆರೋಪಿಗಳಲ್ಲಿ ಒಬ್ಬ ಬಾಲಕ

|

Updated on: Mar 16, 2021 | 4:37 PM

Road Rage: ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನಾಧರಿಸಿ ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಅವರ ಬೈಕ್​, ಕೊಲೆಗೆ ಉಪಯೋಗಿಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಹೇಳಿದ್ದಾರೆ.

ಡಬಲ್​​ ಮರ್ಡರ್​ಗೆ ಕಾರಣವಾಯ್ತು ಒಂದು ಚಿಕ್ಕ ಬೈಕ್​ ಅಪಘಾತ; ಇಬ್ಬರು ಯುವಕರನ್ನು ಕೊಂದ ಆರೋಪಿಗಳಲ್ಲಿ ಒಬ್ಬ ಬಾಲಕ
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಹೊಡೆದಾಟದ ದೃಶ್ಯ
Follow us on

ದೆಹಲಿ: ಒಂದು ಸಣ್ಣ ಅಪಘಾತ.. ಇಬ್ಬರ ಕೊಲೆಗೆ ಕಾರಣವಾಯಿತು. ದೆಹಲಿಯ ಪಶ್ಚಿಮ ವಿಹಾರದಲ್ಲಿ ನಡೆದ ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅವರಿಬ್ಬರನ್ನು ಹತ್ಯೆ ಮಾಡಿದ್ದು ಇನ್ನಿಬ್ಬರು ಹುಡುಗರು. ಅದರಲ್ಲಿ ಒಬ್ಬ ಇನ್ನೂ ಬಾಲಕ ! ಸೋಮವಾರ (ಮಾರ್ಚ್​ 15)ರಂದು ನಡೆದ ಭೀಕರ ಘಟನೆ, ಸ್ಥಳದಲ್ಲಿದ್ದ ಸಿಸಿಟಿವ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಇಬ್ಬರೂ ಆರೋಪಿಗಳನ್ನೂ ಬಂಧಿಸಿದ್ದಾರೆ. ಅದರಲ್ಲಿ ಒಬ್ಬಾತ ಬಾಲಾಪರಾಧಿ ಎಂದು ಅವರೇ ಮಾಹಿತಿಯನ್ನೂ ನೀಡಿದ್ದಾರೆ.

ಮೃತ ಯುವಕರು ರೋಹಿತ್​ ಅಗರ್​​ವಾಲ್​ (23) ಮತ್ತು ಘನಶ್ಯಾಮ್​ (20). ಆರೋಪಿಗಳಲ್ಲಿ ಒಬ್ಬ ಪ್ರದೀಪ್​ ಕೊಹ್ಲಿ(19) ಇನ್ನೊಬ್ಬಾತನ ಹೆಸರು ಬಹಿರಂಗವಾಗಿಲ್ಲ. ಒಂದು ಬೈಕ್​​ನಲ್ಲಿ ರೋಹಿತ್​ ಅಗರ್​ವಾಲ್​ ಮತ್ತು ಘನಶ್ಯಾಮ್​ ಇದ್ದರೆ, ಇನ್ನೊಂದು ಮೋಟಾರ್​ಸೈಕಲ್​​ನಲ್ಲಿ ಪ್ರದೀಪ್​ ಮತ್ತು ಆತನ ಸ್ನೇಹಿತ ಇದ್ದರು. ಇವರಿಬ್ಬರ ವಾಹನಗಳು ಪಶ್ಚಿಮವಿಹಾರದ ಬಳಿ ಒಂದಕ್ಕೊಂದು ಡಿಕ್ಕಿಯಾಗಿವೆ. ಅದಾದ ನಂತರ ಎರಡೂ ಕಡೆಯ ಹುಡುಗರೂ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ರೋಹಿತ್​-ಘನಶ್ಯಾಮ್​ ಅಲ್ಲಿಂದ ತೆರಳಿದ್ದಾರೆ.

ಆದರೆ ಪ್ರದೀಪ್​ ಮತ್ತು ಆತನ ಸಹಚರ ಅಷ್ಟಕ್ಕೇ ಸುಮ್ಮನಾಗದೆ ತಮ್ಮ ಬೈಕ್​​ನಲ್ಲಿ ಅವರನ್ನು ಸುಮಾರು 1 ಕಿಮೀ ದೂರ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಉದ್ಯೋಗ ವಿಹಾರ್​ ಮೆಟ್ರೋ ಸ್ಟೇಶನ್​ ಬಳಿ ಮತ್ತೆ ರೋಹಿತ್​ ಬೈಕ್​ನ್ನು ಅಡ್ಡಗಟ್ಟಿದ್ದಾರೆ. ಅವರಿಬ್ಬರಿಗೂ ಚಾಕುವಿನಿಂದ ಚುಚ್ಚಿ ಅಲ್ಲಿಂದ ಹೋಗಿದ್ದಾರೆ. ಗಾಯಗೊಂಡು ಬಿದ್ದಿದ್ದ ಅವರನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಿದಾಗ ಇವರಿಬ್ಬರೂ ಗಾಯಗೊಂಡು ಬಿದ್ದಿದ್ದರು. ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಷ್ಟರಲ್ಲಾಗಲೇ ಜೀವ ಹೋಗಿತ್ತು ಎಂದು ಪೊಲೀಸ್ ಉಪ ಆಯುಕ್ತ ಎ. ಕೊವಾನ್ ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನಾಧರಿಸಿ ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಒಂದು ಚಿಕ್ಕ ಅಪಘಾತ ಡಬಲ್​ ಮರ್ಡರ್​ಗೆ ಕಾರಣವಾಗಿದ್ದು ನಿಜಕ್ಕೂ ಖೇದಕರ. ಆರೋಪಿಗಳ ಬೈಕ್​, ಕೊಲೆಗೆ ಉಪಯೋಗಿಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸ್ ಆಯುಕ್ತ ಹೇಳಿದ್ದಾರೆ.

ಇದನ್ನೂ ಓದಿ: ತಂದೆ ಅಂತ್ಯಸಂಸ್ಕಾರಕ್ಕೆ ಹೂವು ತರಲು ಹೋದ ಮಗ, ಸಂಬಂಧಿ ಸಾವು: ಕೆಎಸ್ಆರ್​ಟಿಸಿ ಬಸ್ – ಬೈಕ್​ ನಡುವೆ ಅಪಘಾತ

ಅಶ್ಲೀಲ ಸಿಡಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ; ಕನ್ನಡಿಗರನ್ನು ನಿಂದಿಸಿದ್ದಕ್ಕಾಗಿ ರಮೇಶ್​ ಜಾರಕಿಹೊಳಿ ವಿರುದ್ಧ ದೂರು ದಾಖಲು

ಹನಿಮೂನ್​ಗೆ ಗೋವಾಗೇ ಏಕೆ ಹೋಗ್ತಾರೆ? ನೀವೂ ತಿಳಿದುಕೊಳ್ಳಿ ಹನಿಮೂನ್ ಬೀಚ್​ನ ವಿಶೇಷತೆ

Published On - 4:25 pm, Tue, 16 March 21