ಉಮೇಶ್ ಪಾಲ್(Umesh Pal) ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್ ಮೊಹಮ್ಮದ್ ಗುಲಾಮ್ನಲ್ಲಿ ಪ್ರಯಾಗ್ರಾಜ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಹಿಂದೆ ಮಾರ್ಚ್ 5 ರಂದು ಪ್ರಯಾಗ್ರಾಜ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಪೊಲೀಸರು ಆರೋಪಿ ವಿಜಯ್ ಕುಮಾರ್ ಅಲಿಯಾಸ್ ಉಸ್ಮಾನ್ ಚೌಧರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅವರ ಫೋನ್ ಪತ್ತೆಯಾದ ಬಳಿಕ ಅಜ್ಮೀರ್ನ ದರ್ಗಾ ಬಳಿ ಗುಲಾಮ್ನ ಅಡಗುತಾಣದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಮಾಹಿತಿ ಪ್ರಕಾರ, ಗುಲಾಮ್ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗುತ್ತಿದೆ, ಏತನ್ಮಧ್ಯೆ, ಜೈಲಿನಲ್ಲಿರುವ ದರೋಡೆಕೋರ ಅತೀಕ್ ಅಹ್ಮದ್ ಅವರನ್ನು ವಿಚಾರಣೆ ಮಾಡಲು ಉತ್ತರ ಪ್ರದೇಶ ಪೊಲೀಸರು ಭಾನುವಾರ ಸಬರಮತಿ ಜೈಲಿಗೆ ತಲುಪಿದ್ದಾರೆ. ಅವರನ್ನು ಮತ್ತೆ ಪ್ರಯಾಗ್‌ರಾಜ್‌ಗೆ ಕರೆತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
2005ರ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್‌ನನ್ನು ವಿಜಯ್‌ಕುಮಾರ್ ಅಲಿಯಾಸ್ ಉಸ್ಮಾನ್ ಚೌಧರಿ ಎಂಬಾತ ಕೊಲೆ ಮಾಡಿದ್ದ. ಪ್ರತ್ಯಕ್ಷದರ್ಶಿ ಉಮೇಶ್ ಪಾಲ್ ಅವರ ಮೇಲೆ ದಾಳಿ ಮಾಡಲು ದಾಳಿಕೋರರು ಬಳಸಿದ ಬಿಳಿ ಬಣ್ಣದ ಎಸ್‌ಯುವಿ ಕಾರಿನ ಚಾಲಕ ಅರ್ಬಾಜ್‌ನನ್ನು ಗುಪ್ತಚರ ಮಾಹಿತಿಯ ನಂತರ ಪೊಲೀಸ್ ತಂಡಗಳು ಸುತ್ತುವರೆದಿತ್ತು ಎಂದು ಉಪ ಪೊಲೀಸ್ ಆಯುಕ್ತ ನವೇಂದು ಕುಮಾರ್ ತಿಳಿಸಿದ್ದರು.
ಮತ್ತಷ್ಟು ಓದಿ: ಬೆಂಗಳೂರು: ಕೈ ನೋಡಿ ಭವಿಷ್ಯ ಹೇಳ್ತೀನಿ ಎಂದು ವ್ಯಂಗ್ಯ. ಸಿಟ್ಟಿನಿಂದ ಸ್ನೇಹಿತನನ್ನೇ ಹತ್ಯೆಗೈದ
ಧೂಮಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರೂ ಪಾರ್ಕ್‌ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ತನ್ನನ್ನು ಸುತ್ತುವರೆದಿರುವ ಪೊಲೀಸರ ಮೇಲೆ ಅರ್ಬಾಜ್ ಗುಂಡು ಹಾರಿಸಿದ್ದು ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದು ಈ ವೇಳೆ ಅರ್ಬಾಜ್ ಗಾಯಗೊಂಡಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾಗಿ ಘೋಷಿಸಿದರು ಎಂದು ನವೇಂದು ಕುಮಾರ್ ತಿಳಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Sun, 26 March 23