ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (National Research Foundation) ಮಸೂದೆ 2023 ಅನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಎನ್ಆರ್ಎಫ್ ರಚಿಸಲು ಹಾದಿ ಸುಗಮವಾಗಲಿದ್ದು, ಇದು ಸಂಶೋಧನೆ ಮತ್ತು ಅಭಿವೃದ್ಧಿ (R&D)ಯನ್ನು ಅಭಿವೃದ್ಧಿ ಪಡಿಸಲಿದೆ. ಅದೇ ವೇಳೆ ಭಾರತದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಶೋಧನಾ ಕೇಂದ್ರ ಮತ್ತು ಆರ್&ಡಿಗೆ ಪ್ರೋತ್ಸಾಹ ನೀಡಲಿದೆ. ಮಸೂದೆಯು ಸಂಸತ್ತಿನಲ್ಲಿ ಅನುಮೋದನೆಯ ನಂತರ, ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಶಿಫಾರಸುಗಳ ಪ್ರಕಾರ ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯ ಉನ್ನತ ಮಟ್ಟದ ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸಲು ಉನ್ನತ ಸಂಸ್ಥೆಯಾದ ಎನ್ಆರ್ಎಫ್ ಅನ್ನು ಸ್ಥಾಪಿಸುತ್ತದೆ. ಇದರ ಒಟ್ಟು ಅಂದಾಜು ವೆಚ್ಚ ಐದು ವರ್ಷಗಳಲ್ಲಿ (2023-28) 50,000 ಕೋಟಿ ರೂ. ಆಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು (DST) ಎನ್ಆರ್ಎಫ್ನ ಆಡಳಿತ ವಿಭಾಗವಾಗಿದ್ದು, ವಿಭಾಗಗಳಾದ್ಯಂತ ಪ್ರಖ್ಯಾತ ಸಂಶೋಧಕರು ಮತ್ತು ವೃತ್ತಿಪರರು ಇರಲಿದ್ದಾರೆ. ಎನ್ಆರ್ಎಫ್ನ ವ್ಯಾಪ್ತಿಯು ಎಲ್ಲಾ ಸಚಿವಾಲಯಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಧಾನ ಮಂತ್ರಿ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮತ್ತು ಕೇಂದ್ರ ಶಿಕ್ಷಣ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಎನ್ಆರ್ಎಫ್ನ ಕಾರ್ಯನಿರ್ವಹಣೆಯನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಅಧ್ಯಕ್ಷತೆಯ ಕಾರ್ಯಕಾರಿ ಮಂಡಳಿಯು ನಿರ್ವಹಿಸುತ್ತದೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಯಾರು? ಆಕೆ ವಿರುದ್ಧ ಟ್ರೋಲ್ ದಾಳಿ ನಡೆದಿದ್ದೇಕೆ?
ಎನ್ಆರ್ಎಫ್, ಉದ್ಯಮ, ಶೈಕ್ಷಣಿಕ, ಮತ್ತು ಸರ್ಕಾರಿ ಇಲಾಖೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗವನ್ನು ರೂಪಿಸುವುದು ಮಾತ್ರವಲ್ಲದೆ ನೀತಿಯ ಚೌಕಟ್ಟನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.ಮಸೂದೆಯು 2008 ರಲ್ಲಿ ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲಾದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿಯನ್ನು (SERB) ರದ್ದುಗೊಳಿಸಿ ಅದನ್ನು NRFಗೆ ಸೇರಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ