ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಯನಾಡ್‌ನಲ್ಲಿ ಉಳಿದರೆ ಉತ್ತರ ಪ್ರದೇಶದ ಅಮೇಠಿ ಸಂಸದರಾಗಿದ್ದಾಗ ಆದ ಗತಿಯೇ ಆಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಮೊದಲು ರಾಹುಲ್ ಗಾಂಧಿ ಅವರು ವಯನಾಡ್ (Wayanad )ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕನ ಮನವಿಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಕಾಯ್ದಿರಿಸಿದೆ. ತಿರುವನಂತಪುರಂನಲ್ಲಿ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕೇರಳ ಘಟಕವು ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿಯನ್ನು ಅಮೇಠಿಯಿಂದ ಹೊರ ಕಳುಹಿಸಿದ ಅದೃಷ್ಟ ಹೊಂದಿದ್ದೇನೆ ಎಂದು ಹೇಳಿದರು.
ಅದಕ್ಕೆ ಕಾರಣ ಅವರು ಅಮೇಠಿಯ ಸಂಸದರಾಗಿದ್ದಾಗ ಅಲ್ಲಿನ ಶೇ.80 ರಷ್ಟು ಜನರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಜಿಲ್ಲಾಧಿಕಾರಿ ಕಚೇರಿ, ಅಗ್ನಿಶಾಮಕ ಸ್ಟೇಷನ್, ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವಾಗಲಿ, ಎಕ್ಸ್ ರೇ ಯಂತ್ರವಾಗಲಿ ಇರಲಿಲ್ಲ. ಅವರು ಹೋದ ನಂತರ, ಈ ಎಲ್ಲಾ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಅಲ್ಲಿ ಸಾಧ್ಯವಾಯಿತು. ಆದ್ದರಿಂದ, ಅವರು ವಯನಾಡಿನಲ್ಲಿ ಉಳಿದುಕೊಂಡರೆ, ಅಮೇಠಿಯಂತೆಯೇ ಇದೂ ಆಗಲಿದೆ. ಆದ್ದರಿಂದ, ಅವರು ಇಲ್ಲಿ ಉಳಿಯುವುದಿಲ್ಲ ಎಂದು ನೀವು (ಜನರು) ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹೇಳಿದ್ದಾರೆ.
ನಾನು ದೆಹಲಿ ಅಥವಾ ಅಮೇಠಿಯಲ್ಲಿದ್ದರೂ, ವಯನಾಡಿನ ಬಗ್ಗೆ ಹೆಚ್ಚು ಚಿಂತಿಸುತ್ತೇನೆ. ಆದ್ದರಿಂದ ಇಲ್ಲಿನ250 ಅಂಗನವಾಡಿಗಳನ್ನು ‘ಸಕ್ಷಮ್’ (ಸಮರ್ಥ) ಅಂಗನವಾಡಿಗಳಾಗಿ ಪರಿವರ್ತಿಸಲು ನಿರ್ಧರಿಸಿದ್ದೇನೆ.
ಸಕ್ಷಮ್ ಅಂಗನವಾಡಿಯು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಂಗನವಾಡಿಗಳು ಆರು ಸೇವೆಗಳ ಪ್ಯಾಕೇಜ್ ಅನ್ನು ಒದಗಿಸುತ್ತವೆ. ಇವು ಅರ್ಹ ಫಲಾನುಭವಿಗಳಿಗೆ ಪೂರಕ ಪೋಷಣೆ, ಪೂರ್ವ ಶಾಲಾ ಅನೌಪಚಾರಿಕ ಶಿಕ್ಷಣ, ಪೋಷಣೆ ಮತ್ತು ಆರೋಗ್ಯ ಶಿಕ್ಷಣ, ರೋಗನಿರೋಧಕ, ಆರೋಗ್ಯ ತಪಾಸಣೆ ಮತ್ತು ಇತರ ಸೇವೆಗಳನ್ನು ಒದಗಿಸುತ್ತವೆ
#WATCH | Thiruvananthapuram: It was me who sent him (Rahul Gandhi) from UP to Wayanad. When he was MP there, 80% of people had no electricity, no fire station, no medical college, no KV school. Once he left, all these facilities became possible. If he stays here (in Wayanad), it… pic.twitter.com/wJcyG7KWwn
— ANI (@ANI) May 22, 2023
ಮಹಿಳೆಯರ ಸುರಕ್ಷತೆ, ಜನರ ಆರ್ಥಿಕ ಭದ್ರತೆ ಮತ್ತು ರಾಜ್ಯದ ನಾಗರಿಕರ ಸಾಮಾಜಿಕ ಕಲ್ಯಾಣಕ್ಕಾಗಿ ಕೇರಳದಲ್ಲಿ ಜಾರಿಗೊಳಿಸಲಾದ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು, ಉಪಕ್ರಮಗಳು, ನೀತಿಗಳ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಕೊರತೆಯಿದೆ ಎಂದಿದ್ದಾರೆ. ಇತ್ತೀಚೆಗೆ ರಾಜ್ಯದ ತಾಲೂಕು ಆಸ್ಪತ್ರೆಯಲ್ಲಿ ಯುವ ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಸಚಿವರು, ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ಅಚ್ಚರಿ ತಂದಿದೆ ಎಂದರು.
ಇದನ್ನೂ ಓದಿ: ಭಾರತದಲ್ಲಿ ಇದುವರೆಗೆ ನಡೆದಿರುವ ದೊಡ್ಡ ಕಳ್ಳತನಗಳು ಇವು, ಎಲ್ಲ ನೂರಾರು ಕೋಟಿ ಕಳ್ಳತನಗಳೇ!
ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳನ್ನು ಕೇಳಿದಾಗ, ವ್ಯವಸ್ಥೆಗಳನ್ನು ಬಲಪಡಿಸಲು ಆರ್ಥಿಕ ನೆರವು ಸೇರಿದಂತೆ ಇಷ್ಟೆಲ್ಲಾ ಕೇಂದ್ರ ಸಹಾಯ ಮಾಡಿದರೂ, ಮಹಿಳೆಯರನ್ನು ಖಾತ್ರಿಪಡಿಸುವ ಉದ್ದೇಶದ ಕೊರತೆ ಯಾಕಿದೆ ಎಂದು ಸಚಿವೆ ಕೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ