ಪ್ರತಿಭಟನಾ ನಿರತ ಪಂಜಾಬ್​ ರೈತರ ಜೊತೆ ಕೃಷಿ ಸಚಿವ ತೋಮರ್​ ಭೋಜನ

|

Updated on: Dec 30, 2020 | 4:19 PM

ದೆಹಲಿಯಲ್ಲಿರುವ ವಿಜ್ಞಾನ ಭವನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಹಾಗೂ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಹಾಗೂ ಇಂದು ರೈತರ ಜೊತೆ ಊಟ ಮಾಡಿದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರತಿಭಟನಾ ನಿರತ ಪಂಜಾಬ್​ ರೈತರ ಜೊತೆ ಕೃಷಿ ಸಚಿವ ತೋಮರ್​ ಭೋಜನ
ರೈತ ನಾಯಕರ ಜೊತೆ ಕೇಂದ್ರ ಸಚಿವರು
Follow us on

ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸತತ ಐದು ಬಾರಿ ಕೇಂದ್ರ ಸರ್ಕಾರ ರೈತರ ಜೊತೆ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂದು ಕೇಂದ್ರದ ಜೊತೆ ಸರ್ಕಾರ ಏಳನೆ ಸುತ್ತಿನ ಮಾತುಕತೆ ನಡೆಸುತ್ತಿದೆ. ಊಟದ ಬಿಡುವಿನ ವೇಳೆ ಕೇಂದ್ರ ಸಚಿವರು ರೈತರ ಜೊತೆ ಊಟ ಮಾಡಿದ್ದು ವಿಶೇಷವಾಗಿತ್ತು.

ದೆಹಲಿಯಲ್ಲಿರುವ ವಿಜ್ಞಾನ ಭವನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಹಾಗೂ ರೈಲ್ವೆ ಸಚಿವ ಪಿಯೂಷ್​ ಗೋಯಲ್​  ರೈತರ ಜೊತೆ ಊಟ ಮಾಡಿದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೇಂದ್ರ ಸರ್ಕಾರದ ನಡುವೆ 5 ಸಭೆಗಳು ನಡೆದಿವೆ. ಗೃಹ ಸಚಿವ ಅಮಿತ್ ಶಾ ಅವರು ಕೂಡ ಒಮ್ಮೆ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆಯನ್ನ ನಡೆಸಿದ್ದಾರೆ. ಅವೆಲ್ಲ ವಿಫಲವಾಗಿದ್ದು, ರೈತರು ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಹೋರಾಟ ನಿರತ ರೈತರ ಬೇಡಿಕೆಗಳು ಏನೇನು..?
ಕೇಂದ್ರದ 3 ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು. ಕೃಷಿ ಆಯೋಗದ ಶಿಫಾರಸು ಪ್ರಕಾರ ಕೃಷಿ ಉತ್ಪನ್ನದ ಬೆಂಬಲ ಬೆಲೆ ನೀಡಿಕೆಗೆ ಕಾನೂನು ಬದ್ಧ ಗ್ಯಾರಂಟಿ ನೀಡಬೇಕು. NCR ಹಾಗೂ ಸುತ್ತಲಿನ ಪ್ರದೇಶದ ವಾಯುಗುಣಮಟ್ಟ ನಿರ್ವಹಣೆ ಸುಗ್ರೀವಾಜ್ಞೆಗೆ ತಿದ್ದುಪಡಿ ತರಬೇಕು. ರೈತರಿಗೆ ಈ‌ ಕಾಯಿದೆಯಡಿ ದಂಡವನ್ನು ವಿಧಿಸಬಾರದು. ರೈತರ ಹಿತ ರಕ್ಷಣೆಗೆ ವಿದ್ಯುತ್ ತಿದ್ದುಪಡಿ ಮಸೂದೆ 2020 ಕ್ಕೆ ತಿದ್ದುಪಡಿ ಸೇರಿದಂತೆ ಇತರ ಬೇಡಿಕೆಗಳನ್ನ ರೈತರು ಸರ್ಕಾರದ ಮುಂದಿಟ್ಟಿದ್ದಾರೆ.

ಮೇಲೆ ವಿವರಿಸಿದ 4 ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕೆಂದು ರೈತ ಸಂಘಟನೆಗಳಿಂದ ಅಜೆಂಡಾ ಫಿಕ್ಸ್ ಆಗಿದೆ‌. ಅಜೆಂಡಾವನ್ನ ಕೇಂದ್ರ ಕೃಷಿ ಇಲಾಖೆಗೆ ರವಾನಿಸಿದ್ದಾರೆ. ಇಂದಿನ ಸಭೆಗೂ ಮುನ್ನಾ ಗೃಹ ಸಚಿವ ಅಮಿತ್ ಶಾ ಜೊತೆ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್, ರೇಲ್ವೆ ಸಚಿವ ಪಿಯೂಷ್ ಗೋಯಲ್ ಚರ್ಚೆ ನಡೆಸಿದ್ದಾರೆ‌. ರೈತರ ಮನವೊಲಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ರೈತರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟ ಇಂದಿನ ಸಭೆಯ ಬಳಿಕ ಕೊನೆಯಾಗಲಿದೆಯಾ ಅಥವಾ ಮತ್ತೆ ಮುಂದುವರಿಯಲಿದೆಯಾ ಅನ್ನೋದನ್ನ ಕಾದು ನೋಡ್ಬೇಕಿದೆ.

ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ: 7ನೇ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧತೆ, ಇಂದಾದರೂ ಈಡೇರುತ್ತಾ ರೈತರ ಬೇಡಿಕೆಗಳು?

Published On - 4:19 pm, Wed, 30 December 20