ಸಿಸೋಡಿಯಾ,ಜೈನ್ ರಾಜೀನಾಮೆ; ಶೀಘ್ರದಲ್ಲೇ ದೆಹಲಿ ಸಚಿವ ಸಂಪುಟಕ್ಕೆ ಇಬ್ಬರು ಸಚಿವರ ಸೇರ್ಪಡೆ: ಎಎಪಿ

|

Updated on: Feb 28, 2023 | 9:35 PM

ತಮ್ಮ ದುಡಿಮೆಗೆ ಹೆಸರಾದ ಮತ್ತು ಜನಪ್ರಿಯರಾಗಿದ್ದ ನಾಯಕರು ಸಿಕ್ಕಿಬಿದ್ದಿರುವುದು ಇಡೀ ದೇಶಕ್ಕೆ ಅತ್ಯಂತ ದುರದೃಷ್ಟಕರ. ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವ ರಾಜ್ಯ ಸರ್ಕಾರಗಳನ್ನು ಕೇಂದ್ರ ಗುರಿಯಾಗಿರಿಸಿಕೊಳ್ಳುತ್ತಿದೆ ಎಂದ ಆಪ್ ವಕ್ತಾರ.

ಸಿಸೋಡಿಯಾ,ಜೈನ್ ರಾಜೀನಾಮೆ; ಶೀಘ್ರದಲ್ಲೇ ದೆಹಲಿ ಸಚಿವ ಸಂಪುಟಕ್ಕೆ ಇಬ್ಬರು ಸಚಿವರ ಸೇರ್ಪಡೆ: ಎಎಪಿ
ಸೌರಭ್ ಭಾರದ್ವಾಜ್
Follow us on

ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸಚಿವ ಸಂಪುಟದಿಂದ ಜೈಲು ಪಾಲಾಗಿರುವ ಇಬ್ಬರು ನಾಯಕರು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ವಿವರಣೆ ನೀಡಿದ ಆಮ್ ಆದ್ಮಿ ಪಕ್ಷ (AAP)  ದೆಹಲಿ ಸರ್ಕಾರದ ನಡೆಯುತ್ತಿರುವ ಕೆಲಸದ ಮೇಲೆ ಪರಿಣಾಮ ಬೀರದಂತೆ ಮನೀಶ್ ಸಿಸೋಡಿಯಾ (Manish Sisodia)  ಮತ್ತು ಸತ್ಯೇಂದ್ರ ಜೈನ್ (Satyendar Jain) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಂಗಳವಾರ ಹೇಳಿದೆ.

ದೆಹಲಿಯಲ್ಲಿ ಸಣ್ಣ ಸಚಿವ ಸಂಪುಟವಿದೆ. ಸಿಎಂ ಅವರ ಸಂಪುಟದಲ್ಲಿ ಆರು ಸಚಿವರಿದ್ದು, ನಮಗೆಲ್ಲರಿಗೂ ತಿಳಿದಿರುವಂತೆ, ಬಹುಪಾಲು ನಿರ್ಣಾಯಕ ಖಾತೆಗಳು ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ಬಳಿ ಇದ್ದವು ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅದೇ ವೇಳೆ ಇಬ್ಬರು ನೂತನ ಸಚಿವರನ್ನು ಶೀಘ್ರದಲ್ಲೇ ಸಚಿವ ಸಂಪುಟಕ್ಕೆ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮನೀಶ್ ಸಿಸೋಡಿಯಾ ನಿರ್ವಹಿಸಿದ್ದ 18 ಇಲಾಖೆಗಳ ಜವಾಬ್ದಾರಿಯನ್ನು ಇಬ್ಬರು ಸಚಿವರಿಗೆ ಹಂಚಿದ ಕೇಜ್ರಿವಾಲ್

ಕೆಲಸದ ವಿಷಯದಲ್ಲಿ ಹಿಂದೆ ಬೀಳುವುದನ್ನು ತಪ್ಪಿಸಲು, ಶೀಘ್ರದಲ್ಲೇ ಇಬ್ಬರು ಹೊಸ ಸಚಿವರನ್ನು ನೇಮಿಸಲಾಗುವುದು ಎಂದ ಭಾರದ್ವಾಜ್,‘ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ’ ರಾಜ್ಯ ಸರ್ಕಾರಗಳನ್ನು ಕೇಂದ್ರ ‘ಟಾರ್ಗೆಟ್’ ಮಾಡುತ್ತಿದೆ ಎಂದು ಆರೋಪಿಸಿದರು. ತಮ್ಮ ದುಡಿಮೆಗೆ ಹೆಸರಾದ ಮತ್ತು ಜನಪ್ರಿಯರಾಗಿದ್ದ ನಾಯಕರು ಸಿಕ್ಕಿಬಿದ್ದಿರುವುದು ಇಡೀ ದೇಶಕ್ಕೆ ಅತ್ಯಂತ ದುರದೃಷ್ಟಕರ. ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವ ರಾಜ್ಯ ಸರ್ಕಾರಗಳನ್ನು ಕೇಂದ್ರ ಗುರಿಯಾಗಿರಿಸಿಕೊಳ್ಳುತ್ತಿದೆ ಎಂದಿದ್ದಾರೆ ಅವರು.

2021-22ಕ್ಕೆ ಈಗ ರದ್ದಾದ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಭಾನುವಾರ ಸಂಜೆ ಸಿಬಿಐ ಬಂಧಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ